ಯು.ಎಸ್. ಷೇರು ಮಾರುಕಟ್ಟೆಯಲ್ಲಿ ಯಾವ ಕಂಪೆನಿಯೂ ಮಾಡದ ದಾಖಲೆ ಬರೆದ ಆಪಲ್

ಆಪಲ್ ಕಂಪೆನಿ ಬುಧವಾರ ಯು.ಎಸ್. ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದೆ. ಸಾರ್ವಜನಿಕವಾಗಿ ಲಿಸ್ಟ್ ಆದ ಕಂಪೆನಿಗಳಲ್ಲಿ $ 2 ಲಕ್ಷ ಕೋಟಿ (ಭಾರತದ ರುಪಾಯಿಗಳಲ್ಲಿ 150 ಲಕ್ಷ ಕೋಟಿ) ಮಾರುಕಟ್ಟೆ ಮೌಲ್ಯ ತಲುಪಿದ ಮೊದಲ ಕಂಪೆನಿ ಎನಿಸಿಕೊಂಡಿದೆ ಆಪಲ್. ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಅದ್ಭುತವಾದ ಫಲಿತಾಂಶ ನೀಡಿದ ಹಿನ್ನೆಲೆಯಲ್ಲಿ ಷೇರಿನ ದರದಲ್ಲೂ ಉತ್ತಮ ಏರಿಕೆ ಆಗಿದೆ.

ವಿಶ್ವದ ಅತ್ಯಂತ ಮೌಲ್ಯಯುತ ಕಂಪೆನಿ ಎಂಬ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದ ಸೌದಿ ಅರಾಮ್ಕೋವನ್ನು ಪಕ್ಕಕ್ಕೆ ಸರಿಸಿದ ಆಪಲ್. ಈ ವರ್ಷದಲ್ಲಿ ಇಲ್ಲಿಯ ತನಕ 57% ಗಳಿಕೆ ಕಂಡಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ಆಪಲ್ ಐಫೋನ್ ಮತ್ತು ಇತರ ಗ್ಯಾಜೆಟ್ ಮಾರಾಟ ಇಳಿಕೆ ಆಗಿದೆ. ಆದರೂ ಆಪಲ್ ಕಂಪೆನಿಯು ಮಾರಾಟಕ್ಕಿಂತ ಹೆಚ್ಚಾಗಿ ಸೇವೆ ಒದಗಿಸುವುದರ ಕಡೆಗೆ ಗಮನ ಹರಿಸಿದ್ದರಿಂದ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಿದೆ.

ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಗೂಗಲ್ ಮಾಲೀಕ ಆಲ್ಫಾಬೆಟ್ ಎಲ್ಲವೂ ಈಗ $ 1 ಲಕ್ಷ ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ್ದಾಗಿವೆ. ಯು.ಎಸ್. ಟೆಕ್ ಕಂಪೆನಿಗಳು ಸೇರಿ ಒಟ್ಟು ಮೌಲ್ಯ $ 6 ಲಕ್ಷ ಕೋಟಿ ದಾಟುತ್ತದೆ. ಅಂದ ಹಾಗೆ ಆಪಲ್ ಕಂಪೆನಿಯ ಆದಾಯವು ಎಲ್ಲ ವಿಭಾಗದಲ್ಲೂ ಹಾಗೂ ಎಲ್ಲ ಭೌಗೋಳಿಕ ಪ್ರದೇಶದಲ್ಲೂ ಜೂನ್ ತ್ರೈಮಾಸಿಕದಲ್ಲಿ ಹೆಚ್ಚಾಗಿದೆ. ಕೊರೊನಾ ಬಿಕ್ಕಟ್ಟಿನಲ್ಲಿ ಯು.ಎಸ್. ಆರ್ಥಿಕತೆಯೇ ಕುಸಿದಿದ್ದರೂ ಆಪಲ್ ಕಂಪೆನಿ ಆದಾಯ ಹೆಚ್ಚಾಗಿದೆ.

US ಷೇರು ಮಾರುಕಟ್ಟೆಯಲ್ಲಿ ಯಾವ ಕಂಪೆನಿಯೂ ಮಾಡದ ದಾಖಲೆ ಬರೆದ ಆಪಲ್

ಇಂದು ಪೋರ್ಚುಗಲ್, ಪೆರು ಮತ್ತು ಇತರ ದೇಶಗಳ ಆರ್ಥಿಕ ಉತ್ಪಾದನೆಗಿಂತಲೂ 1976ರಲ್ಲಿ ಸ್ಟೀವ್ ಜಾಬ್ಸ್ ಒಂದು ಗ್ಯಾರೇಜ್ ನಲ್ಲಿ ಆರಂಭಿಸಿದ ಆಪಲ್ ಹೆಚ್ಚಿನ ಆದಾಯ ಹೊಂದಿದೆ. ಆಪಲ್ ಷೇರು ಬುಧವಾರದಂದು ಶೇಕಡಾ 1.4% ಏರಿಕೆ ದಾಖಲಿಸಿ, $ 468.63ಕ್ಕೆ ವಹಿವಾಟು ನಡೆಸಿತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+