For Quick Alerts
ALLOW NOTIFICATIONS  
For Daily Alerts

ಅಬಕಾರಿ ಸುಂಕವನ್ನು 25 ಪರ್ಸೆಂಟ್ ಹೆಚ್ಚಿಸಲು ಅಸ್ಸಾಂ ಸರ್ಕಾರ ನಿರ್ಧಾರ

|

ಭಾರತದಲ್ಲಿ ತಯಾರಾದ ವಿದೇಶಿ ಲಿಕ್ಕರ್ (ಐಎಂಎಫ್‌ಎಲ್‌) ಮೇಲಿನ ಅಬಕಾರಿ ಸುಂಕವನ್ನು 25 ಪರ್ಸೆಂಟ್ ಹೆಚ್ಚಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ.

ಕೊರೊನಾವೈರಸ್ ಬಿಕ್ಕಟ್ಟಿನಿಂದ ಉಂಟಾಗಿರುವ ಅನಿರೀಕ್ಷಿತ ಆರ್ಥಿಕ ಹೊರೆ ಮತ್ತು ವೆಚ್ಚವನ್ನು ಪೂರೈಸಲು ರಾಜ್ಯ ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ರಾಜ್ಯ ಕೈಗಾರಿಕಾ ಸಚಿವ ಚಂದ್ರ ಮೋಹನ್ ಪಟೋವರಿ ಶುಕ್ರವಾರ ನಡೆದ ಕ್ಯಾಬಿನೆಟ್ ಸಭೆಯ ನಂತರ ತಿಳಿಸಿದ್ದಾರೆ.

ಅಬಕಾರಿ ಸುಂಕವನ್ನು 25 ಪರ್ಸೆಂಟ್ ಹೆಚ್ಚಿಸಲು ಅಸ್ಸಾಂ ಸರ್ಕಾರ ನಿರ್ಧಾರ

ಈಗಾಗಲೇ ದೆಹಲಿ, ಆಂಧ್ರಪ್ರದೇಶ, ಉತ್ತರಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ಮದ್ಯದ ಬೆಲೆ ಹೆಚ್ಚಿಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿವೆ. ಇದೇ ಸಾಲಿನಲ್ಲಿ ಅಸ್ಸಾಂ ಕೂಡ ಸಾಗಿದ್ದು 1,000 ಕೋಟಿ ರುಪಾಯಿ ಹೆಚ್ಚುವರಿ ಆದಾಯವನ್ನು ಪಡೆಯಲು ಯೋಜಿಸಿದೆ.

ಏಪ್ರಿಲ್ 13ರಿಂದ ನಿಯೋಜಿಸಲಾಗಿರುವ 50 ಪರ್ಸೆಂಟ್‌ರಷ್ಟು ಕಾರ್ಯಪಡೆಯ ಬಳಕೆಯನ್ನು ಸಾಮಾಜಿಕ ದೂರವಿಡುವ ಮಾನದಂಡಗಳನ್ನು ಕಾಯ್ದುಕೊಳ್ಳಲು ಸಂಪೂರ್ಣ ಬಲದಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ ಎಂದು ಕ್ಯಾಬಿನೆಟ್ ನಿರ್ಧರಿಸಿದೆ. ಅಗತ್ಯವಿದ್ದರೆ ಅಸ್ಸಾಂ ಕೃಷಿ ಮಾರುಕಟ್ಟೆ ಮಂಡಳಿಯ ವೇತನಕ್ಕಾಗಿ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತದೆ ಎಂದು ನಿರ್ಧರಿಸಿದೆ.

English summary

Assam Govt Hikes Excise Duty On IMFL By 25 Percent

The Assam government has decided to increase the excise duty on Indian Made Foreign Liquor (IMFL) by 25 per cent
Story first published: Saturday, May 9, 2020, 9:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X