RCEP ಒಪ್ಪಂದ ಹಿನ್ನೆಲೆಯಲ್ಲಿ ಏಷ್ಯನ್ ಷೇರು ಮಾರುಕಟ್ಟೆ ಏರಿಕೆ

ಹದಿನೈದು ಆರ್ಥಿಕತೆಗಳು ಸೇರಿ ವಿಶ್ವದ ಅತಿ ದೊಡ್ಡ ವ್ಯಾಪಾರ ಬಣವಾಗಿ ರೂಪುಗೊಂಡ ಹಿನ್ನೆಲೆಯಲ್ಲಿ ಏಷ್ಯಾ ಷೇರು ಮಾರ್ಕೆಟ್ ಗಳು ಏರಿಕೆ ಕಂಡಿವೆ. ಈ ಮಧ್ಯೆ ಆಸ್ಟ್ರೇಲಿಯಾದಲ್ಲಿ ಮಾರ್ಕೆಟ್ ಆರಂಭವಾದ ಕೆಲ ಹೊತ್ತಿನಲ್ಲೇ ವಹಿವಾಟು ನಿಂತಿತು. ಈಗ ಹದಿನೈದು ಆರ್ಥಿಕತೆಗಳು ಒಪ್ಪಂದ ಮಾಡಿಕೊಂಡಿರುವುದರಿಂದ ನಿಧಾನಕ್ಕೆ ಹಲವು ಕ್ಷೇತ್ರಗಳಲ್ಲಿ ಸುಂಕ ವಿಧಿಸುವುದು ಕಡಿಮೆ ಮಾಡುವ ಉದ್ದೇಶ ಇದೆ.

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (RCEP) ವಿಶ್ವದ ಅತಿ ದೊಡ್ಡ ವ್ಯಾಪಾರ ಬಣವಾಗಿದೆ. ಇದರಲ್ಲಿ ಯುಎಸ್ ಇಲ್ಲ. ಇದೇ ಮೊದಲ ಬಾರಿಗೆ ಪೂರ್ವ ಏಷ್ಯನ್ ಶಕ್ತಿಗಳಾದ ಚೀನಾ, ಜಪಾನ್, ದಕ್ಷಿಣ ಕೊರಿಯಾ ಒಂದೇ ವ್ಯಾಪಾರ ಒಪ್ಪಂದದಲ್ಲಿ ಇವೆ. ಜಪಾನ್ ನ ನಿಕೈ, ಟೊಪಿಕ್ಸ್, ಹಾಂಕಾಂಗ್ ನ ಹ್ಯಾಂಗ್ ಸೆಂಗ್ ಕೂಡ ಏರಿಕೆ ಕಂಡಿವೆ.

RCEP ಒಪ್ಪಂದ ಹಿನ್ನೆಲೆಯಲ್ಲಿ ಏಷ್ಯನ್ ಷೇರು ಮಾರುಕಟ್ಟೆ ಏರಿಕೆ

RCEPಯಲ್ಲಿ ಆಗ್ನೇಯ ಏಷ್ಯಾದ ಹತ್ತು ರಾಷ್ಟ್ರಗಳಿವೆ. ಇದರ ಜತೆಗೆ ದಕ್ಷಿಣ ಕೊರಿಯಾ, ಚೀನಾ, ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸಹ ಇದ್ದು, RCEP ವಲಯದಲ್ಲಿ ಬರುವ ದೇಶಗಳು ಪರಸ್ಪರ ವ್ಯವಹಾರ ನಡೆಸುವಾಗ ಸುಂಕವನ್ನು ತೆಗೆಯುವ ಉದ್ದೇಶವನ್ನು ಹೊಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+