ಸಿಲಿಕಾನ್ ಸಿಟಿ ಬೆಂಗಳೂರಿನ ಜೀವನ ಬೆಲೆ ಏರಿಕೆಯಿಂದಾಗಿ ದುಬಾರಿಯಾಗುತ್ತದೆ.ನೀರು, ವಿದ್ಯುತ್, ಸಾರಿಗೆ ಟೋಲ್ ದರ A ಟು z ವೆಗೂ ಎಲ್ಲದರೂ ಮೇಲು ಮೇಲಿಂದ ಮೇಲೆ ಸರ್ಕಾರವನ್ನು ಜನರ ಜೇಬಿಗೆ ಕತ್ತರಿಯಾಗುತ್ತಲೇ ಇದೆ. ಇದೀಗ ಅಪಾರ್ಟ್ ಮೆಂಟ್‌ನಲ್ಲಿ ವಾಸಿಸುವ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.ಇನ್ಮಂದೆ ಅಪಾರ್ಟ್ಮೆಂಟ್ ನಿರ್ವಹಣೆ ಕಷ್ಟ ಕಷ್ಟ.
ಹೌದು,ಸರ್ಕಾರ ಅಪಾರ್ಟ್ ಮೆಂಟ್ ನಿರ್ವಹಣೆಯ ವೆಚ್ಚದ ಮೇಲೆಯೂ ಹೆಚ್ಚಿನ ತೆರಿಗೆ ವಿಧಿಸಲು ಪ್ಲಾನ್ ಮಾಡುತ್ತಿದೆ.ಇದರಿಂದ ಬೆಲೆ ಏರಿಕೆಯ ಕಾವು ಇನ್ಮುಂದೆ ಅಪಾರ್ಟ್ ಮೆಂಟ್ ನಿವಾಸಿಗಳ ಜೇಬು ಸುಡಲಿದೆ.

ಸರ್ಕಾರ ವಸತಿ ಸಂಘಗಳ ಮೂಲಕ ಮಾಸಿಕ ನಿರ್ವಹಣೆಗಾಗಿ ಶೇ.18 ರಷ್ಟು ಜಿಎಸ್‌ಟಿ ವಿಧಿಸಲು ಮುಂದಾಗಿ ಹೆಚ್ಚಿನ ಸಿದ್ದತೆಗಳನ್ನು ಮಾಡಿಕೊಳ್ಳತ್ತಿದೆ. ಇದು ಜನಸಾಮಾನ್ಯರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಸುಮಾರು 50 ಲಕ್ಷ ಜನರು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವನ್ನು ಮಾಡುತ್ತಿದ್ದಾರೆ. ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿಯಲ್ಲಿ ಒಟ್ಟಾರೆ ಕನಿಷ್ಠ 40 ಲಕ್ಷ ಜನರು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ.ರಾಜ್ಯದಲ್ಲೇ ಒಟ್ಟು ಕನಿಷ್ಠ 90 ಲಕ್ಷ ಜನರು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಅಂದಾಜು ಇದೆ. ಇವರು ಮಾಸಿಕ ನಿರ್ವಹಣಾ ಶುಲ್ಕವನ್ನು ನಿಯಮಿತವಾಗಿ ಪಾವತಿಸುತ್ತಿರುವಾಗ, ಅದಕ್ಕೆ ಜಿಎಸ್‌ಟಿ ವಿಧಿಸುವುದರಿಂದ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಗುತ್ತದೆ. ಇದರಿಂದ ಸರ್ಕಾರಕ್ಕೂ ತೆರಿಗೆ ಸಿಗುತ್ತದೆ ಎಂಬ ಉದ್ದೇಶದಿಂದ ಜೆ.ಎಸ್.ಟಿಯನ್ನು ಏರಿಕೆ ಮಾಡಲು ಚಿಂತನೆಯನ್ನು ನಡೆಸಿದೆ.
2025-26ರ ಕೇಂದ್ರ ಬಜೆಟ್‌ನಲ್ಲಿ ವಸತಿ ಸಂಘಗಳಿಗೆ (Housing Societies / RWAs) ಸಂಬಂಧಿಸಿದ ಜಿಎಸ್‌ಟಿ (GST) ಸಂಗ್ರಹದ ಕುರಿತಾಗಿ ಪರಿಷ್ಕೃತ ನಿಯಮಗಳು ಜನರ ದೈನಂದಿನ ಬದುಕಿಗೆ ನೇರ ಪರಿಣಾಮ ಬೀರುವಂತಹವು.ಈ ನಿಯಮಗಳು ವಿಶೇಷವಾಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವವರ ಮೇಲೆ ಆರ್ಥಿಕ ಹೊರೆ ಹೆಚ್ಚಿಸಬಹುದು.
ಅಪಾರ್ಟ್‌ಮೆಂಟ್ ನಿವಾಸಿಗಳು ಇದರಿಂದಾಗಿ ಯಾವುದೇ ಅಘಾತಕ್ಕೆ ಒಳಗಬಾರದು. ಇದರ ಜೊತೆ ವಾಟ್ಸಾಪ್ ಚರ್ಚೆಗಳನ್ನು ನಡೆಸುತ್ತಿದ್ದಾರೆ ಮತ್ತು ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕೇ ಎಂಬುದರ ಕುರಿತು ಸಭೆಗಳನ್ನು ಸಹ ನಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಜಿಎಸ್‌ಟಿ ದರಗಳ ಬಗ್ಗೆಯೂ ಗೊಂದಲ ಹೆಚ್ಚುತ್ತಿದೆ. ಹಲವರು ಇದು ಶೇ5ರಷ್ಟು ಎಂದು ಊಹಿಮಾಡಿದ್ದಾರೆ. ಇದು ಶೇಕಡಾ 18 ರಷ್ಟಿದೆ, ಅಂದರೆ 20 ಲಕ್ಷ ರೂ.ಗಳನ್ನು ತಲುಪುವ ಪ್ರತಿಯೊಂದು ಅಪಾರ್ಟ್‌ಮೆಂಟ್ ಸಂಕೀರ್ಣ ವಾರ್ಷಿಕವಾಗಿ 3.6 ಲಕ್ಷ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಇದು 10 ವರ್ಷಗಳಲ್ಲಿ 36 ಲಕ್ಷದವರೆಗೆ ಹೆಚ್ಚಾಗುತ್ತದೆ.
ಈ ಕುರಿತು, ಚಾರ್ಟರ್ಡ್ ಅಕೌಂಟೆಂಟ್ ಸಂಜಯ್ ಧಾರಿವಾಲ್ ಈ ಬಗ್ಗೆ ಮಾತನಾಡಿದ್ದು, ಅಪಾರ್ಟ್‌ಮೆಂಟ್ ಸಂಘಗಳು ಇನ್‌ಪುಟ್ ತೆರಿಗೆ ಕ್ರೆಡಿಟ್‌ನ್ನು ಪಡೆಯಬಹುದು.ನೀವು ನೋಂದಾಯಿಸಿದ ನೀವು ಪ್ರತಿ ತಿಂಗಳು ಹೊಂದಿರಬೇಕು. ಮತ್ತು ನಿಮ್ಮ ಸಂಘವು ಸಹಕಾರಿ ಇಲಾಖೆಯಲ್ಲಿ ನೋಂದಾಯಿಸದಿದ್ದರೂ ಸಹ, ನೀವು ಮಾನದಂಡಗಳನ್ನು ಪೂರೈಸಿದರೆ ಜಿಎಸ್‌ಟಿ ಅನ್ವಯವಾಗುತ್ತದೆ.
ನಾವು ಜಿಎಸ್‌ಟಿ ಅಡಿಯಲ್ಲಿ ಬರುತ್ತೇವಾ? ಎಂಬ ಗೊಂದಲವಿದೆಯೆ? ಹಾಗಾದರೆ ನೀವು ಕೆಳಗೆನ ಕ್ರಮವನ್ನು ಅನುಸರಿಸಿಸಬಹುದು.
- ಸ್ಥಳೀಯ ವಾಣಿಜ್ಯ ತೆರಿಗೆ ಕಚೇರಿಗೆ (Commercial Tax Office / GST Office) ಭೇಟಿ ನೀಡಿ.
- 500 ಪಾವತಿಸಿ,ನಿಮ್ಮ ಅಪಾರ್ಟ್‌ಮೆಂಟ್ ಜಿಎಸ್‌ಟಿ ಅಡಿಯಲ್ಲಿ ಬರುತ್ತದೆಯೆ ಅಥವಾ ಬೇಡವೇ ಎಂಬುದರ ಬಗ್ಗೆ ಆಧಿಕೃತ ದೃಢೀಕರಣ ಪತ್ರ (official confirmation letter) ಪಡೆಯಬಹುದು.
ಜಿಎಸ್‌ಟಿ ಅನುಸರಣೆ ಇನ್ನು ಮುಂದೆ ಐಚ್ಛಿಕವಲ್ಲದ ಕಾರಣ, ಅಪಾರ್ಟ್‌ಮೆಂಟ್ ಸಂಘಗಳು ತಮ್ಮ ಹಣಕಾಸು ಪುಸ್ತಕಗಳನ್ನು ಕ್ರಮವಾಗಿ ಪಡೆಯಬೇಕಾಗುತ್ತದೆ ಅಥವಾ ದಂಡದಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ಜನರಿಗೆ ಹೊಸ ಹೊಸ ಬರೆಯನ್ನು ಸರ್ಕಾರ ಬಡವರ ಮೇಲೆ ಎಳೆಯುತ್ತಾಳೆ ಇದೆ.


Click it and Unblock the Notifications