ಜಾಗತಿಕ ಬೆಳವಣಿಗೆಯ ಪರಿಣಾಮ ನೇರವಾಗಿ ಭಾರತೀಯ ಷೇರುಪೇಟೆ ಮೇಲೆ ಬಿದ್ದಿದ್ದು ಸೆನ್ಸೆಕ್ಸ್ ದಿಢೀರ್ 600 ಅಂಕ ಕುಸಿದಿದೆ. ಯುಎಸ್‌ನಲ್ಲಿ ಆರ್ಥಿಕ ಹಿಂಜರಿತದ ಆತಂಕ, ಚೀನಾದಲ್ಲಿ ಕೋವಿಡ್ ಸಾಂಕ್ರಾಮಿಕ ಅಧಿಕವಾಗುತ್ತಿರುವುದರ ಪ್ರಭಾವ ಭಾರತೀಯ ಈಕ್ವಿಟಿ ಮಾರುಕಟ್ಟೆ ಮೇಲೆ ಬೀರಿದೆ.
ಡಿಸೆಂಬರ್ 20ರಂದು ಮಂಗಳವಾರ ಬೆಳಿಗ್ಗೆ 9.40 ಗಂಟೆಗೆ ಬಿಎಸ್‌ಇ ಸೆನ್ಸೆಕ್ಸ್ 606 ಅಂಕ ಅಥವಾ ಶೇಕಡ 0.96ರಷ್ಟು ಕುಸಿದು 61,199.67ಕ್ಕೆ ತಲುಪಿದೆ. ನಿಫ್ಟಿ50 ಸುಮಾರು 180 ಅಂಕ ಅಥವಾ ಶೇಕಡ 0.98ರಷ್ಟು ಇಳಿದು 18,239ಕ್ಕೆ ವಹಿವಾಟು ನಡೆಸುತ್ತಿದೆ.
"ಮುಂದಿನ ವರ್ಷದಲ್ಲಿ ವಿಶ್ವದ ಅತೀ ದೊಡ್ಡ ಆರ್ಥಿಕತೆಯು ಕುಸಿಯುವ ಸಾಧ್ಯತೆಯಿದೆ. ಇದರ ಪರಿಣಾಮ ಹೂಡಿಕೆದಾರರ ಮೇಲೆ ಈಗಲೇ ಉಂಟಾಗಿದೆ. ಹೂಡಿಕೆದಾರರು ಈ ಸ್ಥಿತಿಯಲ್ಲಿ ಹೂಡಿಕೆಯಿಂದ ಹಿಂಜರಿಯುತ್ತಿದ್ದಾರೆ," ಎಂದು ಮೆಹ್ತಾ ಈಕ್ವಿಟೀಸ್‌ನ ವಕ್ತಾರರು ಹೇಳಿದ್ದಾರೆ.

ಹೂಡಿಕೆದಾರರ ಮೇಲೆ ಬೇರೇನು ಪ್ರಭಾವ?
"ಆರ್‌ಬಿಐ ಇತ್ತೀಚೆಗೆ ಸಭೆಯನ್ನು ಸೇರಿದ್ದು ಅದರ ವರದಿಯನ್ನು ಬುಧವಾರ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದು ಕೂಡಾ ಹೂಡಿಕೆದಾರರ ಮೇಲೆ ಪರಿಣಾಮ ಉಂಟು ಮಾಡಿರಬಹುದು. ಈ ವರದಿಯು ಹಣದುಬ್ಬರಕ್ಕೆ, ಆರ್ಥಿಕತೆಗೆ, ಬಡ್ಡಿದರಕ್ಕೆ ಸಂಬಂಧಿಸಿದ್ದು ಆಗಿರಲಿದೆ," ಎಂದು ಕೂಡಾ ತಿಳಿಸಿದ್ದಾರೆ.
11 ಗಂಟೆಗೆ 30 ಷೇರುಗಳ ಬಿಎಸ್‌ಇ ಸೂಚ್ಯಂಕ 659.21 ಅಂಕ ಅಥವಾ ಶೇಕಡ 1.07ರಷ್ಟು ಕುಸಿದು 61,146ಕ್ಕೆ ವಹಿವಾಟು ತಲುಪಿದೆ. ಇನ್ನು ನಿಫ್ಟಿ 205.70 ಅಂಕ ಅಥವಾ ಶೇಕಡ 1.12ರಷ್ಟು ಕುಸಿದು 18,214ಕ್ಕೆ ವಹಿವಾಟು ನಡೆಸುತ್ತಿದೆ. 1245 ಷೇರುಗಳು ಏರಿಕೆಯಾಗಿದ್ದರೆ, 1862 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 129 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ.
ಟಾಪ್ ಲೂಸರ್, ನಷ್ಟ ಕಂಡಿರುವ ಸೆಕ್ಟರ್ ಯಾವುದು?
ಅದಾನಿ ಎಂಟರ್‌ಪ್ರೈಸಸ್ ಟಾಪ್ ಗೇನರ್ ಸ್ಟಾಕ್ ಆಗಿದೆ. ಸ್ಟಾಕ್ ಸುಮಾರು ಶೇಕಡ 0.87ರಷ್ಟು ಹೆಚ್ಚಳವಾಗಿದ್ದು 4,110.65 ರೂಪಾಯಿಗೆ ತಲುಪಿದೆ. ಇನ್ನು ಹಿಂಡಾಲ್ಕೊ ಸ್ಟಾಕ್ ಭಾರೀ ನಷ್ಟವನ್ನು ಕಂಡಿದೆ. ಸುಮಾರು ಶೇಕಡ 2.86ರಷ್ಟು ಕುಸಿದು 447.00 ರೂಪಾಯಿಗೆ ಇಳಿದಿದೆ. ಪ್ರಮುಖ ಎಲ್ಲ ಸೆಕ್ಟರ್‌ಗಳು ನಷ್ಟದಲ್ಲಿಯೇ ಇದೆ. ಆದರೆ ಅದರಲ್ಲಿ ನಿಫ್ಟಿ ಫಾರ್ಮಾ ಕೊಂಚ ಉತ್ತಮ ವಹಿವಾಟಿನಲ್ಲಿದೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಭಾರೀ ನಷ್ಟವನ್ನು ಕಂಡಿದೆ.
ಬೆಳ್ಳಿಗ್ಗೆ ಸುಮಾರು 11:25 ಗಂಟೆಗೆ ಟಿಸಿಎಸ್, ಆಕ್ಸಿಸ್ ಬ್ಯಾಂಕ್, ಸನ್‌ಫಾರ್ಮಾ, ನೆಸ್ಲೆ ಇಂಡಿಯಾ, ಇಂಡಸ್‌ಇಂಡ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಎಸ್‌ಬಿಐ ಇನ್ಶೂರೆನ್ಸ್, ಬಜಾಜ್ ಫೈನಾನ್ಸ್, ಐಟಿಸಿ, ಎಚ್‌ಡಿಎಫ್‌ಸಿ, ಬಜಾಜ್ ಫಿನ್‌ಸರ್ವ್, ವಿಪ್ರೋ, ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹೆಚ್‌ಸಿಎಲ್ ಟೆಕ್, ಟೈಟಾನ್, ಮಾರುತಿ, ಏಷ್ಯನ್ ಪೇಂಟ್ಸ್, ಎನ್‌ಟಿಪಿಸಿ, ಪವರ್‌ಗ್ರಿಡ್, ಹಿಂದೂಸ್ತಾನ್ ಯೂನಿಲಿವರ್, ಟೆಕ್ ಎಂ, ಎಂ&ಎಂ, ಎಲ್‌ಟಿ, ಟಾಟಾ ಸ್ಟೀಲ್ಸ್, ಟಾಟಾ ಮೋಟರ್ಸ್, ಭಾರ್ತಿ ಏರ್‌ಟೆಲ್ ಸ್ಟಾಕ್ ಭಾರೀ ಇಳಿಕೆಯಾಗಿದೆ.


Click it and Unblock the Notifications