ಕೊರೊನಾವೈರಸ್ ಹುಟ್ಟಿಗೆ ಕಾರಣವಾದ ಹಾಗೂ ಭಾರತದೊಂದಿಗೆ ಗಡಿ ತಂಟೆ ತೆಗೆದ ಚೀನಾ ಇದೀಗ ಇಡೀ ಜಗತ್ತಿನಲ್ಲಿ ಖಳನಾಯಕನ ಸ್ಥಾನದಲ್ಲಿ ನಿಂತಿದೆ. ಚೀನಾದ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು ಅನೇಕ ರಾಷ್ಟ್ರಗಳು ಹೆಜ್ಜೆ ಇಡುತ್ತಿವೆ. ಈ ನಿಟ್ಟಿನಲ್ಲಿ ಭಾರತ ಚೀನಾ ಮೂದಲ 59 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಆ ದೇಶಕ್ಕೆ ಮರ್ಮಾಘಾತ ನೀಡಿದೆ.
ಇದೀಗ ಇಂತಹುದೇ ಕ್ರಮ ಅನುಸರಿಸಲು ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ ಮುಂದಾಗಿದೆ. ಟಿಕ್‌ಟಾಕ್ ಸೇರಿದಂತೆ ಚೀನಾದ ಆಪ್‌ಗಳನ್ನು ನಿಷೇಧಿಸಲು ಮುಂದಾಗಿದೆ.
ಟಿಕ್‌ಟಾಕ್ ಸೇರಿದಂತೆ ಚೀನಾದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವುದನ್ನು ಅಮೆರಿಕ ಖಂಡಿತವಾಗಿಯೂ ಎದುರು ನೋಡುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೋಮವಾರ ಹೇಳಿದ್ದಾರೆ. ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಪಾಂಪಿಯೊ ಈ ವಿಷಯ ಹೇಳಿದ್ದಾರೆ.
ವಿಭಿನ್ನ ಮಾರ್ಗವನ್ನು ತೆಗೆದುಕೊಳ್ಳಬೇಕಾಗಿದೆ
ಚೀನಾಕ್ಕೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ವಿಭಿನ್ನ ಮಾರ್ಗವನ್ನು ತೆಗೆದುಕೊಳ್ಳಬೇಕಾಗಿದೆ. ಏಕೆಂದರೆ ಇದು ತಮ್ಮ ಆರ್ಥಿಕತೆಯನ್ನು ತೆರೆಯಲು ಸಹಾಯ ಮಾಡುತ್ತದೆ. ಈ ಹಿಂದೆ ಈ ಕ್ರಮ ಕೈಗೊಂಡರೆ ಹೆಚ್ಚು ರಾಜಕೀಯ ಸ್ವಾತಂತ್ರ್ಯಕ್ಕೆ ಕಾರಣವಾಗಬಹುದು ಎಂಬ ನಂಬಿಕೆಯೊಂದಿಗೆ ಕಾರ್ಯನಿರ್ವಹಿಸಲಿಲ್ಲ ಎಂದು ಹೇಳಿದ್ದಾರೆ.
ಹಾಂಗ್ ಕಾಂಗ್‌ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತಿದೆ.
ಜನಪ್ರಿಯ ಟಿಕ್ ಟಾಕ್ ಹಾಂಗ್ ಕಾಂಗ್‌ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತಿದೆ. ಅಲ್ಲಿ ಚೀನಾ ಮೂಲದ ಹೊಸ ಭದ್ರತಾ ಕಾನೂನನ್ನು ಹೇರಿದ ನಂತರ, ಬಳಕೆದಾರರ ಮಾಹಿತಿಗಾಗಿ ಹಾಂಗ್ ಕಾಂಗ್ ಸರ್ಕಾರ ಅಥವಾ ಪೊಲೀಸ್ ಪಡೆ ಮಾಡಿದ ಮನವಿಯನ್ನು ಫೇಸ್‌ಬುಕ್, ಗೂಗಲ್ ಮತ್ತು ಟ್ವಿಟರ್ ತಡೆಹಿಡಿದಿದ್ದರಿಂದ ಚೀನಾ ಮೂಲದ ಬೈಟ್‌ಡ್ಯಾನ್ಸ್ ಒಡೆತನದ ಟಿಕ್‌ಟಾಕ್ ಈ ಕ್ರಮಕ್ಕೆ ಬಂದಿದೆ.
'ಡಿಜಿಟಲ್ ಸ್ಟ್ರೈಕ್'
ಜೂನ್ 29 ರಂದು ಭಾರತ ಸರ್ಕಾರವು ಟಿಕ್‌ಟಾಕ್ ಮತ್ತು ವೀಚಾಟ್ ಸೇರಿದಂತೆ 59 ಚೀನೀ ಆ್ಯಪ್‌ಗಳನ್ನು ನಿಷೇಧಿಸುವುದಾಗಿ ಘೋಷಿಸಿತ್ತು. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಈ ಅಪ್ಲಿಕೇಶನ್‌ಗಳು ದಕ್ಕೆ ತರುತ್ತವೆ ಎಂದು ಆರೋಪಿಸಲಾಗಿದೆ. ಚೀನಾ ವಿರುದ್ಧ ಇದೊಂದು 'ಡಿಜಿಟಲ್ ಸ್ಟ್ರೈಕ್' ಎನ್ನಲಾಗಿದೆ.
ತೀವ್ರ ಗಮನ ಇದೆ
ಚೀನಾದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಭಾರತದ ನಿರ್ಧಾರದ ಬಗ್ಗೆ ತೀವ್ರ ಗಮನ ಇದೆ ಎಂದು ಚೀನಾ ಹೇಳಿದೆ. ಇದು ಉಭಯ ದೇಶಗಳ ನಡುವಿನ ಸಹಕಾರವನ್ನು ಕಟ್ಟಿ ಹಾಕುತ್ತದೆ ನಿಷೇಧವು ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿರುತ್ತದೆ ಎಂದು ಹೇಳಿದೆ.


Click it and Unblock the Notifications