ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬದ ಕಿರಿಯ ಪುತ್ರ ಕೈಗಾರಿಕೋದ್ಯಮಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ವಿವಾಹ ಪೂರ್ವ ಸಂಭ್ರಮಾಚರಣೆಗಳು ಜಮ್‌ನಗರ್‌ದಲ್ಲಿ ಭರದಿಂದ ಸಾಗಿವೆ. ಇದಕ್ಕೆ ಪೂರಕವಾಗಿ ಅನ್ನ ಸೇವೆಯೊಂದಿಗೆ ಆರಂಭಗೊಂಡವು.
ಮುಕೇಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸೇರಿದಂತೆ ಅಂಬಾನಿ ಕುಟುಂಬದ ಇತರ ಸದಸ್ಯರು ಜಾಮ್‌ನಗರದ ರಿಲಯನ್ಸ್ ಟೌನ್‌ಶಿಪ್ ಬಳಿಯ ಜೋಗ್ವಾಡ್ ಗ್ರಾಮದಲ್ಲಿ ಗ್ರಾಮಸ್ಥರಿಗೆ ಸಾಂಪ್ರದಾಯಿಕ ಗುಜರಾತಿ ಆಹಾರವನ್ನು ಬಡಿಸಿದರು.

51 ಸಾವಿರ ಜನರಿಗೆ ಆಹಾರ
ರಾಧಿಕಾ ಅವರ ತಾಯಿಯ ಅಜ್ಜಿ ಮತ್ತು ಪೋಷಕರಾದ ವೀರೇನ್ ಮತ್ತು ಶೈಲಾ ಮರ್ಚೆಂಟ್ ಕೂಡ ಸೇವೆಯಲ್ಲಿ ಪಾಲ್ಗೊಂಡರು. ಸುಮಾರು 51 ಸಾವಿರ ಸ್ಥಳೀಯ ನಿವಾಸಿಗಳಿಗೆ ಆಹಾರ ನೀಡಲಾಗುತ್ತಿದೆ. ಇದು ಮುಂದಿನ ಕೆಲವು ದಿನಗಳವರೆಗೆ ಮುಂದುವರಿಯುತ್ತದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಗಳಿಗಾಗಿ ಸ್ಥಳೀಯ ಸಮುದಾಯದ ಆಶೀರ್ವಾದ ಪಡೆಯಲು ಅಂಬಾನಿ ಕುಟುಂಬವು ಅನ್ನ ಸೇವೆಯನ್ನು ಆಯೋಜಿಸಿದೆ. ಭೋಜನದ ನಂತರ ಬಂದವರು ಸಾಂಪ್ರದಾಯಿಕ ಜಾನಪದ ಸಂಗೀತವನ್ನು ಆನಂದಿಸಿದರು. ಖ್ಯಾತ ಗುಜರಾತಿ ಗಾಯಕಿ ಕೀರ್ತಿದನ್ ಗಧ್ವಿ ತಮ್ಮ ಗಾಯನದ ಮೂಲಕ ಕಾರ್ಯಕ್ರಮವನ್ನು ನೀಡಿದರು.
ಅಂಬಾನಿ ಕುಟುಂಬ ಶುಭ ಸಮಾರಂಭಗಳಲ್ಲಿ ಊಟ ಬಡಿಸುತ್ತಿದೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ದೇಶವು ಬಿಕ್ಕಟ್ಟಿನಲ್ಲಿದ್ದಾಗಲೂ, ರಿಲಯನ್ಸ್ ಫೌಂಡೇಶನ್, ಅನಂತ್ ಅಂಬಾನಿ ಅವರ ತಾಯಿ ನೀತಾ ಅಂಬಾನಿ ಅವರ ನೇತೃತ್ವದಲ್ಲಿ, ವಿಶ್ವದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮವನ್ನು ನಡೆಸಿತು.
ಮಾರ್ಚ್‌ನಿಂದ ವಿವಾಹ ಪೂರ್ವ ಕಾರ್ಯಕ್ರಮ
ಕುಟುಂಬದ ಸಂಪ್ರದಾಯವನ್ನು ಮುಂದಕ್ಕೆ ತೆಗೆದುಕೊಂಡು, ಅನಂತ್ ಅಂಬಾನಿ ತಮ್ಮ ವಿವಾಹ ಪೂರ್ವ ಕಾರ್ಯಕ್ರಮಗಳನ್ನು ಅನ್ನ ಸೇವೆಯೊಂದಿಗೆ ಪ್ರಾರಂಭಿಸಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಗಳು ಮಾರ್ಚ್ 1 ರಿಂದ ಮಾರ್ಚ್ 3 ರವರೆಗೆ ನಡೆಯಲಿದೆ.
ಈ ಮೂರು ದಿನಗಳಲ್ಲಿ ದೇಶ, ಜಗತ್ತಿನ ಖ್ಯಾತ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಡೀ ದೇಶವೇ ಈ ವಿವಾಹಪೂರ್ವ ಕಾರ್ಯಕ್ರಮದ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.


Click it and Unblock the Notifications