ಆಂಟೋನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಮತ್ತೊಮ್ಮೆ ಇನಿಷಿಯಲ್ ಪಬ್ಲಿಕ್ ಆಫರ್ ಗಾಗಿ (ಐಪಿಒ) ಇಂದಿನಿಂದ (ಡಿಸೆಂಬರ್ 21, 2020) ಲಭ್ಯವಾಗಿದೆ. ಡಿಸೆಂಬರ್ 23ನೇ ತಾರೀಕಿಗೆ ಕೊನೆ ಆಗಲಿದೆ.
ಪ್ರತಿ ಷೇರಿಗೆ ರು. 313ರಿಂದ 315 ನಿಗದಿ ಆಗಿದೆ. 300 ಕೋಟಿ ರುಪಾಯಿ ಸಂಗ್ರಹ ಮಾಡಲು ಆಂಟೋನಿ ವೇಸ್ಟ್ ಹ್ಯಾಂಡ್ಲಿಂಗ್ ಮುಂದಾಗಿದೆ. ಇದರಲ್ಲಿ ಹೊಸದಾಗಿ 85 ಕೋಟಿ ರುಪಾಯಿ ಹಾಗೂ ಈಗಾಗಲೇ ಇರುವ ಷೇರುದಾರರಿಂದ 215 ಕೋಟಿ ರುಪಾಯಿಯ ಆಫರ್ ಫಾರ್ ಸೇಲ್ (ಒಎಫ್ ಎಸ್) ಒಳಗೊಂಡಿದೆ.
ಈ ಹಿಂದೆ ಮಾರ್ಚ್ ನಲ್ಲಿ ಐಪಿಒಗೆ ಮುಂದಾಗಿತ್ತು. ಆದರೆ ಆ ಸಂದರ್ಭದಲ್ಲಿ ಜಾಗತಿಕವಾಗಿಯೇ ಸನ್ನಿವೇಶ ಆತಂಕದಿಂದ ಕೂಡಿದ್ದರಿಂದ ಹೂಡಿಕೆದಾರರು ಹಣ ವಾಪಸ್ ಪಡೆಯುತ್ತಿದ್ದರು. ಉತ್ತಮ ಸ್ಪಂದನೆ ದೊರೆಯಲಿಲ್ಲ. ಆಂಟೋನಿ ವೇಸ್ಟ್ ಹ್ಯಾಂಡ್ಲಿಂಗ್ ನಿಂದ ಹತ್ತು ಆಂಕರ್ ಹೂಡಿಕೆದಾರರ ಮೂಲಕ 90 ಕೋಟಿ ರು. ಸಂಗ್ರಹಿಸಲಾಗಿದೆ. ಆ ಹತ್ತರಲ್ಲೊ ಮಸಾಚ್ಯುಸೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅತಿ ದೊಡ್ಡ ಹೂಡಿಕೆದಾರ. 44.44% ಷೇರು ಖರೀದಿಸಿದೆ.

ಇತರ ಆಂಕರ್ ಹೂಡಿಕೆದಾರರಲ್ಲಿ ಟಾಟಾ ಎಐಜಿ ಜನರಲ್ ಇನ್ಷೂರೆನ್ಸ್, ಎಸ್ ಬಿಐ ಮ್ಯೂಚುವಲ್ ಫಂಡ್, ಮತ್ತು 238 ಪ್ಲಾನ್ ಅಸೋಸಿಯೇಟ್ ಗಳಿವೆ. ಇನ್ನು ಹೂಡಿಕೆದಾರರು ಕನಿಷ್ಠ 47 ಷೇರುಗಳಿಗೆ ಅರ್ಜಿ ಹಾಕಲೇಬೇಕು. ಅದಕ್ಕೆ ರು. 14,805 ಆಗುತ್ತದೆ. ಷೇರು ಹಂಚಿಕೆ ಡಿಸೆಂಬರ್ 29ರಂದು ಹಾಗೂ ಲಿಸ್ಟಿಂಗ್ ಜನವರಿ 1ರಂದು ಆಗುವ ನಿರೀಕ್ಷೆ ಇದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications