ದೇಶದ ಪ್ರಮುಖ ಇ-ಕಾಮರ್ಸ್ ವೇದಿಕೆಯಾದ ಅಮೆಜಾನ್(Amazon) ಪ್ರೈಮ್ ಡೇ 2025 ಸೇಲ್ ಅನ್ನು ಘೋಷಣೆ ಮಾಡಿದೆ. ಜುಲೈ 12 ರಿಂದ 14 ರವರೆ ಪ್ರೈಮ್ ಡೇ 2025 ಸೇಲ್ ನಡೆಯಲಿದೆ. ಈ ಸೇಲ್‌ನಲ್ಲಿ, ಗ್ರಾಹಕರಿಗೆ ಆಫರ್ ಗಳ ಸುರಿಮಳೆಯೇ ಸುರಿಯಲಿದೆ. ಶೇ. 80 ವರೆಗೆ ರಿಯಾಯಿತಿಯನ್ನು ನೀಡಲಿದೆ.
ಹೌದು, ಇ-ಕಾಮರ್ಸ್ ದೈತ್ಯ ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ವಿಭಾಗಗಳ ಮೇಲೆ ಶೇ. 80 ವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಜೊತೆಗೆ ಐಸಿಐಸಿಐ ಮತ್ತು ಎಸ್‌ಬಿಐ ಕಾರ್ಡ್‌ಗಳ ಕ್ರೆಡಿಟ್ ಕಾರ್ಡಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗಿದೆ. ಇದೇ ಮೊದಲ ಬಾರಿಗೆ ಈ ವರ್ಷ 3 ದಿನಗಳವರೆಗೆ ಸೇಲ್ ನಡೆಯಲಿದೆ. ಈ ಮಾರಾಟವು ಪ್ರೈಮ್ ಸದಸ್ಯರಿಗೆ ಮಾತ್ರ ಅನ್ವಯವಾಗುತ್ತದೆ. ಈ ಬಾರಿ 400 ಕ್ಕೂ ಹೆಚ್ಚು ಉನ್ನತ ಬ್ರ್ಯಾಂಡ್‌ಗಳು 1,600 ಕ್ಕೂ ಹೆಚ್ಚು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತವೆ ಎಂದು ಅಮೆಜಾನ್ ಕಂಪನಿ ಮಾಹಿತಿಯನ್ನು ತಿಳಿಸಿದೆ.
ಪ್ರೈಮ್ ಡೇ 2025: ಬ್ರಾಂಡ್‌ಗಳು
ಸ್ಯಾಮ್‌ಸಂಗ್,ಒನ್ ಪ್ಲಸ್, ರಿಯಲ್ ಮಿ,ಎಚ್ ಪಿ, ಲೇನೋವೋ, ಪೂಮಾ , Adidas ಮತ್ತು Allen Solly ನಂತಹ ಬ್ರ್ಯಾಂಡ್‌ಗಳು ತಮ್ಮ ಹೊಸ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಬ್ರ್ಯಾಂಡ್ ಬಟ್ಟೆಗಳು, ಫ್ಯಾಷನ್ ಮತ್ತು ಸೌಂದರ್ಯ ಕಾರಕ ವಸ್ತುಗಳು 2ಅಮೆಜಾನ್ ಪ್ರೈಮ್ ಡೇಯಲ್ಲಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಲಾಗಿದೆ.ಇದು ಪ್ರೈಮ್ ಬಳಕೆದಾರರಿಗೆ ಮಾತ್ರ ವಿಶೇಷ ಡೀಲ್‌ಗಳಲ್ಲಿ ಲಭ್ಯವಿರುತ್ತವೆ.
ರಿಯಾಯಿತಿಗಳು ಮತ್ತು ಕ್ರೆಡಿಟ್ ಕಾರ್ಡ್ ಬಳಕೆಗೆ ಆಫರ್
ಅಮೆಜಾನ್ ಪ್ರೈಮ್ ಗ್ರಾಹಕರು ಐಸಿಐಸಿಐ ಮತ್ತು ಎಸ್‌ಬಿಐ ಕಾರ್ಡ್‌ಗಳ ಮೇಲೆ ಶೇ. 10 ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಅದೇ ಸಮಯದಲ್ಲಿ, ಅಮೆಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಶೇ. 5 ಕ್ಯಾಶ್‌ಬ್ಯಾಕ್ ಮತ್ತು ಪ್ರೈಮ್ ಡೇ ವಾಲೆಟ್ ಬಹುಮಾನಗಳನ್ನು ನೀಡಲಾಗುತ್ತದೆ. ಅಮೆಜಾನ್ ಪೇ ನಿಂದ ವಿಮಾನಗಳ ಟಿಕೆಟ್ ಬುಕ್ಕಿಂಗ್ , ಹೋಟೆಲ್ ಬುಕಿಂಗ್ ಮತ್ತು ಚಲನಚಿತ್ರ ಟಿಕೆಟ್‌ಗಳ ಮೇಲೆ ಹೆಚ್ಚುವರಿ ರಿಯಾಯಿತಿಗಳು ಸಿಗುತ್ತವೆ.
ಈ ಕೊಡುಗೆಯು ಗ್ರಾಹಕರನ್ನು ಇನ್ನಷ್ಟು ಶಾಪಿಂಗ್ ಮಾಡಲು ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದೆ.
ಈ ಪ್ರೈಮ್ ಡೇ ದಿನದಂದು 10 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳು ಒಂದೇ ದಿನದ ವಿತರಣೆಗೆ ಲಭ್ಯವಿರುತ್ತವೆ ಮತ್ತು ಮರುದಿನ 40 ಲಕ್ಷ ಉತ್ಪನ್ನಗಳು ವಿತರಣಾ ಸೌಲಭ್ಯದಲ್ಲಿ ಲಭ್ಯವಿರುತ್ತವೆ ಎಂದು ಅಮೆಜಾನ್ ತಿಳಿಸಿದೆ. ಪ್ರೈಮ್ ಲೈಟ್ ಮತ್ತು ಪ್ರೈಮ್ ಶಾಪಿಂಗ್ ಆವೃತ್ತಿಯ ಬಳಕೆದಾರರು ಸಹ ಮಾರಾಟದ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ.
ಮೊಬೈಲ್‌ಗಳು ಮತ್ತು ಪರಿಕರಗಳ ಮೇಲೆ ಶೇ40 ವರೆಗೆ ರಿಯಾಯಿತಿ
ಪ್ರೈಮ್ ಡೇ 2025 ಸೇಲ್ ನಲ್ಲಿ ಈ ಬಾರಿಯ ಮಾರಾಟದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ, ಒನ್‌ಪ್ಲಸ್ 13s, ಮತ್ತುಐಕ್ಯೂಒ ನಿಯೋ 10 ನಂತಹ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುವುದಾಗಿ ಅಮೆಜಾನ್ ಕಂಪನಿ ಮಾಹಿತಿಯನ್ನು ತಿಳಿಸಿದೆ.
ಇದಲ್ಲದೇ ಆಪಲ್, ಶಿಯೋಮಿ, ರಿಯಲ್ ಮೀ ಮತ್ತು ಲಾವಾ ನಂತಹ ಬ್ರ್ಯಾಂಡ್‌ಗಳ ಫೋನ್‌ಗಳ ಮೇಲೆ ಕೊಡುಗೆಗಳು ಇರುತ್ತವೆ. ಇದರೊಂದಿಗೆ, ಇಯರ್‌ಬಡ್‌ಗಳು, ಚಾರ್ಜರ್‌ಗಳು ಮತ್ತು ಕವರ್‌ಗಳಂತಹ ಮೊಬೈಲ್ ಪರಿಕರಗಳ ಮೇಲೆ ಶೇ. 40 ವರೆಗೆ ರಿಯಾಯಿತಿ ನೀಡಲಾಗುವುದು. ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್‌ಗಳ ಮೇಲೆ ಶೇ. 80ವರೆಗೆ ರಿಯಾಯಿತಿ ನೀವು ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಹೆಡ್‌ಫೋನ್‌ಗಳು ಅಥವಾ ಸ್ಮಾರ್ಟ್‌ವಾಚ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಈ ವಿಭಾಗಗಳಲ್ಲಿ ಶೇ. 80 ವರೆಗೆ ರಿಯಾಯಿತಿ ನೀಡುವುದಾಗಿ ಅಮೆಜಾನ್ ಘೋಷಿಸಿದೆ. ಈ ಕೊಡುಗೆಗಳು ಆಸುಸ್, ಎಚ್‌ಪಿ, ಲೆನೊವೊ, ಸ್ಯಾಮ್‌ಸಂಗ್ ಮತ್ತು ಆಪಲ್‌ನಂತಹ ಬ್ರಾಂಡ್‌ಗಳ ಉತ್ಪನ್ನಗಳಿಗೆ ಮಾತ್ರ ಅನ್ವಯವಾಗುತ್ತದೆ.

ಅಮೆಜಾನ್ ಪ್ರೈಮ್ ಡೇ ಗ್ರಾಹಕರಿಗೆ ಹೆಚ್ಚಿನ ಆಫರ್ ಗಳನ್ನು ನೀಡಿದೆ. ಇವು ಕಡಿಮೆ ಬೆಲೆಗೆ ಬ್ರಾಂಡ್ ವಸ್ತುಗಳನ್ನು ಖರೀದಿ ಮಾಡಬಹುದು.


Click it and Unblock the Notifications