ಕಳೆದ ವರ್ಷದಲ್ಲಿ ಉದ್ಯೋಗ ಕಡಿತ ಮಾಡಿದ್ದ ಮೆಟಾ ಈ ವರ್ಷವೂ ಉದ್ಯೋಗ ಕಡಿತವನ್ನು ಮುಂದುವರಿಸಿದೆ. ಫೇಸ್‌ಬುಕ್‌ನ ಪೋಷಕ ಸಂಸ್ಥೆಯಾದ ಮೆಟಾ ಮತ್ತೊಮ್ಮೆ ಉದ್ಯೋಗ ಕಡಿತ ಘೋಷಣೆ ಮಾಡಿದೆ. ಸಂಸ್ಥೆಯಲ್ಲಿ ಸುಮಾರು 11 ಸಾವಿರ ಉದ್ಯೋಗಿಗಳನ್ನು ಅಂದರೆ ಸುಮಾರು ಶೇಕಡ 13ರಷ್ಟು ಸಿಬ್ಬಂದಿಗಳು ವಜಾಗೊಳಿಸಲಾಗುವುದು ಎಂದು ಮೆಟಾ ಘೋಷಣೆ ಮಾಡಿದೆ. ಇದು ಭಾರತದಲ್ಲಿಯೂ ಸಾವಿರಾರು ಮೆಟಾ ಉದ್ಯೋಗಿಗಳ ಮೇಲೆ ಪ್ರಭಾವ ಬೀರಲಿದೆ.
ಪ್ರಮುಖ ಅಧಿಕಾರಿಗಳು, ವಕೀಲರು, ಹಣಕಾಸು ತಜ್ಞರು, ಮಾನವೀಯ ಸಂಪನ್ಮೂಲ ವ್ಯವಹಾರದ ರಚನೆಯನ್ನು ಸರಿದೂಗಿಸಲು ತಂತ್ರಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ವಹಿಸಲಾಗಿದೆ ಎಂದು ವರದಿ ಹೇಳಿದೆ. ಕೆಲವು ಪ್ರಮುಖ ಸ್ಥಾನಗಳಿಗೆ ಕೆಲವು ಉದ್ಯೋಗಿಗಳನ್ನು ಪ್ರೋಮೋಷನ್ ಮಾಡುವ ಸಾಧ್ಯತೆಯಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಈ ಹಿಂದೆಯೂ ಮೆಟಾ ಉದ್ಯೋಗ ಕಡಿತವನ್ನು ಮಾಡಿದೆ.

ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಲಾಕ್‌ಡೌನ್ ಆದಾಗ ಜಾಗತಿಕವಾಗಿ ಜನರು ಮನೆಯಲ್ಲಿಯೇ ಬಾಕಿಯಾಗಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾಗಿತ್ತು. ಇದನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಫೇಸ್‌ಬುಕ್‌ನ ಪೋಷಕ ಸಂಸ್ಥೆಯಾದ ಮೆಟಾ ಸಾವಿರಾರು ಉದ್ಯೋಗಿಗಳನ್ನು ನೇಮಕಾತಿ ಮಾಡಿತ್ತು. ಆದರೆ ಬಳಿಕ ಹಣದುಬ್ಬರ ಮೊದಲಾದ ಕಾರಣದಿಂದಾಗಿ ಸಂಸ್ಥೆಯು ಭಾರೀ ಕಷ್ಟವನ್ನು ಅನುಭವಿಸಬೇಕಾಗಿ ಬಂದಿದೆ.
ಬೆಲೆ ಏರಿಕೆ, ಬಡ್ಡಿದರ ಏರಿಕೆಯಾಗುತ್ತಿದ್ದಂತೆ ಪ್ರಮುಖವಾಗಿ ಜಾಹೀರಾತು ಮತ್ತು ಗ್ರಾಹಕರ ಕಡಿತವು ನಡೆದಿದೆ, ಇದರಿಂದಾಗಿ 2022ರಲ್ಲಿ ಮೆಟಾ ಸಂಸ್ಥೆಯು ಭಾರೀ ಸಂಕಷ್ಟವನ್ನು ಅನುಭವಿಸಿದೆ. ಇದಾದ ಬೆನ್ನಲ್ಲೇ ಕೆಲವು ಉದ್ಯೋಗಿಗಳನ್ನು ಡಿಪ್ರೋಮೋಟ್ ಮಾಡಲು ಸಂಸ್ಥೆ ಮುಂದಾಗಿದೆ ಎಂದು ವರದಿಯಾಗಿದೆ. ಇತರೆ ಹಲವಾರು ಸಂಸ್ಥೆಗಳಂತೆ ವೆಚ್ಚವನ್ನು ಕಡಿತ ಮಾಡುವ ನಿಟ್ಟಿನಲ್ಲಿ ಮೆಟಾ ಉದ್ಯೋಗ ಕಡಿತದ ಹಾದಿಯನ್ನು ತುಳಿದಿದೆ.
ಈ ಹಿಂದೆ ಮೆಟಾದಲ್ಲಿ ಉದ್ಯೋಗ ಕಡಿತ
ಮೆಟಾ ಅತೀ ದೊಡ್ಡ ಟೆಕ್ ಸಂಸ್ಥೆಯಾಗಿದೆ. ಇದರ ನಿವ್ವಳ ಆದಾಯವು ನಿರಂತರವಾಗಿ ಕುಸಿಯುತ್ತಲೇ ಇದೆ. ಈ ಕಾರಣದಿಂದಾಗಿ ಮೆಟಾ 2022ರಲ್ಲಿ ಸುಮಾರು 11,000 ಉದ್ಯೋಗಿಗಳನ್ನು ಅಥವಾ ಶೇಕಡ 13 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಹಾಗೆಯೇ ಸದ್ಯಕ್ಕೆ ಯಾವುದೇ ನೇಮಕಾತಿಯನ್ನು ಕೂಡಾ ನಡೆಸುವುದಿಲ್ಲ ಎಂದು ಮಾರ್ಕ್ ಜುಕರ್‌ಬರ್ಗ್ ಸ್ಪಷ್ಟಪಡಿಸಿದ್ದಾರೆ. ಈ ಸಂಸ್ಥೆಯಲ್ಲಿ 2023 ರಲ್ಲಿಯೂ ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಇದರಂತೆಯೇ ಉದ್ಯೋಗ ಕಡಿತವನ್ನು ಮಾಡಲಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications