Amul Milk Price Hike: ನಂದಿನಿ ಹಾಲಿನ ದಾರ ಆಯ್ತು ಇದೀಗ ಅಮುಲ್ ಹಾಲಿನ ಸರತಿ.. ಹೌದು,ಅಮುಲ್ ಸಂಸ್ಥೆಯ ಎಲ್ಲ ಮಾದರಿಯ ಹಾಲಿನ ಬೆಲೆ ದೇಶಾದ್ಯಂತ ಪ್ರತೀ ಲೀಟರ್‍ಗೆ 2 ರೂ. ಹೆಚ್ಚಳವನ್ನು ಮಾಡಲಾಗಿದೆ. ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರುತ್ತದೆ ಎಂದು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್) ಈ ಬಗ್ಗೆ ಬುಧವಾರ ( ಏಪ್ರಿಲ್ 30)ರಂದು ಘೋಷಣೆ ಮಾಡಿದ್ದಾರೆ. ಇದರಿಂದ ಜನರ ಮೇಲೆ ಮತ್ತೆ ಬೆಲೆ ಏರಿಕೆಯ ಶಾಕ್ ತಟ್ಟಲಿದೆ.

ಅಮುಲ್ ಹಾಲಿನ ಬೆಲೆ ಏರಿಕೆಪ್ರತೀ ಲೀ.ಗೆ 2 ರೂ. ಹೆಚ್ಚಳವಾಗಿರುವುದು ಎಂಆರ್‌ಪಿಯಲ್ಲಿ ಶೇ.3-4ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ. ಇದು ಇನ್ನಿತರ ಆಹಾರ ಪದಾರ್ಥಗಳ ಸರಾಸರಿ ಹಣದುಬ್ಬರಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ಎಂದು ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.
ಗುಜರಾತ್‌ನ ಹೊಸ ಅಮುಲ್ ಹಾಲಿನ ದರಗಳ ಪ್ರಕಾರ, 500 ಮಿಲಿ ಅಮುಲ್ ಗೋಲ್ಡ್ ಬೆಲೆ ಈಗ 34 ರೂ., 1 ಲೀಟರ್ ಪ್ಯಾಕ್ ಬೆಲೆ 67 ರೂ., ಅಮುಲ್ ಶಕ್ತಿ 500 ಮಿಲಿ ಪೌಚ್‌ಗೆ 31 ರೂ., ಅಮುಲ್ ತಾಜಾ 500 ಮಿಲಿ ಪೌಚ್‌ಗೆ 28 ರೂ. ಮತ್ತು 1 ಲೀಟರ್ ಪೌಚ್‌ಗೆ 55 ರೂ., 500 ಮಿಲಿ ಪೌಚ್ ಎಮ್ಮೆ ಹಾಲು ಈಗ 37 ರೂ. ಮತ್ತು 1 ಲೀಟರ್ ಪೌಚ್‌ಗೆ 73 ರೂ., ಅಮುಲ್ ಟಿ ಸ್ಪೆಷಲ್ ಸ್ಟ್ಯಾಂಡರ್ಡ್ ಒಂದು ಲೀಟರ್ ಪೌಚ್‌ಗೆ 63 ರೂ.,ಹಸುವಿನ ಹಾಲು 500 ಮಿಲಿ ಪೌಚ್‌ಗೆ 29 ರೂ. ಆಗುತ್ತದೆ.
ಕಳೆದ ವರ್ಷದಲ್ಲಿ ಸುಮಾರು ಐದು ತಿಂಗಳ ಕಾಲ 1 ಲೀಟರ್ ಮತ್ತು 2 ಲೀಟರ್ ಪ್ಯಾಕ್‌ಗಳಿಗೆ 50 ಮಿಲಿ ಮತ್ತು 100 ಮಿಲಿ ಹೆಚ್ಚುವರಿ ಹಾಲನ್ನು ನೀಡುವ ಮೂಲಕ ಅಮುಲ್ ಗ್ರಾಹಕರಿಗೆ ಅನುಕೂಲವನ್ನು ನೀಡಿತ್ತು.ಇದು ಆದ ನಂತರ ಜನವರಿ 2025 ರಿಂದ ಎಲ್ಲಾ ಮಾರುಕಟ್ಟೆಗಳಲ್ಲಿ 1 ಲೀಟರ್ ಪ್ಯಾಕ್‌ಗಳ ಬೆಲೆಯನ್ನು 1 ರೂ. ಇಳಿಕೆಯನ್ನು ಸಹ ಮಾಡಲಾಗಿತ್ತು. ಜೂನ್ 2024 ರಿಂದ GCMMF ತಾಜಾ ಪೌಚ್ ಹಾಲಿನ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ ಆದ್ದರಿಂದ ಈ ತಿಂಗಳು ಬೆಲೆ ಹೆಚ್ಚಳಕ್ಕೆ ಮುಂದಾಗಿದೆ.
ಅಮುಲ್ ಹಾಲಿನ ದರ ಹೆಚ್ಚಳಕ್ಕೆ ಕಾರಣವೇನು..?
ಹಾಲು ಉತ್ಪಾದಕರಿಗೆ 36 ಲಕ್ಷ ಹಾಲು ಉತ್ಪಾದನೆಯ ಇನ್ಪುಟ್ ವೆಚ್ಚದಲ್ಲಿನ ಹೆಚ್ಚಳ ಬೆಲೆ ಏರಿಕೆಗೆ ಕಾರಣ ಎಂದು ಹೇಳಿಕೆಯಲ್ಲಿ ಮಾಹಿತಿಯನ್ನು ತಿಳಿಸಿದೆ.
ನಮ್ಮ ಸದಸ್ಯ ಸಂಘಗಳು ಕಳೆದ ಒಂದು ವರ್ಷದಿಂದ ರೈತರ ಬೆಲೆಯನ್ನು ಅದೇ ಪ್ರಮಾಣದಲ್ಲಿ ಹೆಚ್ಚಿಸಿವೆ. ಅಮುಲ್ ಪಾಲಿಸಿಯಂತೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಹಾಲು ಉತ್ಪಾದಕರಿಗೆ ಪಾವತಿಸುವ ಪ್ರತಿ ರೂಪಾಯಿಯಲ್ಲಿ ಸುಮಾರು 80 ಪೈಸೆಯನ್ನು ಪಾಸು ಮಾಡುತ್ತದೆ. ಬೆಲೆ ಪರಿಷ್ಕರಣೆಯು ನಮ್ಮ ಹಾಲು ಉತ್ಪಾದಕರಿಗೆ ಲಾಭದಾಯಕ ಹಾಲಿನ ಬೆಲೆಗಳನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿನ ಹಾಲು ಉತ್ಪಾದನೆಗೆ ಅವರನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ.
ಬೆಲೆ ಏರಿಕೆಗಳ ಬಿಸಿ ಸರಣಿಗೆ ತುತ್ತಾಗಿರುವ ಜನತೆಗೆ ಇದೀಗ ಅಮುಲ್ ಹಾಲಿನ ದರ ಏರಿಕೆ ಹೊಸ ದರಗಳು ಕಾವು ಜನರನ್ನು ಸುಡಲಿದೆ.
ನಂದಿನಿ ಹಾಲಿನ ದರ ಕೂಡ ಇದೇ ತಿಂಗಳಲ್ಲಿ ಏರಿಕೆಯಾಗಿದೆ. ನೆನ್ನೆಯಷ್ಟೇ (ಏಪ್ರಿಲ್ 30) ಮದರ್ ಡೈರಿ ಹಾಲಿನ ಬೆಲೆಯನ್ನು ಲೀಟರ್‍ಗೆ 2 ರೂ. ಹೆಚ್ಚಿಗೆಯನ್ನು ಮಾಡಿತ್ತು ಇದೀಗ ಅಮುಲ್ ಹಾಲಿನ ದರ ಏರಿಕೆ ಮಾಡಿ ಗ್ರಾಹರರಿಗೆ ಮತ್ತೋದು ಬರೆ ಎಳೆದಿದೆ.


Click it and Unblock the Notifications