Amazon Great Indian Festival Sale ಅ.17ರಿಂದ ಆರಂಭ

"ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್" ಅಕ್ಟೋಬರ್ 17ನೇ ತಾರೀಕಿನಿಂದ ಆರಂಭಿಸಲಾಗುವುದು ಎಂದು ಮಂಗಳವಾರ ಅಮೆಜಾನ್ ಘೋಷಣೆ ಮಾಡಿದೆ. ಈ ಮಾರಾಟದ ಕೊನೆ ದಿನಾಂಕ ಯಾವುದು ಎಂಬ ಬಗ್ಗೆ ಇನ್ನೂ ಅಮೆಜಾನ್ ನಿಂದ ಮಾಹಿತಿ ಸಿಕ್ಕಿಲ್ಲ. ಫ್ಲಿಪ್ ಕಾರ್ಟ್ ನಿಂದ "ಬಿಗ್ ಬಿಲಿಯನ್ ಡೇಸ್" ಅಕ್ಟೋಬರ್ 16ರಿಂದ 21ನೇ ತಾರೀಕಿನ ತನಕ ನಡೆಯುತ್ತದೆ.

ಫ್ಲಿಪ್ ಕಾರ್ಟ್ ನಿಂದ ಬಿಗ್ ಬಿಲಿಯನ್ ಡೇಸ್ ಆರಂಭವಾದ ಒಂದು ದಿನದ ನಂತರ ಅಮೆಜಾನ್ ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಶುರುವಾಗುತ್ತದೆ. ಪ್ರೈಮ್ ಸದಸ್ಯರಿಗಾಗಿ ಅಮೆಜಾನ್ ನಿಂದ 24 ಗಂಟೆ ಮುಂಚಿತವಾಗಿ, ಅಕ್ಟೋಬರ್ 16ರಿಂದ ಮಾರಾಟ ಆರಂಭವಾಗುತ್ತದೆ. ಎಚ್ ಡಿಎಫ್ ಸಿ ಬ್ಯಾಂಕ್ ಜತೆಗೆ ಅಮೆಜಾನ್ ಸಹಭಾಗಿತ್ವ ವಹಿಸಿದೆ. ಎಚ್ ಡಿಎಫ್ ಸಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡಿದಲ್ಲಿ ತಕ್ಷಣವೇ 10% ರಿಯಾಯಿತಿ ಸಿಗುತ್ತದೆ.

Amazon Great Indian Festival Sale ಅ.17ರಿಂದ ಆರಂಭ

ಮಾಧ್ಯಮಗಳ ವರದಿ ಪ್ರಕಾರ, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಒನ್ ಪ್ಲಸ್ ಟಿವಿ ಮಾರಾಟ ಆರಂಭವಾಗುವುದು. ಇದರ ಜತೆಗೆ ಸ್ಯಾಮ್ಸಾಂಪ್, ಮಿನಿಸೋ ಹಾಗೂ ಫಾಸಿಲ್ ಉತ್ಪನ್ನಗಳ ಮಾರಾಟ ಕೂಡ ನಡೆಯಲಿದೆ. ಕಳೆದ ವಾರವಷ್ಟೇ ಫ್ಲಿಪ್ ಕಾರ್ಟ್ ನಿಂದ ವಾರ್ಷಿಕ ಮಾರಾಟದ ಬಗ್ಗೆ ಘೋಷಣೆ ಮಾಡಲಾಗಿತ್ತು.

ಫ್ಲಿಪ್ ಕಾರ್ಟ್ ಪ್ರಕಾರ, ಬಿಗ್ ಬಿಲಿಯನ್ ಡೇಸ್ ನಲ್ಲಿ ಪ್ರತಿ ಗಂಟೆ, ಎಲ್ಲ ವಿಭಾಗಗಳಲ್ಲೂ ಆಫರ್ ಗಳು ಇರುತ್ತವೆ. ಫ್ಲಿಪ್ ಕಾರ್ಟ್ ಪ್ಲಸ್ ಗ್ರಾಹಕರಿಗೆ ಅಕ್ಟೋಬರ್ 15ರಿಂದಲೇ ಈ ಕೊಡುಗೆ ದೊರೆಯಲು ಆರಂಭವಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+