ಆ್ಯಪಲ್ ಸಂಸ್ಥೆಯಿಂದ ಮುಂದಿನ 3 ವರ್ಷದಲ್ಲಿ 5 ಲಕ್ಷ ಮಂದಿಗೆ ಉದ್ಯೋಗ?

ಮುಂಬೈ, ಏಪ್ರಿಲ್‌ 22: 'ಆ್ಯಪಲ್' ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಇದು ತಿನ್ನುವ 'ಆ್ಯಪಲ್' ಅಲ್ಲ, ಬದಲಾಗಿ ಮೊಬೈಲ್ ಫೋನ್ ತಯಾರಿಸುವ 'ಆ್ಯಪಲ್'. ಇಂತಿಪ್ಪ ಆ್ಯಪಲ್ ಕಂಪನಿಯು ಇತ್ತೀಚೆಗೆ ಭಾರತದಲ್ಲೇ ತನ್ನ ಮೊಬೈಲ್ ಫೋನ್ ತಯಾರಿಸಲು ಮುಂದೆ ಬರುತ್ತಿದ್ದು, ಈ ಮೂಲಕ ಭಾರತದ ಜೊತೆ ಸಂಬಂಧ ವೃದ್ಧಿಗೆ ಕೂಡ ಮುಂದಾಗುತ್ತಿದೆ. ಇದೇ ಸಮಯದಲ್ಲಿ ಮತ್ತೊಂದು ಭರ್ಜರಿ ಸುದ್ದಿ ಸಿಕ್ಕಿದ್ದು, ಆ್ಯಪಲ್ ಸಂಸ್ಥೆಯಿಂದ ಮುಂದಿನ 3 ವರ್ಷದಲ್ಲಿ 5 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಅಷ್ಟಕ್ಕೂ 'ಆ್ಯಪಲ್' ಫೋನ್‌ಗಳ ಖರೀದಿ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಈ ಕ್ರೇಜ್ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಇದೇ ಕಾರಣಕ್ಕೆ ಐಫೋನ್ ತಯಾರಿಕೆಗಾಗಿ 'ಆ್ಯಪಲ್' ಕಂಪನಿಯು ಭಾರತದಲ್ಲೇ ಫ್ಯಾಕ್ಟರಿ ಸ್ಥಾಪಿಸುತ್ತಿದೆ. ಸದ್ಯಕ್ಕೆ ಐಫೋನ್‌ ತಯಾರಿಸುವ ಕಂಪನಿ ಆ್ಯಪಲ್ ತನ್ನ ಬಿಡಿಭಾಗ ತಯಾರಿಸಿ ಪೂರೈಸುವ ಸಂಸ್ಥೆಗಳ ಮೂಲಕ ಮುಂದಿನ 3 ವರ್ಷದಲ್ಲಿ ಒಟ್ಟಾರೆ 5 ಲಕ್ಷ ಉದ್ಯೋಗಿಗಳ ನೇಮಕಕ್ಕೆ ನಿರ್ಧರಿಸಿದೆ ಎನ್ನಲಾಗಿದೆ. ಈ ಮೂಲಕ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಮೂಡಿದೆ.

ಆ್ಯಪಲ್‌ನಿಂದ ಮುಂದಿನ 3 ವರ್ಷದಲ್ಲಿ 5 ಲಕ್ಷ ಮಂದಿಗೆ ಉದ್ಯೋಗ

ಟಾಟಾ ಸಂಸ್ಥೆ ಮೂಲಕ ಉತ್ಪಾದನೆ

ಸದ್ಯಕ್ಕೆ ಭಾರತದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್‌ ಕಂಪನಿ ಹೀಗೆ 'ಐಫೋನ್‌' ತಯಾರಿಕೆಗೆ ಎರಡು ಘಟಕ ಹೊಂದಿದೆ. ಈ ಘಟಕಗಳಲ್ಲಿ ಇದೀಗ ಆ್ಯಪಲ್ ಕಂಪನಿಯ ಉತ್ಪನ್ನಗಳ ತಯಾರಿಕೆ ಮಾಡಲಾಗುತ್ತಿದೆ. ಭಾರತದಲ್ಲಿ ಆ್ಯಪಲ್ ಉತ್ಪನ್ನಗಳ ತಯಾರಿಕೆ ಮತ್ತು ಪೂರೈಕೆಯಲ್ಲಿ 1.5 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ ಈಗಾಗಲೇ ಆ್ಯಪಲ್ ಕಂಪನಿ ಲಕ್ಷಾಂತರ ಉದ್ಯೋಗ ಸೃಷ್ಟಿ ಮಾಡಿದ್ದು, ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

₹3.32 ಲಕ್ಷ ಕೋಟಿ ಬಂಡವಾಳ!

'ಆ್ಯಪಲ್' ಕಂಪನಿ ಇದೀಗ ಭವಿಷ್ಯಕ್ಕಾಗಿ ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಈ ಯೋಜನೆಗಳ ಪ್ರಕಾರ 3-4 ವರ್ಷಗಳಲ್ಲಿ 'ಆ್ಯಪಲ್' ಸಂಸ್ಥೆ ಭಾರತದಲ್ಲಿ 5 ಪಟ್ಟು ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲು ನಿರ್ಧಾರ ಮಾಡಿದೆ. ಇದೇ ಕಾರಣಕ್ಕೆ ₹3.32 ಲಕ್ಷ ಕೋಟಿ ಬಂಡವಾಳ ಹೂಡಲು ನಿರ್ಧಾರ ಕೂಡ ಮಾಡಿದೆ. ಇದಕ್ಕೆ ಅನುಗುಣವಾಗಿ ಹೊಸದಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡು, ಉದ್ಯೋಗ ಸೃಷ್ಟಿ ಮಾಡಲು ಇದೀಗ 'ಆ್ಯಪಲ್' ಕಂಪನಿಯು ಮಹತ್ವದ ಹೆಜ್ಜೆಯನ್ನ ಇಟ್ಟಿದೆ ಎಂದು ವರದಿಯಾಗಿದೆ.

ಮತ್ತೊಂದು ಗಮನಾರ್ಹ ಸಂಗತಿ ಏನೆಂದರೆ, 2023 & 24ನೇ ಆರ್ಥಿಕ ವರ್ಷದಲ್ಲಿ ಭಾರತದ ಮೂಲಕ ಸುಮಾರು ₹1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆ್ಯಪಲ್ ಐಫೋನ್‌ನ ವಿದೇಶಕ್ಕೆ ರಫ್ತು ಮಾಡಲಾಗಿದೆ. 2022 & 23ರಲ್ಲಿ ₹52,273 ಕೋಟಿ ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಲಾಗಿತ್ತು. ಇದೀಗ ಈ ಪ್ರಮಾಣವನ್ನು ಮತ್ತಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಮಹತ್ವದ ಹೆಜ್ಜೆ ಇಟ್ಟಿದೆ ಆ್ಯಪಲ್ ಕಂಪನಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+