ಆಪಲ್‌ನ ಅತಿದೊಡ್ಡ ಚೀನೀ ಘಟಕ ತಯಾರಕರಲ್ಲಿ ಒಂದಾದ ಲಕ್ಸ್‌ಶೇರ್ ಭಾರತದಲ್ಲಿ ಹೂಡಿಕೆ ಮಾಡಬೇಕಾದ ಮೊತ್ತವನ್ನು ಭಾರತದ ಬದಲಾಗಿ ವಿಯೆಟ್ನಾಂನಲ್ಲಿ ಮಾಡಲು ನಿರ್ಧರಿಸಿದೆ. ಎರಡು ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯನ್ನು ಉಲ್ಲೇಖಿಸಿ ಈ ಬದಲಾವಣೆ ಮಾಡಲಾಗಿದೆ.
ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ, ಮೂರು ವರ್ಷಗಳ ಕಾಲ ಲಕ್ಸ್‌ಶೇರ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಪ್ರಯತ್ನ ಮಾಡಿದೆ. ಆದರೆ ಈ ಪ್ರಯತ್ನ ವಿಫಲವಾದ ಕಾರಣದಿಂದಾಗಿ ಈಗ ತನ್ನ ಹೂಡಿಕೆಯನ್ನು ವಿಯೆಟ್ನಾಂನಲ್ಲಿ ಮಾಡಲು ಲಕ್ಸ್‌ಶೇರ್ ಮುಂದಾಗಿದೆ.

ಲಕ್ಸ್‌ಶೇರ್ ಆಪಲ್‌ನ ಏರ್‌ಪಾಡ್‌ಗಳಿಗ ಪ್ರಾಥಮಿಕ ಪೂರೈಕೆದಾರ ಸಂಸ್ಥೆಯಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಐಫೋನ್‌ಗಳಿಗೂ ಪ್ರಮುಖ ಪೂರೈಕೆದಾರರಾಗುವ ಸಾಧ್ಯತೆಯಿದೆ. ಪ್ರಕಟಣೆಯ ವರದಿಗಳ ಪ್ರಕಾರ, ಕಂಪನಿಯು ಈಗ 330 ಮಿಲಿಯನ್ ಡಾಲರ್ ಮೌಲ್ಯದ ತಮ್ಮ ಹೂಡಿಕೆಯನ್ನು ವಿಯೆಟ್ನಾಂನ ಉತ್ತರ ಪ್ರಾಂತ್ಯದ ಬ್ಯಾಕ್ ಗಿಯಾಂಗ್ ಮೇಲೆ ಮಾಡುವ ಸಾಧ್ಯತೆಯಿದೆ.
ಇದಲ್ಲದೆ, ವಿಯೆಟ್ನಾಂ ಸರ್ಕಾರವು ಕಳೆದ ವಾರ ಆಪಲ್‌ನ ತಯಾರಕರಿಗೆ ಪರವಾನಗಿಯನ್ನು ಅನುಮೋದನೆ ಮಾಡಿದೆ ಎಂದು ವರದಿಯಾಗಿದೆ. ಇದು ವಿಯೆಟ್ನಾಂನಲ್ಲಿನ ಒಟ್ಟು ಹೂಡಿಕೆಯನ್ನು 504 ಮಿಲಿಯನ್ ಡಾಲರ್‌ಗೆ ಏರಿಕೆ ಮಾಡಿದೆ.
ಭಾರತಕ್ಕೆ ಆದ ನಷ್ಟ
ಈ ಹಿಂದೆ ಈ ಹೂಡಿಕೆಯನ್ನು ಲಕ್ಸ್‌ಶೇರ್ ಭಾರತದಲ್ಲಿ ಮಾಡಲು ನಿರ್ಧಾರ ಮಾಡಿತ್ತು. ಆದರೆ ಈಗ ನಿರ್ಧಾರ ಬದಲಾವಣೆ ಮಾಡಿರುವುದು ಭಾರತಕ್ಕೆ ನಷ್ಟವನ್ನು ಉಂಟು ಮಾಡಬಹುದು. ಟಾಟಾದಂತಹ ಭಾರತೀಯ ಕಂಪನಿಗಳು ಆಪಲ್ ಅನ್ನು ತನ್ನ ಜಾಲಕ್ಕೆ ಸೇರಿಸುವ ಪ್ರಯತ್ನ ಮಾಡುತ್ತಿರುವಾಗ ಈ ಹೂಡಿಕೆ ನಷ್ಟವು ಅತೀ ಪ್ರಮುಖ ಸ್ಥಾನವನ್ನು ವಹಿಸುತ್ತದೆ.
ಇನ್ನು ಇಲ್ಲಿಯವರೆಗೆ, ಆಪಲ್ ತನ್ನ ಉತ್ಪಾದನಾ ಬೇಡಿಕೆಯನ್ನು ಪೂರೈಸಲು ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈಗ, ಉದ್ಯಮದ ಮಧ್ಯಸ್ಥಗಾರರು ಆಪಲ್‌ನ ಈ ಕ್ರಮವು ವಿಶ್ವದ ಅತ್ಯಮೂಲ್ಯ ಕಂಪನಿಯ ಉದ್ದೇಶ ಬದಲಾಗುತ್ತಿರುವುದನ್ನು ತೋರಿಸುತ್ತದೆ ಎಂದು ಮಿಂಟ್ ವರದಿ ತಿಳಿಸುತ್ತದೆ.
ಆಗಸ್ಟ್ 16 ರಂದು, ಫಾಕ್ಸ್‌ಕಾನ್ ಎಂದು ಕರೆಯಲ್ಪಡುವ ತೈವಾನೀಸ್ ತಯಾರಕರಾದ ಹಾನ್ ಹೈ ಪ್ರೆಸಿಷನ್ ಇಂಡಸ್ಟ್ರಿ ಕಂ. ಲಿಮಿಟೆಡ್ ಮೂಲಕ ಆಪಲ್ ತನ್ನ ಐಫೋನ್ 15 ಶ್ರೇಣಿಯ ಜೋಡಣೆಯನ್ನು ಭಾರತದಲ್ಲಿ ಪ್ರಾರಂಭಿಸಿದೆ.
ಆದರೆ ಆಪಲ್ ತನ್ನ ನಾನ್ ಪ್ರೋ ಐಫೋನ್ 15 ಮಾಡೆಲ್‌ಗಳನ್ನು ಮಾತ್ರ ಭಾರತದಲ್ಲಿ ತಯಾರಿಸಲು ಮುಂದಾಗಿದೆ. ಅದರ ಪ್ರಮುಖ ಐಫೋನ್ 15 ಪ್ರೊ ಸಿರೀಸ್ ಉತ್ಪಾದನೆಯನ್ನು ಭಾರತದಲ್ಲಿ ಮಾಡಲಾಗುವುದಿಲ್ಲ ಎಂದು ಇಬ್ಬರು ಹಿರಿಯ ಉದ್ಯಮ ಅಧಿಕಾರಿಗಳನ್ನು ಉಲ್ಲೇಖಿಸಿ ಮಿಂಟ್ ವರದಿ ಮಾಡಿದೆ.


Click it and Unblock the Notifications