ಆಪಲ್ ಇಂಕ್‌ನ ಹೊಸ ವರ್ಜನ್ ಐಫೋನ್ 15 ಅನ್ನು ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಭಾರತದ ಕಾರ್ಯಾಚರಣೆಗಳು ಮತ್ತು ಚೀನಾದಲ್ಲಿನ ಮುಖ್ಯ ಉತ್ಪಾದನಾ ನೆಲೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ಆಪಲ್ ತಮಿಳುನಾಡಿನಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುತ್ತಿದೆ.
ಶ್ರೀಪೆರಂಬದೂರಿನಲ್ಲಿರುವ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಸ್ಥಾವರವು ಚೀನಾದ ಕಾರ್ಖಾನೆಗಳಿಂದ ಸಾಗಿಸಲು ಪ್ರಾರಂಭಿಸಿದ ಕೆಲವೇ ವಾರಗಳ ನಂತರ ಇತ್ತೀಚಿನ ಸಾಧನವನ್ನು ತಲುಪಿಸಲು ಸಿದ್ಧವಾಗುತ್ತಿದೆ. ಕಂಪನಿಯು ಭಾರತದಿಂದ ಬರುವ ಹೊಸ ಐಫೋನ್‌ಗಳ ಪರಿಮಾಣವನ್ನು ತ್ವರಿತವಾಗಿ ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಸೇರಿಸಿದೆ.

ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊ ಮೂಲದ ಸಂಸ್ಥೆಯು ತನ್ನ ಉತ್ಪಾದನೆಯನ್ನು ಚೀನಾದಿಂದ ಬೇರೆಡೆ ವರ್ಗಾಯಿಸುವ ಬಹುವರ್ಷದ ಯೋಜನೆಯಲ್ಲಿದೆ. ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ವ್ಯಾಪಾರದ ಉದ್ವಿಗ್ನತೆ ಇದೆ. ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ಸಂಸ್ಥೆಯು ಉತ್ಪಾದನೆಯನ್ನು ಬೇರೆಡೆ ವರ್ಗಾಯಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಯುಎಸ್ ಜೊತೆ ನಿಕಟ ಸಂಬಂಧವನ್ನು ನಿರ್ಮಿಸಲು ಮತ್ತು ಭಾರತವನ್ನು ಸ್ವತಃ ಉತ್ಪಾದನಾ ಕೇಂದ್ರವಾಗಿ ಮಾಡಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನದ ಭಾಗವೇ ಭಾರತದಲ್ಲಿ ಆಪಲ್ ಉತ್ಪಾದನೆಯಾಗಿದೆ ಎಂದು ಕೂಡಾ ವರದಿಯಾಗಿದೆ.
ಈ ಹಿಂದೆ, ಪಿಟಿಐ ವರದಿಯ ಪ್ರಕಾರ, ಐಫೋನ್ ತಯಾರಕ ಆಪಲ್ ತನ್ನ ವೈರ್‌ಲೆಸ್ ಇಯರ್ ಬಡ್ಸ್ ಏರ್‌ಪಾಡ್‌ಗಳನ್ನು ಫಾಕ್ಸ್‌ಕಾನ್‌ನ ಹೈದರಾಬಾದ್ ಕಾರ್ಖಾನೆಯಲ್ಲಿ ತಯಾರಿಸಲು ಪ್ರಾರಂಭಿಸಿತು. ಡಿಸೆಂಬರ್ 2024 ರ ವೇಳೆಗೆ ಬೃಹತ್ ಉತ್ಪಾದನೆಯನ್ನು ಪ್ರಾರಂಭಿಸುವ ಸಾಧ್ಯತೆಯಿರುವ ಹೈದರಾಬಾದ್ ಸ್ಥಾವರಕ್ಕಾಗಿ ಫಾಕ್ಸ್‌ಕಾನ್ 400 ಮಿಲಿಯನ್ ಡಾಲರ್ ಹೂಡಿಕೆಯನ್ನು ಅನುಮೋದಿಸಿದೆ.
"ಫಾಕ್ಸ್‌ಕಾನ್ ಹೈದರಾಬಾದ್ ಕಾರ್ಖಾನೆಯು ಏರ್‌ಪಾಡ್‌ಗಳನ್ನು ತಯಾರಿಸುತ್ತದೆ. ಕಾರ್ಖಾನೆಯು ಡಿಸೆಂಬರ್‌ನಲ್ಲಿ ಬೃಹತ್ ಉತ್ಪಾದನೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ," ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.
ಬೆಂಗಳೂರಿನಲ್ಲಿ ಐಫೋನ್ ತಯಾರಿ
ಟಾಟಾ ಗ್ರೂಪ್ ತೈವಾನೀಸ್ ಕಂಪನಿಯಾದ ವಿಸ್ಟ್ರಾನ್ ಮೂಲಕ ಬೆಂಗಳೂರಿನ ಹೊರಗಿರುವ ನರಸಾಪುರ ಕಾರ್ಖಾನೆಯನ್ನು ಸ್ವಾಧೀನಪಡಿಸಿಕೊಂಡಿದೆ. ಇಲ್ಲಿಯೇ ಭಾರತದ ಆಪಲ್‌ನ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಿದೆ ಎಂದು ವರದಿಯು ಉಲ್ಲೇಖಿಸಿದೆ.
ಆಪಲ್ ಸಿಇಒ ಟಿಮ್ ಕುಕ್ ಏಪ್ರಿಲ್‌ನಲ್ಲಿ ಮುಂಬೈಗೆ ಆಗಮಿಸಿದ ಬಳಿಕ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್‌ರನ್ನು ಭೇಟಿಯಾಗಿದ್ದಾರೆ. ಈಗ ಟಾಟಾ ಗ್ರೂಪ್ ಐಫೋನ್ ಅನ್ನು ಉತ್ಪಾದಿಸುತ್ತಿದೆ ಎಂದು ವರದಿಯಾಗಿದೆ.
ಎಲೆಕ್ಟ್ರಾನಿಕ್ಸ್ ತಯಾರಿಕೆಗಾಗಿ ಟಾಟಾ ಸಮೂಹದ ಯೋಜನೆಗಳು, ಪಾಲುದಾರಿಕೆಗೆ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಉದ್ದೇಶಗಳ ಕುರಿತು ಇಬ್ಬರು ಚರ್ಚೆ ನಡೆಸಿದ್ದಾರೆ ವರದಿಯಾಗಿದೆ. ಇನ್ನು ವಿಸ್ಟ್ರಾನ್ ಸಂಪೂರ್ಣವಾಗಿ ಬೆಂಗಳೂರಿನ ತನ್ನ ಪ್ರದೇಶವನ್ನು ತೊರೆಯುತ್ತದೆಯೇ ಎಂಬುವುದು ಖಚಿತವಾಗಿಲ್ಲ.
ಭಾರತದಲ್ಲಿ ಆಪಲ್ ಸ್ಟೋರ್ ಆರಂಭ
ಆಪಲ್ ಸಂಸ್ಥೆ ಇತ್ತೀಚೆಗೆ ಮುಂಬೈನಲ್ಲಿ ಭಾರತದ ತನ್ನ ಮೊದಲ ಸ್ಟೋರ್ ಅನ್ನು ಆರಂಭ ಮಾಡಿದೆ. ಅದಾದ ಬಳಿಕ ನವದೆಹಲಿಯಲ್ಲಿ ಏಪ್ರಿಲ್ 20ರಂದು ಎರಡನೇ ಸ್ಟೋರ್ ಅನ್ನು ಆರಂಭ ಮಾಡಲಿದೆ. ಮೊಲದ ಸ್ಟೋರ್ ಅನ್ನು ಸಿಇಒ ಟಿಮ್ ಕುಕ್ ಉದ್ಘಾಟನೆ ಮಾಡಿದ್ದಾರೆ. ಎರಡನೇ ಸ್ಟೋರ್ ಅನ್ನು ಕೂಡಾ ಸಿಇಒ ಟಿಮ್ ಕುಕ್ ತೆರೆದು, ಗ್ರಾಹಕರನ್ನು ಸ್ವಾಗತಿಸಿದ್ದಾರೆ.
ಪಾಲುದಾರರ ಸಹಯೋಗದೊಂದಿಗೆ ಕಳೆದ 25 ವರ್ಷಗಳಲ್ಲಿ ಭಾರತದಲ್ಲಿ ವಹಿವಾಟನ್ನು ನಡೆಸುತ್ತಾ ಬಂದಿರುವ ಐಕಾನಿಕ್ ಸಂಸ್ಥೆಯಾದ ಆಪಲ್ ಭಾರತದಲ್ಲಿ ತನ್ನ ಮೊದಲ ರಿಟೇಲ್ ಕಚೇರಿಯನ್ನು ಆರಂಭ ಮಾಡಿದೆ. ಈ ಕಚೇರಿಯು ಬಾಂದ್ರಾ ಕುರ್ಲಾ ಕಾಂಪ್ಲೇಕ್ಸ್ (BKC) ವಾಣಿಜ್ಯ ಪ್ರದೇಶದಲ್ಲಿದೆ. ಇದಾದ ಬಳಿಕ ಆಪಲ್ ತನ್ನ ಎರಡನೇ ಕಚೇರಿಯನ್ನು ಆರಂಭ ಮಾಡಿದೆ. ಎರಡು ಸ್ಟೋರ್‌ನಲ್ಲಿ ಗ್ರಾಹಕರ ದಂಡೇ ಇತ್ತು.


Click it and Unblock the Notifications