ಬಾಲಿವುಡ್ ಬಿಗ್‌ಬಿ ಅಮಿತಾಭ್ ಬಚ್ಚನ್ (Amitabh Bachchan) ಆಸ್ತಿ ಖರೀದಿಯ ವಿಚಾರದಲ್ಲಿ ಸುದ್ದಿಯಲ್ಲಿ ಇರುತ್ತಾರೆ. ಆದರೆ, ಇದೀಗ ರಾಮ ಪುಣ್ಯ ಭೂಮಿ ಅಯೋಧ್ಯೆಯಲ್ಲಿ ಮತ್ತೊಂದು ಭೂಮಿಯನ್ನು ಖರೀದಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ. ಹಾಗಿದ್ರೆ, ಅವರು ಖರೀದಿಸಿರುವ ಭೂಮಿಯ ಬೆಲೆ ಎಷ್ಟು..? ರಿಯಲ್ ಎಸ್ಟೇಟ್‌ಗಾಗಿ ಖರೀದಿ ಮಾಡಿದ್ರಾ..? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು,ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಬಾಲರಾಮ (ರಾಮಲಲ್ಲಾ) ಮೂರ್ತಿ ಇರುವ ಮಂದಿರವಿರುವ ಅಯೋಧ್ಯೆಯಲ್ಲಿ ಮತ್ತೊಂದು ಭೂಮಿಯನ್ನು ಖರೀದಿಸುವ ಮೂಲಕ ತಮ್ಮ ರಿಯಲ್ ಎಸ್ಟೇಟ್ ಅನ್ನು ಅಭಿವೃದ್ದಿಪಡಿಸುತ್ತಿದ್ದಾರೆ. ಇವರು ಈ ಬಾರಿ ಮುಂಬೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆ ದಿ ಹೌಸ್ ಆಫ್ ಅಭಿನಂದನ್ ಲೋಧಾ (HoABL) ನಿರ್ಮಿಸಿದ ಐಷಾರಾಮಿ ಪ್ಲಾಟ್ ಅಭಿವೃದ್ಧಿಯಾದ ದಿ ಸರಯು ಪಕ್ಕದಲ್ಲಿ 25,000 ಚದರ ಅಡಿಯ ಭೂಮಿಯನ್ನು ಖರೀದಿ ಮಾಡಿದ್ದಾರೆ. ಭೂಮಿ ಖರೀದಿಸಿರುವ ಒಪ್ಪಂದದ ಮೌಲ್ಯ ಸುಮಾರು 40 ಕೋಟಿ ಎಂದು ಮೂಲಗಳು ಮಾಹಿತಿಯನ್ನು ತಿಳಿಸಿದೆ.

ಕಳೆದ ವರ್ಷದಲ್ಲಿ ನಟ ಅಮಿತಾಭ್ ಬಚ್ಚನ್ 14.5 ಕೋಟಿ ಪ್ಲಾಟ್ ಖರೀದಿ ಮಾಡಿದ್ದರು.ಕಳೆದ ವರ್ಷಕ್ಕಿಂತ ಈ ಬಾರಿಯೇ ಹೆಚ್ಚಿನ ಆಸ್ತಿಯನ್ನು ಖರೀದಿ ಮಾಡಿದ್ದಾರೆ.
ಮಾರ್ಚ್ 2025 ರಲ್ಲಿ ಆದ ವರದಿಯ ಪ್ರಕಾರ, ಅಮಿತಾಭ್ ಬಚ್ಚನ್ ರಾಮ ಮಂದಿರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ 54,454 ಚದರ ಅಡಿ ಜಾಗವನ್ನು ಹರಿವಂಶ್ ರಾಯ್ ಬಚ್ಚನ್ ಟ್ರಸ್ಟ್ ಹೆಸರಿನಲ್ಲಿ ಆಸ್ತಿಯನ್ನು ಖರೀದಿ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಇವರು ಖರೀದಿಸಿದ ಭೂಮಿಯಲ್ಲಿತಂದೆ, ಖ್ಯಾತ ಹಿಂದಿ ಕವಿ ಹರಿವಂಶ್ ರಾಯ್ ಬಚ್ಚನ್ ಅವರ ಜೀವನ ಮತ್ತು ಸಾಹಿತ್ಯ ಕೊಡುಗೆಗಳಿಗೆ ಮೀಸಲಾಗಿರುವ ಸ್ಮಾರಕವನ್ನು ಸ್ಥಾಪಿಸಲು ಈ ಭೂಮಿಯನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಕೆಲವರು ವರದಿ ಮಾಡಿದ್ಧಾರೆ.
ರಾಮ ಮಂದಿರದ ಅದ್ಧೂರಿ ಉದ್ಘಾಟನೆಗೂ ಮುನ್ನ ಅಮಿತಾಭ್ ಬಚ್ಚನ್ 2024 ರಲ್ಲಿಹವೇಲಿ ಅವಧ್‌ನಲ್ಲಿ 4.54 ಕೋಟಿಗೆ 5,372 ಚದರ ಅಡಿ ವಿಸ್ತೀರ್ಣದ ಜಮೀನನ್ನು ಖರೀದಿಸಿದ್ದರು.
ಹಿರಿಯ ನಟ ಅಲಿಬಾಗ್‌ನಲ್ಲಿ 10 ಕೋಟಿಗೆ 10,000 ಚದರ ಅಡಿ ವಿಸ್ತೀರ್ಣದ ಭೂಮಿಯನ್ನು ಖರೀದಿಸಿದ್ದರು.
ಅಯೋಧ್ಯೆಯ ರಿಯಲ್ ಎಸ್ಟೇಟ್
ರಾಮ ಮಂದಿರದ ಉದ್ಘಾಟನೆಯ ನಂತರ ಅಯೋಧ್ಯೆಯಲ್ಲಿ ರಿಯಲ್ ಎಸ್ಟೇಟ್ ವೇಗವಾಗಿ ಬೆಳೆಯುತ್ತಿದೆ. ಜಾಗತಿಕ ಆಧ್ಯಾತ್ಮಿಕ ರಾಜಧಾನಿ ಎಂಬ ಶೀರ್ಷಿಕೆಯ ಲಿಯಾಸೆಸ್ ಫೋರಾಸ್ ವರದಿಯ ಪ್ರಕಾರ, ನಗರದ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಅಭಿವೃದ್ದಿಯಾಗುತ್ತಿದೆ. ಭೂಮಿಯ ಮೌಲ್ಯಗಳ ಏರಿಕೆಯಾಗುತ್ತಿದೆ. ಆಧ್ಯಾತ್ಮಿಕ ಪ್ರವಾಸೋದ್ಯಮವಾಗುತ್ತಿರುವುದರಿಂದ ಹೂಡಿಕೆದಾರು ಹೂಡಿಕೆ ಮಾಡಲು ಮುಂದೆ ಬರುತ್ತಿದ್ದಾರೆ. ಅಯೋಧ್ಯೆಯಲ್ಲಿ ಭೂಮಿಯ ಬೆಲೆಗಳು ಶೇ. 19ರಷ್ಟು ಬೆಳೆದಿವೆ ಎಂದು ವರದಿಗಳು ಹೇಳಿವೆ. 2035ರ ವೇಳೆಗೆ ಇದು ಶೇ. 25ರಷ್ಟು ತಲುಪಬಹುದು ಎಂಬ ನಿರೀಕ್ಷೆಯಿದೆ.
ಅಯೋಧ್ಯೆ ಇನ್ನೂ ಐದು ವರ್ಷಗಳಲ್ಲಿ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆ, ಸುಧಾರಿತ ರಸ್ತೆ ಮತ್ತು ರೈಲು ಸಂಪರ್ಕ ಮತ್ತು ರಾಮ ಮಂದಿರ ನಿರ್ಮಾಣ ಸೇರಿದಂತೆ ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳಿಂದರಿಯಲ್ ಎಸ್ಟೇಟ್‌ಗೆ ಬೆಳವಣಿಗೆಗೆ ಉತ್ತೇಜನೆ ನೀಡುತ್ತದೆ. ಸರಯು ನದಿ ದಂಡೆ ಮತ್ತು ರಾಮ ಮಂದಿರ ಕಾರಿಡಾರ್‌ನಂತಹ ಪ್ರಮುಖ ಪ್ರದೇಶಗಳಲ್ಲಿನ ಭೂಮಿಯ ಮೌಲ್ಯಗಳು 2020 ಮತ್ತು 2025 ರ ನಡುವೆ 4.5 ಪಟ್ಟು ಹೆಚ್ಚಾಗುತ್ತದೆ.
ಆತಿಥ್ಯದ ಉಪಕಾರಕ್ಕೆ ಸಾಕ್ಷಿಯಾಗುತ್ತಿದೆ 50 ಕ್ಕೂ ಹೆಚ್ಚು ಹೊಸ ಹೋಟೆಲ್ ಯೋಜನೆಗಳು ನಡೆಯುತ್ತಿವೆ. ದಿ ಲೀಲಾ, ತಾಜ್ ಮತ್ತು ದಿ ಒಬೆರಾಯ್‌ನಂತಹ ಪ್ರಮುಖ ಐಷಾರಾಮಿ ಹೋಟೆಲ್‌ಗಳು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತೇವೆ.ಅನೇಕ ಮೂಲಸೌಕರ್ಯಗಳು ಅಭಿವೃದ್ದಿಯಾಗುವುದರಿಂದ ಅಯೋಧ್ಯೆಯ ಭೂಮಿ ಬಂಗಾರದ ಬೆಲೆಯಂತೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications