ಬೆಂಗಳೂರಿನ ಇಂಜಿನಿಯರ್ ಒಬ್ಬರು ಈಗ ಸೇವಂತಿ ಬೆಳೆಯನ್ನ ಬೆಳೆಯುವ ಮೂಲಕ ತಿಂಗಳಿಗೆ 7 ಲಕ್ಷದವರೆಗೆ ಹಣವನ್ನ ಗಳಿಸುತ್ತಿದ್ದಾರೆ. ಇಂಜಿನಿಯರ್ ಆಗಿರುವ ಲೋಹಿತ್ ರೆಡ್ಡಿ ಅವರು ವೇಮನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಬಿಇ (ಎಲೆಕ್ಟ್ರಾನಿಕ್ಸ್) ಮುಗಿಸಿದ ನಂತರ, ಲೋಹಿತ್ ರೆಡ್ಡಿ ಬೆಂಗಳೂರಿನಲ್ಲಿ ಕಾರ್ಪೊರೇಟ್ ಉದ್ಯೋಗಕ್ಕೆ ಹೋಗಬಹುದಿತ್ತು.
ಆದರೆ ಅವರು ಹಾಗೆ ಮಾಡದೆ 2018 ರಲ್ಲಿ ಬೆಂಗಳೂರಿನ ಕೊಮ್ಮಸಂದ್ರದಲ್ಲಿ ಅರ್ಧ ಎಕರೆಯಲ್ಲಿ ಹೂವಿನ ಕೃಷಿಯನ್ನು ಪ್ರಾರಂಭಿಸಿದರು. ಆದ್ರೆ ಇಂದು ಅವರು 2.5 ಎಕರೆಯಲ್ಲಿ ಸೇವಂತಿಗೆ ಹೂಗಳನ್ನ ಬೆಳೆದು ಭಾರತದಾದ್ಯಂತ ಮಾರಾಟ ಮಾಡುತ್ತಾರೆ. ಇನ್ನು ಅವರು ಪ್ರತಿ ತಿಂಗಳು 7 ಲಕ್ಷ ರುಪಾಯಿಗಳನ್ನ ಗಳಿಸುತ್ತಿದ್ದಾರೆ. ಇತರೆ ಹೂ ಬೆಳೆಗಾರರಿಗೂ ಕೂಡ ಮಾರುಕಟ್ಟೆಗೆ ನೆರವಾಗುತ್ತಿದ್ದಾರೆ.

ಅಲ್ಲದೆ ಲೋಹಿತ್ ಹೂವುಗಳು ಮತ್ತು ಹಸಿರಿನ ನಡುವೆ ಸಮಯ ಕಳೆಯಲು ಇಷ್ಟಪಡುತ್ತಿದ್ದರು ಮತ್ತು ಕಟ್ಟಡಗಳ ಮಧ್ಯೆ ಜೀವನ ನಡೆಸಲು ಇಷ್ಟಪಡಲಿಲ್ಲ. ಹೂವುಗಳ ನಡುವೆ ಇರುವುದು ಅವರಿಗೆ ಸಂತೋಷವನ್ನ ನೀಡುತ್ತಿತ್ತು.
ಇನ್ನು ಈ ಕುರಿತು ಅವರೇ ಹೇಳಿಕೊಂಡಿರುವಂತೆ, ಅವರು ಕೃಷಿಕ ಕುಟುಂಬದಿಂದ ಬಂದಿದ್ದು, 2016ರಲ್ಲಿ ಅವರು ಇಂಜಿನಿಯರಿಂಗ್ ಮುಗಿಸುತ್ತಾರೆ. ನಂತರ ಹೂವಿನ ತೋಟವನ್ನು ಹೊಂದಿರುವ ನನ್ನ ಸೋದರಸಂಬಂಧಿಗೆ ಸಹಾಯ ಮಾಡಲು ಪ್ರಾರಂಭಿಸುತ್ತಾರೆ. ಜೊತೆಗೆ ಅವರು ಹಗಲಿನಲ್ಲಿ ಕೃಷಿಯನ್ನು ನೋಡಿಕೊಂಡು ಮತ್ತು ರಾತ್ರಿಯಲ್ಲಿ ಬೆಂಗಳೂರು ಮಾರುಕಟ್ಟೆಗೆ ಮಾರಾಟಕ್ಕಾಗಿ ಹೂಗಳನ್ನು ತೆಗೆದುಕೊಂಡು ಹೋಗುತ್ತಿದ್ದರಂತೆ.
ಜೊತೆಗೆ ಯಾವುದೇ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಇನ್ನು ನಿಮ್ಮ ಉತ್ಪನ್ನಗಳನ್ನು ಯಾರು ಖರೀದಿಸುತ್ತಾರೆ ಮತ್ತು ಎಲ್ಲಿ ಮಾರುತ್ತಾರೆ ಎಂಬುದನ್ನು ನೀವು ತಿಳಿದಿರಬೇಕು, "ಎಂದು ಲೋಹಿತ್ ಅಭಿಪ್ರಾಯಪಟ್ಟಿದ್ದಾರೆ.
ಹೂವುಗಳ ಜೊತೆ ಲೋಹಿತ್ ಅವರ ಪಯಣ ಹೇಗಿತ್ತು?
ಲೋಹಿತ್ ಅವರಿಗೆ 2018ರ ಹೊತ್ತಿಗೆ, ಹೂಗಾರಿಕೆ (ವಾಣಿಜ್ಯ ಹೂವಿನ ಕೃಷಿ) ಮತ್ತು ಹೂವುಗಳ ಮಾರಾಟದ ಬಗ್ಗೆ ಒಂದಿಷ್ಟು ಜ್ಞಾನವನ್ನು ಪಡೆದರು ಮತ್ತು ಸ್ವತಂತ್ರವಾಗಿ ಹೂವುಗಳನ್ನ ಬೆಳೆಯಲು ನಿರ್ಧರಿಸಿದರು. ಇನ್ನು ಇವರ ಕುಟುಂಬ ಕೊಮ್ಮಸಂದ್ರದಲ್ಲಿ ನಾಲ್ಕು ಎಕರೆ ಜಮೀನಲ್ಲಿ ರಾಗಿ, ಉದ್ದು ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದರು.
ಹೂಗಳನ್ನು ಬೆಳೆಯಲು ಲೋಹಿತ್ ಅವರು ಅವರ ತಂದೆಯ ಬಳಿ ಅರ್ಧ ಎಕರೆಯಲ್ಲಿ ಪಾಲಿಹೌಸ್ ಹಾಕಲು ಕೇಳಿದ್ದರಂತೆ. ಆರಂಭದಲ್ಲಿ, ಅವರ ಕುಟುಂಬ ಹೂವಿನ ಕೃಷಿಯ ಬಗ್ಗೆ ಆಸಕ್ತಿ ತೋರಲಿಲ್ಲವಂತೆ. ಆದರೆ ಲೋಹಿತ್ ಅವರ ಮೇಲೆ ವಿಶ್ವಾಸವಿಟ್ಟು ಸ್ವಲ್ಪಮಟ್ಟಿಗೆ ಒಪ್ಪಿಕೊಂಡರಂತೆ.
ಹೂವಿನ ಬೆಳೆಗಾಗಿ ಮೊದಲು ಅವರು ಒಂದು ನೀರಿನ ಕೊಳವನ್ನು ನಿರ್ಮಿಸಿ ನಂತರ ಬೆಳೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನ ಸ್ಥಾಪಿಸಿದರು. ಅವರು ಮೊದಲು ಜರ್ಬೆರಾ ಕೃಷಿಯೊಂದಿಗೆ ಪ್ರಾರಂಭಿಸಿದರು ಮತ್ತು ಪುಣೆಯ ನರ್ಸರಿಯಿಂದ 12,000 ಗಿಡಗಳನ್ನು ತಂದು ತಮ್ಮ ಜಮೀನಿನಲ್ಲಿ ಬೆಳೆಯಲು ಆರಂಭಿಸಿದರು. ಗಿಡಗಳನ್ನ ಖರೀದಿ ಮಾಡಲು, ನೀರಾವರಿಗಾಗಿ, ಪಾಲಿಹೌಸ್ ಮತ್ತು ಇತರ ಮೂಲಸೌಕರ್ಯಗಳಿಗಾಗಿ ಒಟ್ಟು 20 ಲಕ್ಷ ರೂ. ಹಣವನ್ನ ಅವರು ಹೂಡಿಕೆ ಮಾಡಿದ್ದರು.
ಹಾಗೆ ಲೋಹಿತ್ ಮಾರ್ಚ್ 2018ರಲ್ಲಿ ಜರ್ಬೆರಾ ಗಿಡಗಳನ್ನ ನೆಟ್ಟರು ಮತ್ತು ಅವು ಮೇ ತಿಂಗಳಲ್ಲಿ ಹೂಬಿಡಲು ಶುರು ಮಾಡಿದವು. ಅವರು ಈ ಬೆಳೆಯನ್ನ ಆರಂಭಿಸಲು 3 ತಿಳಗಳು ತೆಗೆದುಕೊಳ್ಳುತ್ತಾರೆ. ಆದ್ರೆ ಒಮ್ಮೆ ಆರಂಭಿಸಿದ ನಂತರ ಇದೇ ಕೃಷಿಯನ್ನ ತಮ್ಮ ಜೀವನವನ್ನಾಗಿ ಮಾಡಿಕೊಳ್ಳುತ್ತಾರೆ.
ಇನ್ನು ಪ್ರತಿ ಜರ್ಬೆರಾ ಸಸ್ಯವು ದಿನಕ್ಕೆ ನಾಲ್ಕು ಹೂವುಗಳನ್ನು ಬಿಡುತ್ತದೆ. ಮತ್ತು ಅವರು ಈ ಹೂವಿನಿಂದಾಗಿ ಬೆಂಗಳೂರು ಮಾರುಕಟ್ಟೆಯಲ್ಲಿ ತಿಂಗಳಿಗೆ 40,000 ರಿಂದ 50,000 ಜರ್ಬೆರಾಗಳನ್ನು ಮಾರಾಟ ಮಾಡುತ್ತಾರೆ, ಇದರಿಂದ ಅವರು ತಿಂಗಳಿಗೆ 1.5 ಲಕ್ಷ ರೂಗಳನ್ನ ಗಳಿಸುತ್ತಾರೆ. ಹಾಗೆ ಒಂದು ವರ್ಷದಲ್ಲಿ 18 ಲಕ್ಷ ರೂವರೆಗೆ ಗಳಿಸುತ್ತಾರೆ.
ಕ್ರೈಸಾಂಥೆಮಮ್‌ಗಳನ್ನು ಹೇಗೆ ಬೆಳೆಯಲಾಗುತ್ತದೆ
ಇವರ ಈ ಯಶಸ್ಸು ಒಂದು ಎಕರೆಯಿಂದ ಒಟ್ಟು 1.5 ಎಕರೆಗೆ ಕೃಷಿಯನ್ನು ವಿಸ್ತರಿಸಲು ಪ್ರೇರಣೆ ನೀಡತು ಎನ್ನಬಹುದು. ಹಾಗೆ ಹೂವು ಬೆಳೆಯನ್ನ ಆರಂಬಿಸಿದ ನಂತರ ಅವರು ಸ್ಥಳೀಯ ನರ್ಸರಿಯಿಂದ ಸೇವಂತಿಗೆ ಗಿಡಗಳನ್ನು ಖರೀದಿಸಿದರು. ಒಂದು ಗಿಡದ ಬೆಲೆ ಕೇವಲ 2 ರೂಪಾಯಿಯಂತೆ ಅವರು ಖರೀದಿಸಿ, ಪ್ರತಿ ಹೂವನ್ನು (ಒಂದು ಸಸ್ಯವು ಕೇವಲ ಒಂದು ಹೂವಿನ ಕಡ್ಡಿಯನ್ನು ಮಾತ್ರ ನೀಡುತ್ತದೆ) 15 ರೂಪಾಯಿಗೆ ಮಾರಾಟ ಮಾಡಬಹುದು ಎಂದು ಅವರೇ ಹೇಳಿಕೊಂಡಿದ್ದಾರೆ.
ಕ್ರೈಸಾಂಥೆಮಮ್‌ಗಳನ್ನು ವರ್ಷವಿಡೀ ಬೆಳೆಸಬಹುದು, ಇದರಿಂದ ನಮಗೆ ಸ್ಥಿರವಾದ ಆದಾಯವನ್ನು ಸಿಗುತ್ತದೆ ಎಂದು ಅವರು ಅಭಿಪ್ರಯಪಟ್ಟಿದ್ದಾರೆ. ಗಿಡಗಳ ವೆಚ್ಚ ಮತ್ತು ಇತರ ಖರ್ಚುಗಳನ್ನು ಕಳೆದ ನಂತರ, ರೈತರು ಇನ್ನೂ ಪ್ರತಿ ಗಿಡಕ್ಕೆ 8ರೂಪಾಯಿ ಲಾಭ ಗಳಿಸಬಹುದು. ಲಾಭದ ಪ್ರಮಾಣ ಇದರಲ್ಲಿ ಹೆಚ್ಚಿದೆ' ಎಂದು ಅವರು ಭಾವಿಸುತ್ತಾರೆ.
ಇನ್ನು ಕ್ರೈಸಾಂಥೆಮಮ್‌ಗಳು ಒಂದು ತಿಂಗಳಲ್ಲಿ ಅರಳಲು ಪ್ರಾರಂಭಿಸುತ್ತವೆ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಅವುಗಳನ್ನ ಮರು ನೆಡಬೇಕು. ಉತ್ತಮ ಬೆಳವಣಿಗೆಗಾಗಿ ನಿಯಮಿತ ಫಲೀಕರಣ ಮತ್ತು ನೀರಾವರಿ ಅಗತ್ಯ ಬೀಳುತ್ತದೆ. ಅವು ವಿವಿಧ ಆಕಾರಗಳು, ಗಾತ್ರಗಳು ಮತ್ತು ಬಣ್ಣಗಳಲ್ಲಿ ಬರುವುದರಿಂದ, ವಿಭಿನ್ನ ಗ್ರಾಹಕರ ಆದ್ಯತೆಗಳನ್ನು ಪೂರೈಸಬಹುದು ಎಂದು ಲೋಹಿತ್ ಅವರು ಹೇಳುತ್ತಾರೆ.
ಅವರು ಪ್ರಸ್ತುತ ಬಿಳಿ ಸ್ಯಾಂಟಿನಿ, ಗುಲಾಬಿ ಬಣ್ಣದ ಸ್ಯಾಂಟಿನಿ ಹಳದಿ ಸ್ಯಾಂಟಿನಿ, ಕೆಂಪು ಕ್ಯಾಲಿಮೆರೊ, ಗೋಲ್ಡನ್ ಹಳದಿ ಕ್ರೈಸಾಂಥೆಮಮ್‌ಗಳು ಮತ್ತು ಇತರ ಬಣ್ಣಗಳಲ್ಲಿ ವಿವಿಧ ರೀತಿಯ ಕ್ರೈಸಾಂಥೆಮಮ್‌ಗಳನ್ನು ಲೋಹಿತ್ ಅವರು ಬೆಳೆಯುತ್ತಾರೆ.
ವಿಸ್ತರಣೆ ಮತ್ತು ಆದಾಯ
ಹೂವಿನ ಬೆಳೆ ಕೈಹಿಡಿದ ಹಿನ್ನೆಲೆ ಅವರು ಸೇವಂತಿಗೆ ಕೃಷಿಯ ನಂತರ
ಅವರು ಇನ್ನೊಂದು ಎಕರೆ ಜಾಗದಲ್ಲಿ ಮತ್ತೆ ಹೂವಿನ ಬೆಳೆಯನ್ನ ಆರಂಭಿಸಿದ್ರು. ಒಟ್ಟು 2.5 ಎಕರೆ ಜಾಗದಲ್ಲಿ ಲೋಹಿತ್ ಅವರೀಗ ಹೂವಿನ ಬೆಳೆಯನ್ನ ಬೆಳೆಯುತ್ತಿದ್ದಾರೆ.
ಇನ್ನು ಕೋವಿಡ್, ಲಾಕ್‌ಡೌನ್ ಸಮಯದಲ್ಲಿ ಲೋಹಿತ್ ಅವರು ಇನ್ನೊಬ್ಬ ಹೂಗಾರರೊಂದಿಗೆ ಕೈಜೋಡಿಸುತ್ತಾರೆ ಮತ್ತು ಆಗಸ್ಟ್ 2022ರ ಹೊತ್ತಿಗೆ ಭಾರತದ ಎಲ್ಲಾ ಭಾಗಗಳಿಗೆ ಹೂವುಗಳನ್ನು ವಿತರಿಸಲು ಆರಂಭಿಸುತ್ತಾರೆ. ಕೋವಿಡ್ ನಂತರ ಪರಿಸ್ಥಿತಿಗಳು ಉತ್ತಮಗೊಂಡ ಮೇಲೆ ಅವರು ತಮ್ಮ ಕೆಲಸವನ್ನು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಡೇಟ್ ಮಾಡಲು ಶುರು ಮಾಡಿದ್ರು. ಇದರಿಂದಾಗಿ ಜನರು ಹೂವುಗಳಿಗಾಗಿ ಅವರನ್ನು ಸಂಪರ್ಕಿಸಲು ಆರಂಭಿಸಿದರು. ಅದು ಅವರಿಗೆ ಮತ್ತೆ ಸಹಾಯ ಮಾಡಿತು. ಈ ಮೂಲಕ ಅವರು ಬಾಯಿಮಾತಿನ ಮೂಲಕ ಸರಬರಾಜು ಮಾಡಲು ಪ್ರಾರಂಭ ಮಾಡುತ್ತಾರೆ.
ಈಗ, ಅವರು ಆನ್‌ಲೈನ್‌ನಲ್ಲಿ ತೆಗೆದುಕೊಂಡ ಆರ್ಡರ್‌ಗಳ ಮೂಲಕ ಭಾರತದಾದ್ಯಂತ ಕ್ರೈಸಾಂಥೆಮಮ್‌ಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಾರೆ. ಹಾಗೆ ಅವರ ದೊಡ್ಡ ಮಾರುಕಟ್ಟೆಗಳಲ್ಲಿ ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ, ಹೈದರಾಬಾದ್ ಮತ್ತು ಗುವಾಹಟಿ ಸೇರಿವೆ. ಇನ್ನು ಈ ಬಗ್ಗೆ ಅವರೇ ಸಂತಸವನ್ನ ಸೂಚಿಸಿದ್ದಾರೆ.
ಇದಲ್ಲದೇ ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಕಷ್ಟಪಡುವ ಇತರ ರೈತರಿಂದ ಹೂವುಗಳನ್ನು ಖರೀದಿ ಮಾಡುತ್ತಾರೆ. ಮತ್ತು ಅವರ ಹೂವುಗಳನ್ನ ಮಾರುಕಟ್ಟೆಗೆ ತಲುಪಿಸಲು ಸಹಾಯ ಮಾಡುತ್ತಾರೆ. ಹಾಗೆ "ನಾನು ಕ್ರೈಸಾಂಥೆಮಮ್‌ಗಳನ್ನು ಮಾತ್ರ ಬೆಳೆಯುವಾಗ, ನಾನು ಜರ್ಬೆರಾ, ಗುಲಾಬಿಗಳು ಮತ್ತು ಇತರ ವಿವಿಧ ಹೂವುಗಳನ್ನು ಜನರಿಗೆ ತಲುಪಿಸುತ್ತಾನೆ ಎಂದು ಲೋಹಿತ್ ಅವರು ಹೇಳುತ್ತಾರೆ.
ಹಾಗೆ ಹೂವುಗಳನ್ನ ಕೊಯ್ಲು ಮಾಡಿದ ನಂತರ, ಅವುಗಳನ್ನ ಶೀತ ಸ್ಥಳದಲ್ಲಿ ಸಂಗ್ರಹಿಸಲಾಗುತ್ತದೆ ಅದು ಹೂವುಗಳು ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ. ನಂತರ ಅವರು ಆ ಹೂವುಗಳನ್ನ ಭಾರತದಾದ್ಯಂತ ಖರೀದಿದಾರರಿಗೆ ಸರಬರಾಜು ಮಾಡುತ್ತಾರೆ. ಇದರಿಂದಾಗಿ ಅವರು ತಿಂಗಳಿಗೆ ಸುಮಾರು 7 ಲಕ್ಷ ರೂ ಆದಾಯವನ್ನು ಪಡೆಯುತ್ತಾರೆ.
More From GoodReturns

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Highway: ರಾಜ್ಯದ ಈ ಭಾಗಕ್ಕೆ ಹೈವೇ ಡಿಮ್ಯಾಂಡ್…ಕೇಂದ್ರಕ್ಕೆ ಮನವಿ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್!

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications