Amazon Great Summer Sale 2025: ಭರ್ಜರಿ ಆಫರ್ ಗಳ ಸುರಿಮಳೆ... ಹೌದು,ದೇಶದ ಪ್ರಮುಖ ಇ-ಕಾಮರ್ಸ್ ವೇದಿಕೆಯಾದ ಅಮೆಜಾನ್(Amazon) ತನ್ನ ಬಹುನಿರೀಕ್ಷಿತ "ಗ್ರೇಟ್ ಸಮ್ಮರ್ ಸೇಲ್ 2025"(Amazon Great Summer Sale 2025) ಅನ್ನು ಶೀಘ್ರದಲ್ಲೇ ಆರಂಭಿಸಲು ಸಜ್ಜಾಗಿದೆ.
ಕಂಪನಿಯ ಅಧಿಕೃತ ಮಾಹಿತಿಯ ಪ್ರಕಾರ, ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನ ಬೃಹತ್ ಮಾರಾಟವು ಇದೇ ಮೇ 1 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಾದ್ಯಂತ ಆರಂಭವಾಗಲಿದೆ.ಅದರಲ್ಲೂ ವಿಶೇಷವಾಗಿ, ಅಮೆಜಾನ್ ಪ್ರೈಮ್ ಸದಸ್ಯರಿಗೆ(amazon prime membership) ಡವಲ್ ಧಮಾಕಾ ಆಫರ್ ಗಳು ಸಿಗುತ್ತವೆ.

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ಭರ್ಜರಿಯ ರಿಯಾತಿಯನ್ನು ಘೋಷಣೆ ಮಾಡಲಿದೆ. ಉದಾಹರಣೆಗೆ, ಅಮೆಜಾನ್‌ನಲ್ಲಿರುವ ಮೊಬೈಲ್ ಫೋನ್‌ಗಳು ಮತ್ತು ಪರಿಕರಗಳು ಮಾರಾಟದ ಸಮಯದಲ್ಲಿ ಶೇಕಡಾ 40 ರಷ್ಟು ರಿಯಾಯಿತಿಯನ್ನು ಪಡೆಯುತ್ತವೆ ಎಂದು ಕಂಪನಿಯು ತಿಳಿಸಿದೆ.
ಈಗ ದಿನಾಂಕ ಮುಗಿದ ನಂತರ, ಅಮೆಜಾನ್ ಇಂಡಿಯಾ ಪ್ರೈಮ್ ಸದಸ್ಯರಿಗೆ ಎಲ್ಲಾ ಡೀಲ್‌ಗಳಿಗೆ 12 ಗಂಟೆಗಳ ಮುಂಚಿತವಾಗಿ ಪ್ರವೇಶವನ್ನು ಪಡೆಯುತ್ತದೆ ಎಂದು ಹೇಳಿದೆ. ಇದರರ್ಥ, ಪಾವತಿಸಿದ ಬಳಕೆದಾರರು ಮಧ್ಯರಾತ್ರಿಯಿಂದ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿ ಮಾಡಬಹುದು.
ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ, ಗ್ರಾಹಕರಿಗೆ ಆಕರ್ಷಕ ರಿಯಾಯಿತಿಗಳ ನಿರೀಕ್ಷಿಯಿದೆ. ಎಲೆಕ್ಟ್ರಾನಿಕ್ಸ್‌ನಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ಎಲ್ಲಾ ವಸ್ತುಗಳ ಮೇಲೆ ಭರ್ಜರಿ ಕೊಡುಗೆಗಳು ಇರಲಿವೆ. ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ವಾಷಿಂಗ್ ಮೆಷಿನ್‌ಗಳು, ರೆಫ್ರಿಜರೇಟರ್‌ಗಳು ಮತ್ತು ಇತರ ದೊಡ್ಡ ಗೃಹೋಪಯೋಗಿ ಉಪಕರಣಗಳ ಮೇಲೆ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗಿದೆ. ಬಟ್ಟೆ ದಿನಸಿಯಂತಹ ಪಧಾರ್ಥಗಳ ಮೇಲೂ ಸಹ ಆಫರ್ ಸಿಗುವಂತಹ ಸಾಧ್ಯತೆಯಿದೆ.
ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ
ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಗಳ ಸುರಿಮಳೆಯೇ ಸಿಗಬಹುದು. ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ, ಐಫೋನ್ 15, ಐಕ್ಯೂಒ ನಿಯೋ 10ಆರ್, ಒನ್‌ಪ್ಲಸ್ 13ಆರ್, ಒನ್‌ಪ್ಲಸ್ ನಾರ್ಡ್ ಸಿಇ4 ಲೈಟ್, ಒನ್‌ಪ್ಲಸ್ ನಾರ್ಡ್ 4, ಗ್ಯಾಲಕ್ಸಿ ಎಂ35 5ಜಿ, ಮತ್ತು ಐಕ್ಯೂಒ ಝಡ್10ಎಕ್ಸ್ ಸೇರಿವೆ. ಮೊಬೈಲ್ ಮತ್ತು ಪರಿಕರಗಳ ವಿಭಾಗವು ಶೇಕಡಾ 40 ರಷ್ಟು ರಿಯಾಯಿತಿಯನ್ನು ಸಿಗುವಂತಹ ಸಾಧ್ಯತೆ ಇದೆ.
ಲ್ಯಾಪ್‌ಟಾಪ್‌ಗಳ ಮೇಲೂ ಸಹ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ
ಹಲವಾರು ಲ್ಯಾಪ್‌ಟಾಪ್‌ಗಳ ಬ್ರ್ಯಾಂಡ್‌ಗಳ ಬೆಲೆಗಳು ಒಸಹ ಕಡಿಮೆಯಾಗುವ ಸಾಧ್ಯತೆಯಿದೆ. HP, Lenovo ಮತ್ತು Asus ನಂತಹ ಜನಪ್ರಿಯ ಬ್ರ್ಯಾಂಡ್‌ಗಳ ಮೇಲಿನ ಕೊಡುಗೆಗಳನ್ನು ಜನರು ಎದುರು ನೋಡುತ್ತಿದ್ದಾರೆ. ಇವುಗಳ ಮೇಲೆ ಸಹ ಆಫರ್ ಸಿಗಬಹುದು. ಇದದರಿಂದ ವಿದ್ಯಾರ್ಥಿಗಳು, ವೃತ್ತಿಪರಿಗೆ ಲ್ಯಾಪ್‌ಟಾಪ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಕೊಂಡುಕೊಳ್ಳಬಹುದು.
ಇದರ ಜೊತೆಗೆ, ಸ್ಮಾರ್ಟ್ ಟೆಲಿವಿಷನ್‌ಗಳು, ರೆಫ್ರಿಜರೇಟರ್‌ಗಳು, ಏರ್ ಕಂಡಿಷನರ್‌ಗಳು ಮತ್ತು ಇತರ ವಿವಿಧ ಗೃಹೋಪಯೋಗಿ ಉಪಕರಣಗಳ ಮೇಲೆ ಉಳಿತಾಯ ಇರುತ್ತದೆ. ಅಮೆಜಾನ್ ಟಿವಿಗಳನ್ನು ಶೇ.60 ರಷ್ಟು ಕಡಿಮೆ ರಿಯಾಯಿತಿಯಲ್ಲಿ ಮಾರಾಟ ಮಾಡಲಿದೆ. ಉದಾಹರಣೆಗೆ, Xiaomi ಸ್ಮಾರ್ಟ್ ಟಿವಿ A Pro 4K (43-ಇಂಚು)23,999 ಕ್ಕೆ ಸಿಗವಂತಹ ಸಾಧ್ಯತೆ ಇರುತ್ತದೆ.
ಕ್ರೆಡಿಟ್ ಕಾರ್ಡ್ ಬಳಕೆಗೆ ಆಫರ್
ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ ಕ್ರೆಡಿಟ್ ಕಾರ್ಡ್‌ಗಳು ಬಳಸಿಕೊಂಡು ಖರೀದಿ ಮಾಡುವ ಗ್ರಾಹಕರು ವಿಶೇಷ ರಿಯಾಯಿತಿ ಇರಲಿದೆ. HDFC ಬ್ಯಾಂಕ್ ಗ್ರಾಹಕರು ಕ್ರೆಡಿಟ್ ಕಾರ್ಡ್‌ಗಳು ಅಥವಾ EMI ಆಯ್ಕೆಗಳನ್ನು ಬಳಸಿಕೊಂಡು ಮಾಡಿದ ಖರೀದಿಗಳಿಗೆ ಶೇ. 10 ರಷ್ಟು ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದು.ಇದರೊಂದಿಗೆ, Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇಕಡಾ 5 ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿರುತ್ತದೆ, ಇದು ಖರೀದಿಯನ್ನು ಇನ್ನಷ್ಟು ಲಾಭದಾಯಕವಾಗಿಸುತ್ತದೆ.
ಪ್ರಮುಖ ಗ್ಯಾಜೆಟ್‌ಗಳಲ್ಲದೆ, ಅಮೆಜಾನ್ TWS ಇಯರ್‌ಬಡ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಹಲವಾರು ಪರಿಕರಗಳ ಬೆಲೆಗಳನ್ನು ಕಡಿತಗೊಳಿಸುವ ನಿರೀಕ್ಷೆಯಿದೆ. ಆಫರ್‌ಗಳ ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ.


Click it and Unblock the Notifications