ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆಯನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ವರದಿ ಮಾಡಿದ ಬಳಿಕ ಅದಾನಿ ಗ್ರೂಪ್ ಷೇರುಗಳು ನಿರಂತರವಾಗಿ ಕುಸಿತ ಕಾಣುತ್ತಿದೆ. ಅದರ ನಿರ್ವಹಣೆಗೆ ಅದಾನಿ ಗ್ರೂಪ್ ಕ್ರಮವನ್ನು ಕೂಡಾ ಕೈಗೊಳ್ಳುತ್ತಿದೆ. ಅದಾನಿ ಗ್ರೂಪ್ 500 ಮಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡಿದರೂ ಅಂಬುಜಾ ಸಿಮೆಂಟ್ ಸ್ಟಾಕ್ ಮಾತ್ರ ಇಳಿಕೆಯಾಗಿದೆ. ಆದರೆ ಇತರೆ ಅದಾನಿ ಗ್ರೂಪ್ ಸ್ಟಾಕ್‌ಗಳು ಮಾತ್ರ ಏರಿಕೆ ಕಂಡಿದೆ.
ಬಿಎಸ್‌ಇಯಲ್ಲಿ ಆರಂಭಿಕ ವಹಿವಾಟಿನಲ್ಲಿ ಅದಾನಿ ಎಂಟರ್‌ಪ್ರೈಸಸ್ ಶೇಕಡ 3ರಷ್ಟು ಹೆಚ್ಚಳವಾಗಿ, 1,985 ರೂಪಾಯಿಗೆ ತಲುಪಿದೆ. ಅದಾನಿ ಗ್ರೂಪ್ ಎಲ್ಲ ಷೇರು ಆಧಾರಿತ ಸಾಲವನ್ನು ಮರುಪಾವತಿಸಿದೆ ಎಂದು ಹೇಳಿದರೂ ಗ್ರೂಪ್ ಸ್ಟಾಕ್ ಮಾತ್ರ ಇಳಿದಿದೆ. ಅದಾನಿ ಪವರ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್ ಸ್ಟಾಕ್‌ಗಳು ಶೇಕಡ 5ರಷ್ಟು ಏರಿಕೆ.

ಸ್ಟಾಕ್ ಖರೀದಿ ಮಾಡಿದ ಅದಾನಿ ಸಂಸ್ಥೆ
ಆರು ವಾರದಲ್ಲಿ ಎಲ್ಲ ಪಾವತಿ ಪ್ರಕ್ರಿಯೆ ಸಂಪೂರ್ಣವಾಗಲಿದೆ ಎಂದು ಅದಾನಿ ಗ್ರೂಪ್ ಹೇಳಿದೆ. ಇನ್ನು 10.5 ಬಿಲಿಯನ್ ಡೀಲ್ ಮೂಲಕ ಹಾಲ್ಕಿಮ್ ಗ್ರೂಪ್ ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿಯಲ್ಲಿ ಮಾಡಿದ ಹೂಡಿಕೆಯನ್ನು ಅದಾನಿ ಗ್ರೂಪ್ ಖರೀದಿ ಮಾಡಿದೆ. ಇದು ಅದಾನಿ ಗ್ರೂಪ್ ಅತೀ ದೊಡ್ಡ ಡೀಲ್ ಆಗಿದೆ. ಅಂಬುಜಾ ಸಿಮೆಂಟ್‌ನಲ್ಲಿ ಶೇಕಡ 63.19 ಮತ್ತು ಎಸಿಸಿಯಲ್ಲಿನ ಶೇಕಡ 54.53ರಷ್ಟು ಸ್ಟೇಕ್ ಅನ್ನು ಹಾಲ್ಕಿಮ್ ಮಾರಾಟ ಮಾಡಿದೆ.
ಈ ಸಮಯಕ್ಕೆ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 1.96ರಷ್ಟು ಇಳಿಕೆಯಾಗಿ 1,859.00 ರೂಪಾಯಿಗೆ ತಲುಪಿದೆ. ಅದಾನಿ ವಿಲ್ಮಾರ್ ಸ್ಟಾಕ್ ಶೇಕಡ 3.24ರಷ್ಟು ಇಳಿಕೆಯಾಗಿ, 438.80 ರೂಪಾಯಿಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡ 2.69ರಷ್ಟು ಇಳಿಕೆಯಾಗಿ, 679.00 ರೂಪಾಯಿಗೆ ತಲುಪಿದೆ. ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 2.87ರಷ್ಟು ಇಳಿಕೆಯಾಗಿದ್ದು, 367.50 ರೂಪಾಯಿಗೆ ತಲುಪಿದೆ.
ಎಸಿಸಿ ಶೇಕಡ 4.06ರಷ್ಟು ಇಳಿದು, 1,772 ರೂಪಾಯಿಗೆ ತಲುಪಿದೆ. ಇನ್ನು ಅದಾನಿಯ 5 ಸ್ಟಾಕ್‌ಗಳಾದ ಅದಾನಿ ಟ್ರಾನ್ಸ್‌ಮಿಷನ್ ಶೇಕಡ 5.00ರಷ್ಟು ಹೆಚ್ಚಾಗಿ, 949.65 ರೂಪಾಯಿಗೆ ತಲುಪಿದೆ. ಅದಾನಿ ಟೋಟಲ್ ಗ್ಯಾಸ್ ಶೇ.5.00ರಷ್ಟು ಏರಿ 997.05 ರೂಪಾಯಿ ಆಗಿದೆ. ಅದಾನಿ ಗ್ರೀನ್ ಎನರ್ಜಿ ಶೇ.4.99ರಷ್ಟು ಏರಿ, 716.80ಕ್ಕೆ ತಲುಪಿದೆ. ಎನ್‌ಡಿಟಿವಿ ಶೇಕಡ 5.00ರಷ್ಟು ಹೆಚ್ಚಾಗಿ 222.20 ರೂಪಾಯಿಗೆ ಮತ್ತು ಅದಾನಿ ಪವರ್ ಶೇಕಡ 4.98ರಷ್ಟು ಏರಿಕೆಯಾಗಿ 215.10 ರೂಪಾಯಿಗೆ ತಲುಪಿದೆ.


Click it and Unblock the Notifications