ಆಪಲ್ ಕಂಪೆನಿಯಿಂದ ಸದ್ಯದಲ್ಲೇ ಹೊಸ ರೇಂಜ್ ಐಫೋನ್ ಗಳನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಬಹಳ ಉತ್ಸಾಹದಿಂದ ಹಲವು ಹೊಸ ಐಫೋನ್ ಗಾಗಿ ಕಣ್ಣರಳಸಿ ಕಾಯುತ್ತಿದ್ದರೆ, ಈಗಿನ ಫೋನ್ ಮಾಡೆಲ್ ಗಳಲ್ಲಿಯೇ ಯಾವುದು ಬಹಳ ಕಡಿಮೆ ಮೊತ್ತಕ್ಕೆ ಸಿಗಬಹುದು, ಪೈಸಾ ವಸೂಲ್ ಎಂಬಂಥ ಡೀಲ್ ಯಾವುದಾದರೂ ಇದೆಯಾ ಎಂದು ನಿರೀಕ್ಷಿಸುತ್ತಿದ್ದಾರೆ.
ಆಪಲ್ ಐಫೋನ್ 11ರ ಸೀರೀಸ್ ಬೆಲೆಯಲ್ಲಿ ಭಾರೀ ಇಳಿಕೆ ಮಾಡುವ ನಿರೀಕ್ಷೆ ಇದೆ. ಆದರೆ ಇದಕ್ಕಾಗಿ ಐಫೋನ್ 12 ಬಿಡುಗಡೆ ಆಗುವ ತನಕ ಕಾಯುವ ಅಗತ್ಯ ಇಲ್ಲ. ಮುಂಬರುವ ಹಬ್ಬದ ಸೀಸನ್ ನಲ್ಲಿ ಐಫೋನ್ 11 ಅನ್ನು ಈ ವರೆಗಿನ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು.
ಅಮೆಜಾನ್ ನಿಂದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅಕ್ಟೋಬರ್ 17 (ಅಮೆಜಾನ್ ಪ್ರೈಮ್ ಸದಸ್ಯರಿಗೆ ಅಕ್ಟೋಬರ್ 17ರಿಂದ) ಆರಂಭವಾಗುತ್ತದೆ. ಅಮೆಜಾನ್ ನಿಂದ ಬಿಡುಗಡೆ ಮಾಡಿರುವ ಟೀಸರ್ ಪ್ರಕಾರ, ಐಫೋನ್ 11 ಸೀರೀಸ್ ಮೊಬೈಲ್ ಫೋನ್ ಅನ್ನು 50,000 ರುಪಾಯಿಗಿಂತ ಕಡಿಮೆಗೆ ದೊರೆಯುವುದಾಗಿ ತೋರಿಸಿದೆ.

ಟೀಸರ್ ನಲ್ಲಿ ಬರುವ ಪ್ರಕಾರ, ಐಫೋನ್ 11 ಬೆಲೆ 4_,999 ಎನ್ನಲಾಗಿದೆ. ಸದ್ಯದ ಫೋನ್ ಬೆಲೆಗೆ ಹೋಲಿಸಿದಲ್ಲಿ ಇದು ತೀರಾ ಕಡಿಮೆ ಎನಿಸುತ್ತದೆ. ಈಗ ಐಫೋನ್ 11 ಸೀರೀಸ್ 64GB ಫೋನ್ 66,300 ರುಪಾಯಿಗೆ ಸಿಗುತ್ತದೆ. ಸೈಟ್ ನಲ್ಲಿ ಹಾಕಿರುವ ಮೂಲ ಬೆಲೆ 68,300 ರುಪಾಯಿ. ಈಗಿನ ರಿಯಾಯಿತಿ ದರವು ಐಫೋನ್ 11ಗೆ ಭಾರೀ ರಿಯಾಯಿತಿ ದೊರೆಯುವಂತೆ ಮಾಡುತ್ತದೆ.


Click it and Unblock the Notifications