ಪಾಲುದಾರರ ಸಹಯೋಗದೊಂದಿಗೆ ಕಳೆದ 25 ವರ್ಷಗಳಲ್ಲಿ ಭಾರತದಲ್ಲಿ ವಹಿವಾಟನ್ನು ನಡೆಸುತ್ತಾ ಬಂದಿರುವ ಐಕಾನಿಕ್ ಸಂಸ್ಥೆಯಾದ ಆಪಲ್ ಭಾರತದಲ್ಲಿ ತನ್ನ ಮೊದಲ ರಿಟೇಲ್ ಕಚೇರಿಯನ್ನು ಆರಂಭ ಮಾಡಿದೆ. ಮುಂಬೈನಲ್ಲಿರುವ ಭಾರತದ ಆಪಲ್‌ನ ಈ ಮೊದಲ ಕಚೇರಿಯನ್ನು ಮಂಗಳವಾರ ಉದ್ಘಾಟನೆ ಮಾಡಲಾಯಿತು. ಸಂಸ್ಥೆಯ ಸಿಇಒ ಟಿಮ್ ಕುಕ್ ಉದ್ಘಾಟನೆ ಮಾಡಿದ್ದಾರೆ.
ಆಪಲ್‌ನ ಕಚೇರಿಯನ್ನು ತೆರೆದ ಸಂಸ್ಥೆಯ ಸಿಇಒ ಟಿಮ್ ಕುಕ್ ಬೆಳಿಗ್ಗೆ 11 ಗಂಟೆಗೆ ಮೊದಲ ಗ್ರಾಹಕರನ್ನು ಕಚೇರಿಯ ಬಾಗಿಲನ್ನು ತೆರಯುವ ಮೂಲಕ ಸ್ವಾಗತಿಸಿದರು. ಈ ಕಚೇರಿಯು ಬಾಂದ್ರಾ ಕುರ್ಲಾ ಕಾಂಪ್ಲೇಕ್ಸ್ (BKC) ವಾಣಿಜ್ಯ ಪ್ರದೇಶದಲ್ಲಿದೆ. ಬಿಕೆಸಿ ಸ್ಟೋರ್‌ನ ಹೊರಭಾಗದಲ್ಲಿ ಆಪಲ್ ಗ್ರಾಹಕರು ಉತ್ಸಾಹದಿಂದ ನೆರೆದಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಇಒ ಟಿಕ್ ಕುಕ್ ಗ್ರಾಹಕರನ್ನು ಭೇಟಿಯಾದರು.

ಈ ಹಿಂದೆ ಹೆಚ್ಚಿನ ಆಪಲ್ ಸ್ಟೋರ್‌ಗಳಲ್ಲಿ ಆಪಲ್ ಉತ್ಪನ್ನವನ್ನು ಖರೀದಿ ಮಾಡಲೆಂದು ಗ್ರಾಹಕರು ಗಂಟೆಗಳು ಅಥವಾ ದಿನಗಳ ಮುಂಚೆಯೇ ಸಾಲಿನಲ್ಲಿ ನಿಲ್ಲಬಹುದು ಎಂದು ಸುದ್ದಿಯಾಗಿತ್ತು. ಅದು ಕೂಡಾ ತೀರಾ ಇತ್ತೀಚೆಗೆ ಆಪಲ್ ಐಫೋನ್ ಅಪ್‌ಡೇಟ್ ವರ್ಜನ್ ಬಿಡುಗಡೆಯಾಗಿರುವಾಗ ಜನರು ಆಪಲ್ ಐಫೋನ್ ಖರೀದಿಗಾಗಿ ಸಾಲು ನಿಲ್ಲಬಹುದು ಎಂಬ ನಿರೀಕ್ಷೆಯಿತ್ತು.
ಗ್ರಾಹಕರು ಹೇಳುವುದು ಏನು?
ಅದರಂತೆಯೇ ಹೊಸ ಕಚೇರಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಗ್ರಾಹಕರ ಸರತಿ ಸಾಲು ಕಂಡು ಬಂದಿದೆ. ಕೆಲವರು ಸೋಮವಾರ ರಾತ್ರಿ 8 ಗಂಟೆಯಿಂದಲೇ ಕಾದುಕೂತಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಲ್ಲಿನ ವಾತಾವರಣವು ವಿಭಿನ್ನವಾಗಿದೆ ಎಂದು ಪಾಶ್ಚಿಮಾತ್ಯ ಕೈಗಾರಿಕಾ ಕೇಂದ್ರವಾದ ಅಹಮದಾಬಾದ್‌ನಿಂದ ಈ ಆಪಲ್ ಸ್ಟೋರ್ ಬಿಡುಗಡೆಗೆ ಆಗಮಿಸಿದವರು ಹೇಳಿದ್ದಾರೆ. ಇದು ಸಾಮಾನ್ಯ ಅಂಗಡಿಯಲ್ಲಿ ಶಾಪಿಂಗ್ ಮಾಡುವಂತೆ ಅಲ್ಲ, ಇದು ಬೇರೆಯೇ ಅನುಭವ ಎಂದಿದ್ದಾರೆ.
ಆಪಲ್‌ನ ಸಿಇಒ ಟಿಮ್ ಕುಕ್ ಸೋಮವಾರ ಭಾರತಕ್ಕೆ ಆಗಮಿಸಿದ್ದಾರೆ. ಬಾಲಿವುಡ್ ತಾರೆಯರಾದ ಮಾಧುರಿ ದೀಕ್ಷಿತ್, ರವೀನಾ ಟಂಡನ್ ಮತ್ತು ಸಂಗೀತ ಸಂಯೋಜಕ ಎ.ಆರ್ ರೆಹಮಾನ್ ಮೊದಲ ದಿನ ಆಪಲ್‌ನ ಸಿಇಒ ಟಿಮ್ ಕುಕ್‌ರನ್ನು ಸ್ವಾಗತಿಸಿದ್ದಾರೆ. ಆದರೆ ಕೆಲವೊಂದು ಕಾರ್ಪೋರೇಟ್ ಸಂಬಂಧಿತ ಕಾರ್ಯಗಳ ಬಗ್ಗೆ ಚರ್ಚೆ ನಡೆಸುವ ಕಾರಣದಿಂದಾಗಿ ಸಿಇಒ ಟಿಮ್ ಕುಕ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾಗುವ ಸಾಧ್ಯತೆಯಿದೆ.
ಸಂಸ್ಥೆಯ ಪ್ರಕಾರ, ಬಿಕೆಸಿಯಲ್ಲಿನ ಆಪಲ್ ಸ್ಟೋರ್ ಇಡೀ ಜಗತ್ತಿನಲ್ಲೇ ಅತ್ಯಂತ ಶಕ್ತಿ-ಸಮರ್ಥ ಆಪಲ್ ಸ್ಟೋರ್‌ಗಳಲ್ಲಿ ಒಂದಾಗಿದೆ. ಕಂಪನಿಯು ತನ್ನದೇ ಆದ ಸೋಲರ್ ವ್ಯವಸ್ಥೆಯನ್ನು ಹೊಂದಿದೆ. ಹಾಗೆಯೇ ಸಂಪೂರ್ಣವಾಗಿ ನವೀಕರಿಸಬಹುದಾದ ಶಕ್ತಿಯ ಆಧಾರದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications