ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ಹಲವಾರು ವಂಚನೆಗಳನ್ನು ಮಾಡಿದೆ ಎಂಬ ಬಗ್ಗೆ ಹಿಂಡನ್‌ಬರ್ಗ್ ವರದಿ ಮಾಡಿದ ಬಳಿಕ ದೇಶದಲ್ಲಿ ಹಲವಾರು ಬೆಳವಣಿಗೆಗಳು ನಡೆದಿದೆ. ಅದಾನಿ ಸ್ಟಾಕ್‌ಗಳು ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತವನ್ನು ಕಂಡಿದೆ. ಈ ನಡುವೆ ಬ್ಯಾಂಕಿಂಗ್ ವಲಯದ ಬಗ್ಗೆ ಹಲವಾರು ಆತಂಕಗಳು ಸೃಷ್ಟಿಯಾಗಿದೆ. ಈ ಬಗ್ಗೆ ಎಂಪಿಸಿ ಸಭೆಯ ಬಳಿಕ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿಕೆಯನ್ನು ನೀಡಿದ್ದಾರೆ.
ಎನ್‌ಬಿಎಫ್‌ಸಿ ಸೇರಿದಂತೆ ಭಾರತೀಯ ಬ್ಯಾಂಕುಗಳು ಯಾವುದೇ ಸಂದರ್ಭವನ್ನು ಎದುರಿಸುವ ಶಕ್ತಿಯನ್ನು ಹೊಂದಿದೆ ಮತ್ತು ಶಕ್ತವಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಬುಧವಾರ ತಿಳಿಸಿದ್ದಾರೆ. ಈ ಹಿಂದೆಯೂ ಆರ್‌ಬಿಐ ಈ ಹೇಳಿಕೆಯನ್ನೇ ನೀಡಿದೆ. ಭಾರತೀಯ ಬ್ಯಾಂಕುಗಳು ಯಾವುದೇ ಸಂದರ್ಭವನ್ನು ಎದುರಿಸುವ ಶಕ್ತಿ ಹೊಂದಿದೆ ಎಂದು ತಿಳಿಸಿದ್ದಾರೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆರ್‌ಬಿಐ ರೆಪೋ ದರ ಏರಿಕೆ ಸೇರಿದಂತೆ ಕೇಂದ್ರ ಬ್ಯಾಂಕ್‌ನ ಮಾನೆಟರಿ ಪಾಲಿಸಿಯನ್ನು ಘೋಷಣೆ ಮಾಡಿದ ಬಳಿಕ ಮಾತನಾಡಿದ ಉಪ ಗವರ್ನರ್ ಎಂಕೆ ಜೈನ್, "ಬ್ಯಾಂಕಿಂಗ್ ಸಂಸ್ಥೆಗಳ ನಗದು ಹರಿವು, ಯೋಜನೆಗಳು ಜಾರಿಯಾಗಲಿದೆ. ಮಾರುಕಟ್ಟೆ ಬೆಳವಣಿಗೆಯ ಮೇಲೆ ನಿಂತಿಲ್ಲ," ಎಂದು ಹೇಳಿದ್ದಾರೆ.

ಅದಾನಿ ಗ್ರೂಪ್‌ನ ಹೆಸರನ್ನು ಉಲ್ಲೇಖಿಸದ ಆರ್‌ಬಿಐ
"ಶಕ್ತಿ, ಗಾತ್ರ ಮತ್ತು ಯಾವುದೇ ಸಂದರ್ಭವನ್ನು ಎದುರಿಸುವ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಅಧಿಕ ಶಕ್ತಿಯುತವಾಗಿದೆ ಮತ್ತು ಯಾವುದೇ ತೊಂದರೆಯನ್ನು ಎದುರಿಸುವ ಶಕ್ತಿಯನ್ನು ಭಾರತೀಯ ಬ್ಯಾಂಕ್ ಹೊಂದಿದೆ," ಎಂದಿದೆ. ಆದರೆ ಆರ್‌ಬಿಐ ಈ ಹಿಂದಿನಂತೆ ಎಲ್ಲಿಯೂ ಕೂಡಾ ಅದಾನಿ ಗ್ರೂಪ್‌ನ ಹೆಸರನ್ನು ಉಲ್ಲೇಖಿಸಿಲ್ಲ.
ಆರ್‌ಬಿಐ ಮುಂಜಾನೆ ಹೇಳಿಕೆಯನ್ನು ನೀಡಿದ ಬಳಿಕ ವರದಿಗಾರರೊಂದಿಗೆ ಮಾತನಾಡುತ್ತಾ ಈ ಹೇಳಿಕೆಯನ್ನು ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬ್ಯಾಂಕ್‌ನ ವಿಧಾನವು ಉತ್ತಮವಾಗುತ್ತಿದೆ. ಕೇಂದ್ರ ಬ್ಯಾಂಕ್ ಆರ್‌ಬಿಐ ಕೂಡಾ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅದಾನಿ ಸ್ಟಾಕ್ ಇಳಿಕೆಯಿಂದಾಗಿ ಬ್ಯಾಂಕ್‌ಗಳಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಕೇಳಿದಾಗ ಈ ಹಿಂದೆ ನೀಡಿದ ಹೇಳಿಕೆಯನ್ನೇ ನೀಡಿದ್ದಾರೆ.
ಈ ಹಿಂದೆ ನಮ್ಮ ದೇಶದ ಬ್ಯಾಂಕಿಂಗ್ ವಲಯವು ಯಾವುದೇ ಕೆಟ್ಟ ಸ್ಥಿತಿಯಿಂದಲೂ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸ್ಥಿರವಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಸಂಕ್ಷಿಪ್ತವಾದ ಹೇಳಿಕೆಯೊಂದನ್ನು ಆರ್‌ಬಿಐ ನೀಡಿದೆ.
"ಬಂಡವಾಳ ಸಮರ್ಪಕತೆ, ಆಸ್ತಿ ಗುಣಮಟ್ಟ, ದ್ರವ್ಯತೆ, ಪ್ರೋವಿಜನ್ ಕವರೇಜ್, ಲಾಭದಾಯಕತ್ವ ಎಂಬ ಹಲವಾರು ಪರಿಮಾಣಗಳು ಆರೋಗ್ಯದಾಯಕವಾಗಿದೆ. ಆರ್‌ಬಿಐನಿಂದ ನೀಡಲಾದ ಮಾರ್ಗಸೂಚಿ ಪ್ರಕಾರವಾಗಿಯೇ ಬ್ಯಾಂಕ್‌ಗಳು ನಡೆದುಕೊಂಡಿದೆ," ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಹಾಗೆಯೇ ಆರ್‌ಬಿಐ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಭಾರತದ ಬ್ಯಾಂಕಿಂಗ್ ವಲಯದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದನ್ನು ನೋಡಿಕೊಳ್ಳುತ್ತದೆ," ಎಂದು ತಿಳಿಸಿದೆ.


Click it and Unblock the Notifications