ಕಾರು ಖರೀದಿ ಮಾಡಬೇಕೆಂಬ ಕನಸು ಇದ್ಯಾ..? ಹೊಸ ಕಾರಿನ ಬದಲು ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುಬೇಕೆಂದುಕೊಂಡಿದ್ದೀರಾ..? ಹಣ ಎಲ್ಲಿಂದ ತರಬೇಕು? ಎಂದು ಯೋಚನೆ ಮಾಡುತ್ತಿದ್ರೆ ಚಿಂತೆ ಬಿಡಿ.. ಯಾಕೆಂದರೆ ಅನೇಕ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ನಿಮ್ಮಗೆ ಸಾಲವನ್ನು ನೀಡುತ್ತದೆ. ಹಾಗಿದ್ರೆ ಯಾವೆಲ್ಲಾ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿ ಸಿಗುತ್ತೆ? ಯಾವೆಲ್ಲಾ ದಾಖಲೆಗಳು ಅರ್ಹತೆಗಳು ಬೇಕು ಎಂಬ ಹೆಚ್ಚಿನ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ....
ಹೌದು, ಕಾರು ಖರೀದಿ ಮಾಡುವುದು ಮಧ್ಯಮ ವರ್ಗದ ಕುಟುಂಬದ ಕನಸು. ಭಾರತದಲ್ಲಿ ಹೊಸ ಕಾರು ತೆಗೆದುಕೊಳ್ಳದೆ, ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿ ಇದೆ. ಅದಕ್ಕಾಗಿಯೇ ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ದೊಡ್ಡ ಮಾರುಕಟ್ಟೆ ಇದೆ. ದೇಶದ ಅನೇಕ ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಕಂಪನಿಗಳು ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಸಾಲ ನೀಡುತ್ತವೆ. 7 ವರ್ಷದ ಅವಧಿಯೊಂದಿಗೆ ಸೆಕೆಂಡ್ ಹ್ಯಾಂಡ್ ಕಾರುಗಳ ಮೇಲೆ ಸಾಲವನ್ನು ನೀಡುತ್ತವೆ. ಯಾವ ಬ್ಯಾಂಕುಗಳಲ್ಲಿ ಎಷ್ಟು ಬಡ್ಡಿ ದರ ಈ ಕೆಳಗಿನಂತೆ ವಿವರಿಸಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮೇಲೆ ಶೇ. 11.75 ರಿಂದ ಶೇ. 15.25 ರವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಈ ಬ್ಯಾಂಕ್ ಗರಿಷ್ಠ 5 ವರ್ಷಗಳ ಅವಧಿಯವರೆಗೂ ಸಾಲವನ್ನು ನೀಡುತ್ತೇವೆ.
HDFC ಬ್ಯಾಂಕ್
HDFC ಬ್ಯಾಂಕ್‌ನಲ್ಲಿ ಬಡ್ಡಿದರ ಶೇ 13.75 ರಿಂದ ಆರಂಭವಾಗುತ್ತದೆ. ಈ ಬ್ಯಾಂಕ್ 7 ವರ್ಷಗಳವರೆಗಿನ ಅವಧಿಗೆ ಸಾಲ ನೀಡುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮೇಲೆ ಬಡ್ಡಿದರ ಶೇ. 9.80 ರಿಂದ ಪ್ರಾರಂಭವಾಗುತ್ತದೆ.ಈ ಬ್ಯಾಂಕ್ 5 ವರ್ಷಗಳವರೆಗಿನ ಅವಧಿಗೆ ಸಾಲ ನೀಡುತ್ತದೆ.
ಟಾಟಾ ಕ್ಯಾಪಿಟಲ್
ಸೆಕೆಂಡ್ ಹ್ಯಾಂಡ್ ಕಾರು ಮೇಲೆ ಟಾಟಾ ಕ್ಯಾಪಿಟಲ್ ಬಡ್ಡಿದರ ಶೇಕಡಾ 10.75 ರಿಂದ ಪ್ರಾರಂಭವಾಗುತ್ತದೆ.ಈ ಬ್ಯಾಂಕ್ 1 ರಿಂದ 5 ವರ್ಷಗಳವರೆಗಿನ ಅವಧಿಗೆ ಸಾಲ ನೀಡುತ್ತದೆ.
ಯಾವೆಲ್ಲಾ ದಾಖಲೆಗಳು ಬೇಕು..?
ಆಧಾರ್ ಕಾರ್ಡ್
ಪಾಸ್‌ಪೋರ್ಟ್
ಚಾಲನಾ ಪರವಾನಗಿ
ಮತದಾರರ ಗುರುತಿನ ಚೀಟಿ
ಪ್ಯಾನ್ ಕಾರ್ಡ್
ಅರ್ಜಿ ನಮೂನೆ
ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
ಕಾರು ಮೌಲ್ಯಮಾಪನ ವರದಿ
ಎಲ್ಐಸಿ ಪಾಲಿಸಿ
ವಿದ್ಯುತ್ ಬಿಲ್
ಪಡಿತರ ಚೀಟಿಗಳ ದಾಖಲೆಯನ್ನು ಹೊಂದಿರಬೇಕು.
ಹೊಸ ಹಾಗೂ ಹಳೇ ಕಾರು ಖರೀದಿಗೆ ವ್ಯತ್ಯಾಸ
ಹೊಸ ಕಾರು ಖರೀದಿಗೆ ಹಾಗೂ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ವ್ಯತ್ಯಾಸ ಇದೆ. ಸೆಕೆಂಡ್ ಹ್ಯಾಂಡ್ ಕಾರಿಗಾದರೆ ಬಡ್ಡಿ ದರ ಹೆಚ್ಚಿರುತ್ತದೆ. ಇನ್ನು ಆ ಕಾರಿನ ಮೌಲ್ಯಕ್ಕೆ ಸಿಗುವ ಸಾಲದ ಪ್ರಮಾಣ ಕಡಿಮೆ ಇರುತ್ತದೆ. ಮಾರಾಟಗಾರರು ಕಾರಿಗೆ ಒಂದು ಬೆಲೆ ನಿಗದಿ ಮಾಡಿದ್ದರೆ, ಅದಕ್ಕೆ ಬ್ಯಾಂಕ್ ಗಳು ಕಟ್ಟುವ ಬೆಲೆಯೇ ಬೇರೆ ರೀತಿ ಇರುತ್ತದೆ.
ಇನ್ನು ಮರು ಪಾವತಿ ಅವಧಿಯು ಆ ಕಾರು ಎಷ್ಟು ವರ್ಷ ಹಳೆಯದು ಎಂಬುದರ ಮೇಲೆ ಆಧಾರ ಪಟ್ಟಿರುತ್ತದೆ. ಕಡಿಮೆ ಸಾಲಕ್ಕೆ ಒಪ್ಪಿಕೊಂಡು ಬಿಟ್ಟರೆ, ಹೆಚ್ಚಿನ ಮೊತ್ತವನ್ನು ಕೈಯಿಂದ ಹಾಕಬೇಕಾಗುತ್ತದೆ. ಸಾಲದ ಮೊತ್ತ, ಮರುಪಾವತಿ ಅವಧಿ, ಬಡ್ಡಿ ದರ, ಪೂರ್ವಪಾವತಿ ಶುಲ್ಕ ಇತ್ಯಾದಿಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳವದಉ ಮುಖ್ಯವಾಗುತ್ತದೆ.
ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಏನೆಲ್ಲಾ ಅರ್ಹತೆಗಳು ಇರಬೇಕು?
- 21 ರಿಂದ 65 ವರ್ಷಗಳ ನಡುವಿನ ವಯಸ್ಸು ಇರಬೇಕು.
- ತಿಂಗಳಿಗೆ 15000 ಸಂಬಳವನ್ನು ಹೊಂದಿರಬೇಕು
- 1 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಉದ್ಯೋಗವನ್ನು ಮಾಡಿರಬೇಕು.
More From GoodReturns

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications