ಭೋಪಾಲ್, ಜೂನ್ 23: ಗುರಿ ದೃಢವಾಗಿದ್ದರೇ ಎಂತಹ ಕಠಿಣ ಪಥವನ್ನೇ ಕ್ರಮಿಸಬಹುದು ಎಂಬ ಮಾತಿನಂತೆ ಮಧ್ಯಪ್ರದೇಶದ ಯುವತಿ ಅಪ್ರತಿಮವಾದದ್ದನ್ನು ಸಾಧಿಸಿ ತೋರಿಸಿದ್ದಾಳೆ.
ಮುಧ್ಯಪ್ರದೇಶದ ನಿಮುಚ್‌ನ 24 ವರ್ಷದ ಅಂಚಲ್ ಗಂಗ್ವಾಲ್ ಇದೀಗ ಭಾರತೀಯ ವಾಯುಸೇನೆಯ ಯುದ್ದವಿಮಾನ ಪೈಲಟ್. ಅಂಚಲ್ ಗಂಗ್ವಾಲ್ ಭಾರತೀಯ ವಾಯುಸೇನೆಯಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ಸೇರಿಕೊಂಡಿದ್ದಾರೆ.
ಅಂಚಲ್ ಗಂಗ್ವಾಲ್ ತಂದೆ ಸುರೇಶ್ ಗಂಗ್ವಾಲ್ ಒಬ್ಬ ಚಹ ಮಾರುವವ. ಚಹ ಮಾರುವವನ ಮಗಳು ಭಾರತೀಯ ವಾಯುಸೇನೆಯ ಪೈಲಟ್ ಆಗಿರುವುದು ಸೇನೆಯಷ್ಟೇ ಅಲ್ಲದೇ ಇಡೀ ದೇಶಕ್ಕೆ ಹೆಮ್ಮೆ ಮೂಡಿಸಿದೆ.
ಪ್ರತಿದಿನ ಚಹ ಮಾರುವ ಕಾಯುಕ
ಅಂಚಲ್ ಗಂಗ್ವಾಲ್ ಹುಟ್ಟುತ್ತಲೇ ಬಡತನದ ಬೇಗೆಯಲ್ಲಿ ಬೆಳೆದವಳು. ಅವಳ ತಂದೆ ಸುರೇಶ್ ಗಂಗ್ವಾಲ್‌ಗೆ ಭೋಪಾಲ್‌ನಿಂದ 400 ಕಿ.ಮೀ ದೂರದಲ್ಲಿರುವ ನಿಮುಚ್‌ನಲ್ಲಿ ಕಳೆದ 25 ವರ್ಷಗಳಿಂದ ಪ್ರತಿದಿನ ಚಹ ಮಾರುವ ಕಾಯುಕ. ತಂದೆ ಮಗಳ ಕನಸಿಗೆ ರೆಕ್ಕೆ ಬೆಳೆಸಿದ್ದು ಚಹ ಮಾರುತ್ತಲೇ. ಮಗಳು ಏರೋನಾಟಿಕಲ್ ಎಂಜಿನಿಯರಿಂಗ್‌ಗೆ ಸೇರುತ್ತೇನೆಂದಾಗ ಅವಳ ತಂದೆಗೆ ಶಿಕ್ಷಣ ಶುಲ್ಕವನ್ನು ಪಾವತಿಸಲು ಸಹ ಹಣವಿರಲಿಲ್ಲ. ಆದರೆ, ಸುರೇಶ್ ಗಂಗ್ವಾಲ್ ಮಾತ್ರ ಕಷ್ಟಪಟ್ಟು ಮಗಳಿಗೆ ಉನ್ನತ ಶಿಕ್ಷಣ ಕೊಡಿಸಿ ಪೈಲಟ್ ಮಾಡಿದ್ದಾರೆ.
ಕೇದಾರನಾಥ ಮೇಘಸ್ಪೋಟ
2013 ರ ಕೇದಾರನಾಥ ಮೇಘಸ್ಪೋಟದ ದುರಂತದ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವಲ್ಲಿ ಭಾರತೀಯ ವಾಯು ಸೇನಾ ಸಿಬ್ಬಂದಿಯ ಧೈರ್ಯವನ್ನು ನೋಡಿದ ನಂತರ ತನ್ನ ಮಗಳು ಭಾರತೀಯ ವಾಯುಪಡೆಗೆ ಸೇರುವ ಕನಸು ಕಂಡಿದ್ದಳು. ಈ ಕನಸನ್ನು ನನಸಾಗಿಸುವುದು ನಮ್ಮ ಕುಟುಂಬಕ್ಕೆ ಸುಲಭವಾಗಿರಲಿಲ್ಲ. ಆದರೆ, ಅವಳು ದೃಢನಿಶ್ಚಯ ಹೊಂದಿದ್ದಳು ಎನ್ನುತ್ತಾರೆ ತಂದೆ ಸುರೇಶ್ ಗಂಗ್ವಾಲ್.
ಅವಳನ್ನು ನೋಡಲು ಆಗುತ್ತಿಲ್ಲ
''ನಮ್ಮ ಮಗಳು ವಾಯಸೇನೆಯ ಪೈಲಟ್ ಆಗಿ ನೇಮಕವಾಗಿದ್ದು ನಮ್ಮ ಕುಟುಂಬಕ್ಕೆ ಹೆಮ್ಮೆ ಮೂಡಿಸುತ್ತದೆ. ಈ ಸಂತಸವನ್ನು ಪದಗಳಲ್ಲಿ ಹೇಳಲು ಬರುವುದಿಲ್ಲ. ಈಗ ಅವಳನ್ನು ನೋಡಲು ಆಗುತ್ತಿಲ್ಲ. ಏಕೆಂದರೆ ಕೊರೊನಾವೈರಸ್ ಲಾಕ್‌ಡೌನ್ ನಿಂದ ಅವಳನ್ನು ನೋಡಲು ನಮಗೆ ಸಾಧ್ಯವಾಗಲಿಲ್ಲ'' ಎಂದು ಸುರೇಶ್ ಗಂಗ್ವಾಲ್ ಹೇಳುತ್ತಾರೆ.
ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಅಂಚಲ್ ಗಂಗ್ವಾಲ್ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಅಂಚಲ್ ಗಂಗ್ವಾಲ್ ಸಾಧನೆ ರಾಜ್ಯಕ್ಕೆ ಹೆಮ್ಮೆ ತಂದಿದೆ ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ. ನೀಮುಚ್‌ನಲ್ಲಿ ಚಹಾ ಅಂಗಡಿಯೊಂದನ್ನು ನಡೆಸುತ್ತಿರುವ ಸುರೇಶ್ ಗಂಗ್ವಾಲ್ ಅವರ ಪುತ್ರಿ ಅಂಚಲ್ ಈಗ ವಾಯುಸೇನೆಯಲ್ಲಿ ಯುದ್ಧ ವಿಮಾನವನ್ನು ಹಾರಿಸಲಿದ್ದಾರೆ. ಮಧ್ಯಪ್ರದೇಶಕ್ಕೆ ಹೆಮ್ಮೆ ತಂದ ಮಗಳು ಅಂಚಲ್, ಆಕಾಶದ ಎತ್ತರದಲ್ಲಿ ಹಾರಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications