ಬಾಲಿವುಡ್ ದಿಗ್ಗಜ ನಟ ಅಮಿತಾಬ್ ಬಚ್ಚನ್ ತಮ್ಮ 82 ನೇ ಹುಟ್ಟುಹಬ್ಬವನ್ನು ಇತ್ತೀಚೆಗೆ ಆಚರಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ದಂತಕಥೆಯಾದ ಅಮಿತಾಬ್ ಬಚ್ಚನ್ 1969 ರಲ್ಲಿ "ಸಾತ್ ಹಿಂದೂಸ್ತಾನಿ" ಚಿತ್ರದ ಮೂಲಕ ತಮ್ಮ ಸಿನಿ ಬದುಕನ್ನು ಪ್ರಾರಂಭಿಸಿದರು. ಇದರ ನಂತರ "ದೀವಾರ್" ಮತ್ತು "ಶೋಲೆ" ನಂತಹ ಚಲನಚಿತ್ರಗಳು ನಾಯಕ ನಟನಾಗಿ ಖ್ಯಾತಿಯನ್ನು ಹೆಚ್ಚಿಸಿದೆ. ಬಾಲಿವುಡ್ ಕಂಡ ದಿಗ್ಗಜ ನಟರುಗಳಲ್ಲಿ ಅಮಿತಾಬ್ ಬಚ್ಚನ್ ಕೂಡ ಒಬ್ಬರು ಎಂದು ಹೇಳಿದರೆ ತಪ್ಪಾಗಲಾರದು.
ತನ್ನ ಡೈಲಾಗ್, ಹಾವಭಾವ ಹಾಗೂ ತನ್ನ ವಿಶಿಷ್ಟ ಧ್ವನಿಯ ಮೂಲಕ ಗುರುತಿಸಿಕೊಂಡಿರುವ ಅಮಿತಾಬ್ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಹೆಚ್ಚಿನವರು ಅಮಿತಾಬ್ ಅವರನ್ನು ನಟನೆಯ ಮೂಲಕ ಮಾತ್ರ ಗುರುತಿಸಿಕೊಂಡಿದ್ದರೂ ಅವರು ಬುದ್ದಿವಂತಿಕೆಯ ಹೂಡಿಕೆಯಲ್ಲೂ ಎತ್ತಿದ ಕೈ ಎಂದು ಬಹುಶಃ ಹೆಚ್ಚಿನವರಿಗೆ ಗೊತ್ತಿರದ ಸಂಗತಿ. ಇವರು D.P. ವೈಯರ್ಸ್ ಲಿಮಿಟೆಡ್ ಸೇರಿದಂತೆ ಅನೇಕ ಚಿಕ್ಕ ಕ್ಯಾಪ್‌ನ ಕಂಪೆನಿಯಲ್ಲೂ ಹಣ ತೊಡಗಿಸಿಕೊಂಡಿದ್ದಾರೆ.

ಡಿ.ಪಿ. ವೈರ್ಸ್ ಲಿಮಿಟೆಡ್ ಕಂಪೆನಿಯಲ್ಲಿ ಅಮಿತಾಬ್ ಹೂಡಿಕೆ
ಝೀ ಬ್ಯುಸಿನೆಸ್‌ನ ವರದಿಯ ಪ್ರಕಾರ ಬಚ್ಚನ್ ಅವರು ಸ್ಮಾಲ್-ಕ್ಯಾಪ್ ಕಂಪನಿ ಡಿ.ಪಿ. ವೈರ್ಸ್ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡಿದ್ದರು. ಅಲ್ಲದೆ 2018 ರಲ್ಲಿ ಅವರು ಈ ಕಂಪೆನಿಯಲ್ಲಿ 2.45 ಪ್ರತಿಶತ ಪಾಲನ್ನು ಹೊಂದಿದ್ದರು. ಆದರೆ ಬಳಿಕ ಒಂದು ಭಾಗವನ್ನು ಮಾರಾಟ ಮಾಡಿದ್ದರು. ಇನ್ನು 2023 ರ ಮೂರನೇ ತ್ರೈಮಾಸಿಕದ ವೇಳೆಗೆ ಕಂಪೆನಿಯಲ್ಲಿ 1.93 ಪ್ರತಿಶತ ಪಾಲನ್ನು ಹೊಂದಿದ್ದು, 199,310 ಷೇರುಗಳನ್ನು ಹೊಂದಿದ್ದಾರೆ. ಇದಕ್ಕೂ ಮೊದಲು 2023 ರ ಜನವರಿ-ಮಾರ್ಚ್ ಅವಧಿಯಲ್ಲಿ, ಅಮಿತಾಬ್ ಅವರು 332,000 ಷೇರುಗಳನ್ನು ಹೊಂದಿದ್ದರು.
ಡಿ.ಪಿ ಕಂಪೆನಿ ಬಗ್ಗೆ
2017 ರಲ್ಲಿ DP ವೈರ್ಸ್ ಲಿಮಿಟೆಡ್ IPO ಪ್ರಾರಂಭವಾಗಿದ್ದು, ಪ್ರತೀ ಷೇರುಗಳು 75 ರೂ.ಗಳನ್ನು ಹೊಂದಿದೆ. ಇನ್ನು ಕಂಪನಿಯು ಉಕ್ಕಿನ ತಂತಿ, ಪ್ಲಾಸ್ಟಿಕ್ ಪೈಪ್‌ಗಳು ಮತ್ತು ಪ್ಲಾಸ್ಟಿಕ್ ಫಿಲ್ಮ್‌ಗಳನ್ನು ತಯಾರಿಕೆ ಹಾಗೂ ಪೂರೈಕೆಯಲ್ಲಿ ಹೆಚ್ಚಿನ ಪರಿಣತಿ ಹೊಂದಿದೆ.
ಇನ್ನು 2025 ರ ಮೊದಲ ತ್ರೈಮಾಸಿಕದಲ್ಲಿ DP ವೈರ್ಸ್ ವರ್ಷದಿಂದ ವರ್ಷಕ್ಕೆ 31.15 ಪ್ರತಿಶತದಷ್ಟು ಆದಾಯ ಕುಸಿತವನ್ನು ಕಂಡಿದೆ. ಅಂದರೆ ಒಟ್ಟು 184ಕೋಟಿ ರೂ.ನಷ್ಟು ಆದಾಯ ನಷ್ಟ ಸಂಭವಿಸಿದೆ. ಅಲ್ಲದೆ ಕಂಪನಿಯ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ 35.28 ಪ್ರತಿಶತದಷ್ಟು ಕುಸಿದಿದೆ. ಅಲ್ಲದೆ ನಿವ್ವಳ ಲಾಭದ ಪ್ರಮಾಣವು 6.01 ಪ್ರತಿಶತದಿಂದ 3.91 ಪ್ರತಿಶತಕ್ಕೆ ಇಳಿಕೆ ಕಂಡಿದೆ.
ಪ್ರಸಕ್ತ ವರ್ಷದಲ್ಲಿ ಭಾರೀ ಕುಸಿತ
ಇನ್ನು ಕಳೆದ ಶುಕ್ರವಾರದ ವಹಿವಾಟಿನಲ್ಲಿ ಡಿಪಿ ವೈರ್ಸ್ ಷೇರುಗಳು ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 0.54 ಪ್ರತಿಶತ ಅಂದರೆ 2.25 ಪಾಯಿಂಟ್‌ಗಳ ಇಳಿಕೆ ಕಂಡಿದೆ. ಈ ಸ್ಮಾಲ್-ಕ್ಯಾಪ್ ಸ್ಟಾಕ್ ಈ ವರ್ಷ ಇಲ್ಲಿಯವರೆಗೆ 27.44 ಪ್ರತಿಶತದಷ್ಟು ಕುಸಿದಿದೆ. ಕಳೆದ 52 ವಾರಗಳಲ್ಲಿ ಕಂಪೆನಿಯ ಷೇರುಗಳು ಅತೀ ಹೆಚ್ಚು 681.45 ರೂ.ಗಳ ಏರಿಕೆ ಹಾಗೂ 383 ರೂ.ಗಳ ಅತ್ಯಲ್ಪ ಇಳಿಕೆ ಕೂಡ ಕಂಡಿದೆ.
ಕಳೆದ ಆರು ತಿಂಗಳುಗಳಲ್ಲಿ ಷೇರುಗಳು 20.29 ಪ್ರತಿಶತದಷ್ಟು ಕುಸಿದಿದ್ದು, ಒಂದು ವರ್ಷದ ಹಿಂದೆ ಹೋಲಿಸಿದರೆ ಅವು 29.25 ಪ್ರತಿಶತದಷ್ಟು ಕಡಿಮೆಯಾಗಿದೆ. ಪ್ರಸ್ತುತ ಡಿಪಿ ವೈರ್ಸ್ ಲಿಮಿಟೆಡ್ 641 ಕೋಟಿ ರೂ.ಗಳ ಪ್ರಭಾವಶಾಲಿ ಮಾರುಕಟ್ಟೆ ಬಂಡವಾಳವನ್ನು ಕೂಡ ಹೊಂದಿದೆ.
ಹೂಡಿಕೆಯಲ್ಲೂ ಜಾಣ್ಮೆ ಪ್ರದರ್ಶಿಸುತ್ತಿರುವ ಅಮಿತಾಬ್
ಅಮಿತಾಬ್ ಬಚ್ಚನ್ ಕೇವಲ ನಟನೆಯಿಂದಲೂ ಅಲ್ಲದೆ ಹೂಡಿಕೆ ವಿಚಾರದಲ್ಲೂ ಜಾಣ್ಮೆ ಪ್ರದರ್ಶಿಸುತ್ತಿದ್ದಾರೆ. ನಿಯಮಿತವಾಗಿ ಷೇರುಗಳ ಮೇಲೆ ವ್ಯಯಿಸುತ್ತಿರುವ ಬಚ್ಚನ್ ಆರ್ಥಿಕ ತಜ್ಞರ ಸಲಹೆ ಮೇರೆಗೆ ಹೂಡಿಕೆ ಮಾಡುತ್ತಿರುವುದು ಸದ್ಯ ತಿಳಿದುಬಂದಿದೆ. ಸದ್ಯ ಸ್ಮಾಲ್ ಕ್ಯಾಪ್ ಹೂಡಿಕೆ ಮೂಲಕ ಅವರು ಬರೊಬ್ಬರಿ 600 ಪ್ರತಿಶತ ಲಾಭ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ.
ವಿವಿಧ ಮೂಲಗಳಿಂದ ಲಾಭ
ಕೇವಲ ಒಂದು ಮೂಲದಿಂದಲೇ ಆದಾಯ ಅಥವಾ ಲಾಭ ನಿರೀಕ್ಷಿಸುವುದು ಮೂರ್ಖತನ ಎಂಬ ಮಾತು ನಿಜವಾಗಿದೆ. ವಿವಿಧ ಮೂಲಗಳಲ್ಲಿ ಹಣವನ್ನು ಬುದ್ದಿವಂತಿಕೆಯಿಂದ ತೊಡಗಿಸಿಕೊಳ್ಳುವ ಮೂಲಕ ಹೆಚ್ಚಿನ ಪ್ರಮಾಣದ ಸಂಪತ್ತಿನ ಕ್ರೋಢೀಕರಣ ಸಾಧ್ಯವಾಗಿದೆ
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications