ಬೆಂಗಳೂರು : ಬದುಕಿನಲ್ಲಿ ಸವಾಲುಗಳು ಬರುವುದು ಸಹಜ. ಹಾಗೆ ಜೀವನ ಅಂದ ಮೇಲೆ ಏರಿಳಿತಗಳು ಆಗುವುದು ಕೂಡ ಸಹಜ. ಇಲ್ಲಿವೊಬ್ಬ ವ್ಯಕ್ತಿ ಇಂಜಿನಿಯರ್ ಆಗಿದ್ದವನು ಜೀವನದಲ್ಲಿ ಆದಂತ ಏರುಪೇರುಗಳಿಗೆ ಬೇಸತ್ತು ಕುಡಿಯುವ ಚಟ ಬೆಳೆಸಿಕೊಂಡು ನಂತರ ಈಗ ಜೋವನೋಪಾಯಕ್ಕಾಗಿ ಭಿಕ್ಷಾಟನೆಯನ್ನ ಮಾಡುತ್ತಿದ್ದಾನೆ.
ಟೆಕ್ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ವ್ಯಕ್ತಿ ಫ್ರಾಂಕ್‌ಫರ್ಟ್‌ನ ಮಾಜಿ ವಿದ್ಯಾರ್ಥಿಯಾಗಿದ್ದು, ಒಮ್ಮೆ ಯಶಸ್ವಿ ವೃತ್ತಿಪರ ಕೂಡ ಆಗಿದ್ರು. ಆ ರೀತಿ ಜೀವನ ಕಟ್ಟಿಕೊಂಡಿದ್ದ ಈ ವ್ಯಕ್ತಿ ಸಧ್ಯ ಈಗ ಬೆಂಗಳೂರಿನ ಬೀದಿಗಳಲ್ಲಿ ಭಿಕ್ಷಾಟನೆಗೆ ಇಳಿದಿದ್ದಾನೆ. ಇನ್ನು ಇವನ ಈ ಹೃದಯವಿದ್ರಾವಕ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲರ ಚರ್ಚೆಗೆ ಗ್ರಾಸವಾಗಿದೆ.

ವ್ಯಕ್ತಿಯ ಕಥೆಯನ್ನು ಸಾಮಾಜಿಕ ಮಾಧ್ಯಮ Instagramನಲ್ಲಿ @sharath_yuvaraja_official ಮೂರು ವೀಡಿಯೊ ಪೋಸ್ಟ್ ಒಂದನ್ನು ಒಂದು ವಾರದ ಹಿಂದೆ ಹಂಚಿಕೊಂಡಿದ್ದಾರೆ.
ಮೊದಲ ವೀಡಿಯೊದಲ್ಲಿ, ಅವರು ಕೆಂಪು ಟಿ-ಶರ್ಟ್ ಧರಿಸಿ, ಬಿಕ್ಷುಕನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟ್‌ನ ಪ್ರಕಾರ, ಆ ವ್ಯಕ್ತಿ ತನ್ನ MS ಅನ್ನು ಫ್ರಾಂಕ್‌ಫರ್ಟ್‌ನಲ್ಲಿ ಪೂರ್ಣಗೊಳಿಸಿದ್ದು, ಮೈಸೂರು ರಸ್ತೆಯ ಸಮೀಪವಿರುವ ಸತ್ವ ಗ್ಲೋಬಲ್ ಸಿಟಿ ಎಂದು ಕರೆಯಲ್ಪಡುವ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್‌ನಲ್ಲಿ ಪ್ರಮುಖ ಟೆಕ್ ಕನ್ಸಲ್ಟಿಂಗ್ ಕಂಪನಿಯೊಂದಿಗೆ ಕೆಲಸ ಮಾಡುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಂದು ಮಿಲಿಯನ್‌ಗೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಇದರಿಂದ ವ್ಯಕ್ತಿ ಚೇತರಿಸಿಕೊಳ್ಳಲು ಆಡಳಿತ ಮತ್ತು ಇತರ ಏಜೆನ್ಸಿಗಳು ಸಹಾಯ ಮಾಡುವಂತೆ ಖಾತೆಯ ಬಳಕೆದಾರರು ಒತ್ತಾಯಿಸಿದ್ದಾರೆ.
ಆದರೆ ಅವನು ತನ್ನ ತಂದೆ-ತಾಯಿ ಮತ್ತು ಗೆಳತಿಯನ್ನು ಕಳೆದುಕೊಂಡ ನಂತರ ಅವನ ಜೀವನವು ಅನಿರೀಕ್ಷಿತ ತಿರುವು ಪಡೆದ ಹಿನ್ನೆಲೆ ಮದ್ಯಪಾನ ಮಾಡಲು ಆರಂಭಿಸಿದ್ದ ಈ ವ್ಯಕ್ತಿ, ಈಗ ಜೀವನೋಪಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅವರ ವೀಡಿಯೊಗಳನ್ನು ಪೋಸ್ಟ್ ಮಾಡಿದ ಖಾತೆಯ ಪ್ರಕಾರ, ಅವರು ಜಯನಗರ 8ನೇ ಬ್ಲಾಕ್‌ನ ಜೆಎಸ್‌ಎಸ್ ಕಾಲೇಜು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿರುವುದು ಕಂಡುಬಂದಿದೆ. ವೀಡಿಯೊದ ಕೆಳಗೆ ಕಾಮೆಂಟ್ ಮಾಡಿರುವವರು ಯಾರೋ ಅವರನ್ನು ಕೆಲವು ದಿನಗಳ ಹಿಂದೆ 4ನೇ ಬ್ಲಾಕ್‌ನಲ್ಲಿ ಕುಡಿದ ಸ್ಥಿತಿಯಲ್ಲಿ ನೋಡಿದ್ದಾಗಿ ಹೆಳಿದ್ದಾರೆ. ಜೊತೆಗೆ ಎಲ್ಲಿಗೂ ಕರೆದುಕೊಂಡು ಹೋಗಲು ಒಪ್ಪಿರಲಿಲ್ಲ ಎನ್ನಲಾಗಿದೆ.
ವೀಡಿಯೊಗಳನ್ನು ಪೋಸ್ಟ್ ಮಾಡಿದ ವ್ಯಕ್ತಿ ಶರತ್, ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ಸಹಾಯಕ್ಕಾಗಿ ಎನ್‌ಜಿಒ ಅನ್ನು ಸಂಪರ್ಕಿಸಿರುವುದಾಗಿ ಹೇಳಿಕೊಳ್ಳುವುದು ಸೇರಿದಂತೆ ತನ್ನ ಪ್ರಕರಣದ ಕುರಿತು ತನ್ನ ಫಾಲೋವರ್ಸ್ಗಳಿಗೆ ಇದರ ಕುರಿತು ಫಾಲೋ-ಅಪ್ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಇನ್ನು ಅದರಲ್ಲಿ ನಾವು ಪೊಲೀಸ್ ಹಸ್ತಕ್ಷೇಪವಿಲ್ಲದೆ ಯಾವುದೇ ಎನ್‌ಜಿಒ ವ್ಯಕ್ತಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ನೆಟಿಜನ್‌ಗಳ ಪ್ರತಿಕ್ರಿಯೆ ಏನು?
ಇನ್ನು ಈ ವ್ಯಕ್ತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ಒಬ್ಬರು ಈ ವ್ಯಕ್ತಿಗೆ @IncomeTaxIndia ಅವರ ಸಹಾಯದ ಅಗತ್ಯವಿದೆ. ಹೀಗಾಗಿ ಅವರ ತೆರಿಗೆಯನ್ನು ಮರುಪಾವತಿ ಮಾಡಿ ಎಂದಿದ್ದಾರೆ. ತೆರಿಗೆ ಪಾವತಿದಾರರು ಅಗತ್ಯವಿದ್ದಾಗ ಯಾವುದೇ ಸಹಾಯವನ್ನು ಪಡೆಯದಿದ್ದರೆ ಪಾವತಿಸಿದ ತೆರಿಗೆಯ ಬಳಕೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಮತ್ತೊಬ್ಬರು ಸರ್ಕಾರವು ದೊಡ್ಡ ತೆರಿಗೆಯನ್ನ ತೆಗೆದುಕೊಳ್ಳುತ್ತದೆ. ಆದರೆ ಅಗತ್ಯವಿದ್ದಾಗ ಸಹಾಯಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಆ ಭಿಕ್ಷೆ ಬೇಡುತ್ತಿರುವ ವ್ಯಕ್ತಿ ಎಂಎಸ್ ಅಭ್ಯರ್ಥಿಯಾಗಿದ್ದರಿಂದ ಅವರುಕನಿಷ್ಢ 30-80 ಲಕ್ಷ ಸಂಬಳ ಇರುತ್ತದೆ ಹೀಗಾಗಿ ಅವರು ಹೆಚ್ಚಿನ ತೆರಿಗೆಯನ್ನ ಕಟ್ಟಿರುತ್ತಾರೆ. ಹೀಗಾಗಿ ಅವರ ತೆರಿಗೆಯನ್ನ ತೆರಿಗೆ ಅಧಿಕಾರಿಗಳು ಮರುಪಾವತಿಸುವ ಕೆಲಸ ಮಾಡಬೇಕು ಆದರೆ ಸರ್ಕಾರ ಆ ಕೆಲಸವನ್ನ ಮಾಡುವುದಿಲ್ಲ ಎಂದು ಇನ್ನೊಬ್ಬ ಬಳಕೆದಾರರು ಹೇಳೀದ್ದಾರೆ.
ಅವರ ಹೋರಾಟದ ಬಗ್ಗೆ ಕೇಳಲು ಇದು ನಿಜವಾಗಿಯೂ ದುಖಃವಾಗುತ್ತದೆ. ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದರಿಂದ ಜೀವನದಲ್ಲಿ ಇಂತಹ ಏರಿಪೇರುಗಳಾಗಬಹುದು. ಇನ್ನು ಅವರು ಚೇತರಿಸಿಕೊಳ್ಳಲು ಮತ್ತು ಮತ್ತೆ ಮೊದಲಿನಂತಾಗಲು ಅಗತ್ಯವಿರುವ ಬೆಂಬಲವನ್ನು ಅವರಿಗೆ ಸಿಗಲಿ, ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.


Click it and Unblock the Notifications