66ನೇ ವಯಸ್ಸಿನಲ್ಲಿ ಉದ್ಯಮದ ಕನಸು ಕಂಡು ಯಶಸ್ವಿಯಾದ ವ್ಯಕ್ತಿ ಅಮರ!

ನವದೆಹಲಿ, ಏಪ್ರಿಲ್‌ 22: ಸಾಧಕರಿಗೆ ವಯಸ್ಸು ಬರೀ ನಂಬರ್‌ ಅಷ್ಟೇ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ 66ನೇ ವಯಸ್ಸಿನಲ್ಲಿ ಉದ್ಯಮದ ಕನಸು ಕಂಡು ಯಶಸ್ವಿಯಾದ ವ್ಯಕ್ತಿಯೊಬ್ಬರು ಹಲವಾರು ಯುವ ಉದ್ಯಮಿಗಳಿಗೆ ಸ್ಪೂರ್ತಿಯಾಗಿದ್ದಾರೆ.

ಸಾಮಾನ್ಯವಾಗಿ ಜನರು 50ನೇ ವಯಸ್ಸಿಗೆ ಬಂದಾಗ ಅವರು ನಿವೃತ್ತಿಯ ಬಗ್ಗೆ ಯೋಚಿಸುತ್ತಾರೆ, ಆದರೆ ಕೃಷ್ಣದಾಸ್ ಪಾಲ್ ಈ ಉದಾಹರಣೆಗಳಿಗೆ ಬೇರೆಯಾಗಿ ವಿಭಿನ್ನವಾಗಿ ಸಮಾಜದಲ್ಲಿ ಕಂಡು ಬರುತ್ತಾರೆ. 60 ನೇ ವಯಸ್ಸಿನಲ್ಲಿ ಕೃಷ್ಣದಾಸ್ ಪಾಲ್ ಅವರು ತಮ್ಮ ಮಕ್ಕಳಾದ ಶರ್ಮಿಷ್ಠ, ಅರ್ಪಣ್ ಮತ್ತು ಜಯೀತಾ ಅವರ ಮೊದಲಕ್ಷರಗಳಿಂದ ಪ್ರೇರಿತರಾಗಿ ಎಸ್‌ಎಜೆ ಫುಡ್ ಎಂಬ ಹೆಸರಿನ ತಮ್ಮ ಸ್ವಂತ ಕಂಪನಿಯನ್ನು ಪ್ರಾರಂಭಿಸಿದರು.

 66ನೇ ವಯಸ್ಸಿನಲ್ಲಿ ಉದ್ಯಮಿಯಾಗಿ ಯಶಸ್ವಿಯಾದ ವ್ಯಕ್ತಿ

2000 ರಲ್ಲಿ ಬಿಸ್ಕ್ ಫಾರ್ಮ್ ವನ್ನು ಅವರು ಸ್ಥಾಪಿಸಿದರು. ಸಕ್ಕರೆ-ಮುಕ್ತ ಬಿಸ್ಕತ್ತುಗಳನ್ನು ಉತ್ಪಾದಿಸುವುದು ಅವರ ಗುರಿಯಾಗಿತ್ತು. ಆದರೆ ಕಂಪೆನಿ ಕಟ್ಟುವುದು ಅವರಂದುಕೊಂಡತೆ ಸುಲಭವಾಗಿರಲಿಲ್ಲ. ಬಿಸ್ಕ್ ಫಾರ್ಮ್ಸ್ ಕಂಪನಿಯು 2004 ರಲ್ಲಿ ಹಣಕಾಸಿನ ತೊಂದರೆಗಳನ್ನು ಎದುರಿಸಿತು, 15 ಕೋಟಿ ನಷ್ಟವನ್ನು ಅನುಭವಿಸಿತು. ಆಗ ಕೃಷ್ಣದಾಸ್ ಪಾಲ್ ಪೂರ್ವ ಭಾರತದ ಕಡೆಗೆ ತಮ್ಮ ಗಮನವನ್ನು ಹರಿಸಿದರು. ಅವರು ಏಳು ಹೊಸ ಬಿಸ್ಕತ್ತು ಪ್ರಭೇದಗಳನ್ನು ಬಿಡುಗಡೆ ಮಾಡಿದರು. ಪ್ರತಿಯೊಂದೂ ವಿಭಿನ್ನವಾದ ಸ್ಥಳೀಯ ರುಚಿಗಳನ್ನು ಒಳಗೊಂಡಿತ್ತು.

ಈ ಕಾರ್ಯತಂತ್ರದ ಕ್ರಮವು ಯಶಸ್ವಿಯಾಯಿತು. ಇದು ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ ಮತ್ತು ಒಡಿಶಾದಾದ್ಯಂತ ಅವರ ಬಿಸ್ಕೆಟ್‌ಗಳ ವ್ಯಾಪಕ ಜನಪ್ರಿಯತೆಗೆ ಕಾರಣವಾಯಿತು. ಸಮಯ ಕಳೆದಂತೆ ಬಿಸ್ಕ್ ಫಾರ್ಮ್ಸ್ ಮಾರುಕಟ್ಟೆಯಲ್ಲಿ ಅಗ್ರ ಬ್ರಾಂಡ್‌ಗಳಲ್ಲಿ ದೊಡ್ಡ ಕಂಪೆನಿಯಾಗಿ ಬೆಳೆಯಿತು. ನ್ಯೂಸ್ 18 ಕಂಪನಿಯು ಪೂರ್ವ ಭಾರತದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿತು, ಅಲ್ಲಿ ಸುಮಾರು 40% ಮಾರುಕಟ್ಟೆಯನ್ನು ಹೊಂದಿದೆ. 2008 ರ ಹೊತ್ತಿಗೆ ಕಂಪನಿಯ ಮಾರಾಟವು 200 ಕೋಟಿ ರೂ. ಆಗಿತ್ತು.

ದುರದೃಷ್ಟವಶಾತ್ ಕೃಷ್ಣದಾಸ್ ಪಾಲ್‌ 2020 ರಲ್ಲಿ ಕೋವಿಡ್ -19 ಸಾಂಕ್ರಾಮಿಕದ ಮೊದಲ ಅಲೆಯ ಸಮಯದಲ್ಲಿ ನಿಧನರಾದರು. ಈ ನಷ್ಟದ ಹೊರತಾಗಿಯೂ ಅವರ ಪರಂಪರೆಯು ಬಲವಾಗಿ ಉಳಿದಿದೆ, ಬೆಳೆದಿದೆ. ಅವರ ಮಗ ಅರ್ಪನ್ ಪಾಲ್ ಕಾರ್ಯನಿರ್ವಾಹಕ ಅಧ್ಯಕ್ಷರ ಪಾತ್ರವನ್ನು ವಹಿಸಿಕೊಂಡಿದ್ದಾರೆ. ಕಂಪನಿಯನ್ನು ಮುನ್ನಡೆಸಲು ತಮ್ಮ ತಂದೆಯ ದೃಷ್ಟಿಕೋನವನ್ನು ಬಳಸಿಕೊಂಡಿದ್ದಾರೆ.

ಎಕನಾಮಿಕ್ ಟೈಮ್ಸ್ ಪ್ರಕಾರ, ಎಸ್‌ಎಜೆ ಫುಡ್ 2023 ರ ಆರ್ಥಿಕ ವರ್ಷದಲ್ಲಿ 2,100 ಕೋಟಿ ರೂಪಾಯಿಗಳ ವಹಿವಾಟು ನಡೆಸಿತು. ಈ ಸಾಧನೆಯು ದೇಶದಾದ್ಯಂತ ಸಂಘಟಿತ ಬಿಸ್ಕತ್ತು ವಿಭಾಗದಲ್ಲಿ ಪ್ರಮುಖ ಕಂಪೆನಿಯಾಗಿ ತನ್ನ ಸ್ಥಾನಮಾನವನ್ನು ಹಿಗ್ಗಿಸಿಕೊಂಡಿತ್ತು. ಕೃಷ್ಣದಾಸ್ ಪಾಲ್ ಬುರ್ದ್ವಾನ್‌ನ ಕಮರ್ಕಟಾ ಗ್ರಾಮದಲ್ಲಿ ಜನಿಸಿದವರು. ಕಾನೂನು ಅಧ್ಯಯನ ಮಾಡಿದ್ದರು. ನಂತರ ಅವರು ತಮ್ಮ ತಂದೆಯ ವ್ಯಾಪಾರ ಮತ್ತು ವಿತರಣಾ ವ್ಯವಹಾರಕ್ಕೆ ಸೇರಿದರು. ಇದು 1947 ರಲ್ಲಿ ಪ್ರಾರಂಭವಾಯಿತು. ಕುಟುಂಬದ ವ್ಯವಹಾರವು ಐದು ಸಹೋದರರ ನಡುವೆ ವಿಭಜನೆಯಾಯಿತು.

ಕೃಷ್ಣದಾಸ್ ಪಾಲ್ 1974 ರಲ್ಲಿ ಅಪರ್ಣಾ ಏಜೆನ್ಸಿ ಎಂಬ ಸ್ವಂತ ಕಂಪನಿಯನ್ನು ಪ್ರಾರಂಭಿಸಿದರು. ಅವರು ನೆಸ್ಲೆ, ಡಾಬರ್ ಮತ್ತು ರೆಕಿಟ್ ಮತ್ತು ಕೋಲ್ಮನ್‌ನಂತಹ ಬ್ರ್ಯಾಂಡ್‌ಗಳಿಗೆ ಉತ್ಪನ್ನಗಳನ್ನು ವಿತರಿಸಲು ಪ್ರಾರಂಭಿಸಿದರು. ನಂತರ 2000 ರಲ್ಲಿ ಅವರು ಬಿಸ್ಕ್ ಫಾರ್ಮ್ ಅನ್ನು ರಚಿಸಿದರು. ಈಗ ಬಿಸ್ಕ್ ಫಾರ್ಮ್ ಐದು ಕಾರ್ಖಾನೆಗಳನ್ನು ನಡೆಸುತ್ತಿದೆ. ಬ್ರಿಟಾನಿಯಾದ ನಂತರ ಪೂರ್ವದಲ್ಲಿ ಎರಡನೇ ಅತಿದೊಡ್ಡ ಬಿಸ್ಕತ್ತು ಬ್ರಾಂಡ್ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+