ರಷ್ಯಾ ಹಾಗೂ ಅಮೆರಿಕ ವಿಶ್ವದ ಎರಡು ಪ್ರಮುಖ ರಾಷ್ಟ್ರಗಳು. ಅಮೆರಿಕ ವಿಶ್ವ ದೊಡ್ಡಣನ ಸ್ಥಾನವನ್ನು ಅಲಂಕರಿಸಿದರೆ, ಆ ಸ್ಥಾನದ ಮೇಲೆ ರಷ್ಯಾ ಕಣ್ಣು ನೆಟ್ಟಿದೆ. ರಷ್ಯಾ ಹಾಗೂ ಅಮೆರಿಕ ಎರಡೂ ದೇಶಗಳು ಪೈಪೋಟಿಗೆ ಬಿದ್ದಂತೆ ಕಾಣುತ್ತಿವೆ. ಅದ್ರಲ್ಲೂ ಇತ್ತೀಚಿಗೆ ನಡೆದ ಉಕ್ರೇನ್-ರಷ್ಯಾ ವಾರ್‌ನಲ್ಲಿ ಅಮೆರಿಕದ ನಡೆ ರಷ್ಯಾವನ್ನು ಕೆರಳಿಸಿದೆ. ಈಗ ಮಾರ್ಕೆಟ್‌ನಲ್ಲಿ ಅಮೆರಿಕದ ಒಂದು ಕಂಪನಿಯ ಮೌಲ್ಯವನ್ನು ಕೆಳಿ ವಿಶ್ವವೇ ಅಚ್ಚರಿ ಪಟ್ಟಿದೆ.
ಅಮೇರಿಕನ್ ಎಐ ಚಿಪ್ ಉತ್ಪಾದನಾ ಕಂಪನಿ Nvidia ಷೇರುಗಳು ಈ ವರ್ಷ 50 ಪ್ರತಿಶತಕ್ಕಿಂತ ಹೆಚ್ಚು ಹೆಚ್ಚಾಗಿದೆ. ಕಳೆದ ವಾರ, ಅದರ ಮಾರ್ಕೆಟ್ ವ್ಯಾಲ್ಯೂ ಒಂದೇ ದಿನದಲ್ಲಿ ದಾಖಲೆಯ 277 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಾಗಿದೆ. ಕಳೆದ ವರ್ಷವೂ ಅದರ ಷೇರುಗಳು 239 ಪ್ರತಿಶತದಷ್ಟು ಏರಿಕೆ ಕಂಡಿದ್ದವು. ಈ ಬೆಳವಣಿಗೆಯೊಂದಿಗೆ, ಈ ಕಂಪನಿಯ ಮಾರ್ಕೆಟ್ ಕ್ಯಾಪ್ 1.97 ಟ್ರಿಲಿಯನ್ ಡಾಲರ್ ತಲುಪಿದೆ. ಇದು ರಷ್ಯಾದ GDP ಗಿಂತ ಹೆಚ್ಚು.

ರಷ್ಯಾದ ಆರ್ಥಿಕತೆಯ ಗಾತ್ರವು 1.92 ಟ್ರಿಲಿಯನ್ ಡಾಲರ್ ಆಗಿದೆ ಮತ್ತು ಇದು ವಿಶ್ವದ 12 ನೇ ಅತಿದೊಡ್ಡ ಆರ್ಥಿಕತೆ ಆಗಿದೆ. Nvidia ವಿಶ್ವದ ನಾಲ್ಕನೇ ಅತಿ ದೊಡ್ಡ ಕಂಪನಿ. ಈ ಕಂಪನಿ ಮುಂದೆ ಮೈಕ್ರೋಸಾಫ್ಟ್ (3.04 ಟ್ರಿಲಿಯನ್ ಡಾಲರ್), ಆಪಲ್ (2.81 ಟ್ರಿಲಿಯನ್ ಡಾಲರ್) ಮತ್ತು ಸೌದಿ ಅರಾಮ್ಕೋ (2.06 ಟ್ರಿಲಿಯನ್ ಡಾಲರ್) ಇವೆ.
ಅಮೆರಿಕವು 27.97 ಟ್ರಿಲಿಯನ್ ಡಾಲರ್‌ನೊಂದಿಗೆ ವಿಶ್ವದ ಅತಿದೊಡ್ಡ ಆರ್ಥಿಕ ದೇಶವಾಗಿ ಹೊರ ಹೊಮ್ಮಿದೆ. ಚೀನಾ 18.56 ಟ್ರಿಲಿಯನ್ ಡಾಲರ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ, 4.73 ಟ್ರಿಲಿಯನ್ ಡಾಲರ್‌ನೊಂದಿಗೆ ಜರ್ಮನಿ ಮೂರನೇ ಸ್ಥಾನದಲ್ಲಿದೆ, 4.29 ಟ್ರಿಲಿಯನ್ ಡಾಲರ್‌ನೊಂದಿಗೆ ಜಪಾನ್ ನಾಲ್ಕನೇ ಸ್ಥಾನದಲ್ಲಿ ಮತ್ತು 4.11 ಟ್ರಿಲಿಯನ್ ಡಾಲರ್‌ನೊಂದಿಗೆ ಭಾರತ ಐದನೇ ಸ್ಥಾನದಲ್ಲಿದೆ.
ಈ ಪಟ್ಟಿಯಲ್ಲಿ ಯುಕೆ (3.59 ಟ್ರಿಲಿಯನ್ ಡಾಲರ್) ಮತ್ತು ಫ್ರಾನ್ಸ್ (3.18 ಟ್ರಿಲಿಯನ್ ಡಾಲರ್). ಮೈಕ್ರೋಸಾಫ್ಟ್ ಮತ್ತು ಆಪಲ್‌ನ ಮಾರ್ಕೆಟ್ ಕ್ಯಾಪ್ ಇಟಲಿ (2.28 ಟ್ರಿಲಿಯನ್ ಡಾಲರ್), ಬ್ರೆಜಿಲ್ (2.27 ಟ್ರಿಲಿಯನ್ ಡಾಲರ್) ಗಿಂತ ಹೆಚ್ಚು. ಅಂತೆಯೇ, ಅಮೆಜಾನ್‌ನ ಮಾರ್ಕೆಟ್ ಕ್ಯಾಪ್ (1.81 ಟ್ರಿಲಿಯನ್ ಡಾಲರ್) ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಸ್ಪೇನ್, ಇಂಡೋನೇಷ್ಯಾ ಮತ್ತು ಟರ್ಕಿಗಿಂತ ಹೆಚ್ಚಾಗಿದೆ.

ಷೇರು ಏಕೆ ಏರುತ್ತಿದೆ?
Nvidia ಷೇರುಗಳು ಗುರುವಾರದಂದು ಒಂದು ದಿನದಲ್ಲಿ ಅತ್ಯಧಿಕ ಗಳಿಕೆಯ ದಾಖಲೆಯನ್ನು ಮಾಡಿದೆ. ವಿಶ್ವದ ದುಬಾರಿ AI ಚಿಪ್ ಮಾರುಕಟ್ಟೆಯಲ್ಲಿ Nvidia ಶೇಕಡಾ 80 ರಷ್ಟು ಪಾಲನ್ನು ಹೊಂದಿದೆ. ನಾಲ್ಕನೇ ತ್ರೈಮಾಸಿಕದಲ್ಲಿ, ಕಂಪನಿಯ ಆದಾಯವು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಈ ಕಂಪನಿಯನ್ನು ತೈವಾನ್ ಮೂಲದ ಜೆನ್ಸನ್ ಹುವಾಂಗ್ ಸ್ಥಾಪಿಸಿದರು.


Click it and Unblock the Notifications