ಒಂದು ಕಾಲದಲ್ಲಿ ಎಟಿಎಂಗಳು ( Automated Teller Machines) ನಮ್ಮ ಹಣಕಾಸಿನ ವ್ಯವಹಾರಗಳಲ್ಲಿ ಕ್ರಾಂತಿಕಾರಿಯಾದ ಬದಲಾವಣೆ ಮಾಡಿತ್ತು. ಯಾಕೆಂದರೆ ಅದಕ್ಕೂ ಹಿಂದೆ ಬ್ಯಾಂಕಿಗೆ ಹೋಗಿ ಗಂಟೆಗಟ್ಟಲೆ ಕ್ಯೂ ನಲ್ಲಿ ನಿಂತು ಕ್ಯಾಶಿಯರ್‌ನಿಂದ ನಮ್ಮ ಹಣ ಪಡೆಯುವುದು ಸಾಮಾನ್ಯವಾಗಿತ್ತು. ಆದರೆ ಎಟಿಎಂಗಳ ಸ್ಥಾಪನೆಯ ಬಳಿಕ ಇವುಗಳ ಸಹಾಯದಿಂದ ನಾವು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಹಣವನ್ನು ಹಿಂಪಡೆಯಬಹುದಾಗಿತ್ತು. ಹೀಗಾಗಿ ಇದು ಕ್ರಾಂತಿಯನ್ನೇ ಸೃಷ್ಟಿಸಿತ್ತು.
ಆದರೆ ಈಗ ಕಾಲ ಮತ್ತೆ ಬದಲಾಗಿದೆ. ಡಿಜಿಟಲ್ ಯುಗಕ್ಕೆ ಕಾಲಿಟ್ಟ ಮೇಲೆ ಬ್ಯಾಂಕ್ ಬಿಡಿ ಎಟಿಎಂಗಳ ಕಡೆ ಹೆಜ್ಜೆ ಹಾಕುವವರ ಸಂಖ್ಯೆಯಲ್ಲಿ ತೀವ್ರ ಇಳಿಕೆ ಕಂಡು ಬರುತ್ತಿದೆ. ದಾಖಲೆಯ ಪ್ರಮಾಣದ ನಗದು ಚಲಾವಣೆಯಾಗುತ್ತಿದ್ದರೂ, ಭಾರತದಲ್ಲಿ ಬ್ಯಾಂಕ್, ಎಟಿಎಂ, ಮತ್ತು ನಗದು ಮರುಬಳಕೆ ಕಡಿಮೆಯಾಗುತ್ತಿದೆ. ಹೀಗಾಗಿ ಬ್ಯಾಂಕುಗಳು ಕೂಡಾ ಎಟಿಎಂಗಳು ಮತ್ತು ನಗದು ಮರುಬಳಕೆ ಮಾಡುವವರನ್ನು ನಿಧಾನಗತಿಯಲಿ ತನ್ನಿಂದ ಹೊರಹಾಕುತ್ತಿವೆ. ಇದಕ್ಕೆ ಕಾರಣ ಡಿಜಿಟಲ್ ಪಾವತಿಗಳ ಬಳಕೆ ಹೆಚ್ಚುತ್ತಿರುವುದು ಮತ್ತು ಬ್ಯಾಂಕುಗಳು ಡಿಜಿಟಲ್ ಪಾವತಿಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವುದು ಎನ್ನಬಹುದು.

ಆರ್‌ಬಿಐ ಅಂಕಿಅಂಶ ಏನು ಹೇಳುತ್ತದೆ?
ಆರ್‌ಬಿಐನ ಇತ್ತೀಚಿನ ದತ್ತಾಂಶದ ಪ್ರಕಾರ, ಭಾರತದಲ್ಲಿ ಎಟಿಎಂಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2023ರ ಸೆಪ್ಟೆಂಬರ್‌ನಲ್ಲಿ 2,19,000 ಆಗಿದ್ದ ಎಟಿಎಂಗಳ ಸಂಖ್ಯೆ 2024ರ ಸೆಪ್ಟೆಂಬರ್‌ಗೆ 2,15,000ಕ್ಕೆ ಇಳಿದಿದೆ. ಈ ಕುಸಿತಕ್ಕೆ ಮುಖ್ಯ ಕಾರಣವೆಂದರೆ ಆಫ್-ಸೈಟ್ ಎಟಿಎಂಗಳ ಸಂಖ್ಯೆಯಲ್ಲಿನ ತೀವ್ರ ಕುಸಿತ. 2023ರ ಸೆಪ್ಟೆಂಬರ್‌ನಲ್ಲಿ 97,072 ಆಗಿದ್ದ ಆಫ್-ಸೈಟ್ ಎಟಿಎಂಗಳ ಸಂಖ್ಯೆ 2024ರ ಸೆಪ್ಟೆಂಬರ್‌ಗೆ 87,872ಕ್ಕೆ ಇಳಿದಿದೆ.
AGS ಟ್ರಾನ್ಸಾಕ್ಟ್ ಟೆಕ್ನಾಲಜೀಸ್‌ನ ಅಧ್ಯಕ್ಷರಾದ ರವಿ ಬಿ ಗೋಯಲ್ ಅವರ ಪ್ರಕಾರ, ಈ ಪ್ರವೃತ್ತಿಯು ಭಾರತದ ಬ್ಯಾಂಕಿಂಗ್ ವಲಯದಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ. ಬ್ಯಾಂಕುಗಳು ಈಗ ಡಿಜಿಟಲ್ ರೂಪಾಂತರ, ಬಲವರ್ಧನೆ ಮತ್ತು ಕಡಿಮೆ ಸೇವೆ ಸಲ್ಲಿಸುವ ಪ್ರದೇಶಗಳಿಗೆ ವಿಸ್ತರಣೆಯತ್ತ ಹೆಚ್ಚು ಗಮನ ಹರಿಸುತ್ತಿವೆ. ಇದರ ಪರಿಣಾಮವಾಗಿ, ಬ್ಯಾಂಕುಗಳು ತಮ್ಮ ಎಟಿಎಂ ನೆಟ್‌ವರ್ಕ್‌ಗಳನ್ನು ಹೆಚ್ಚು ಕಾರ್ಯಕುಶಲಗೊಳಿಸಲು ಬಯಸುತ್ತಿವೆ.
ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಬಲವರ್ಧನೆಯ ಭಾಗವಾಗಿ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯಗಳನ್ನು ಸಂಯೋಜಿಸುವ ಹೆಚ್ಚು ಆಪ್ಟಿಮೈಸ್ಡ್ ನೆಟ್‌ವರ್ಕ್‌ಗಳತ್ತ ಗಮನ ಹರಿಸುತ್ತಿವೆ. ಇದು ಎಟಿಎಂಗಳ ಸಂಖ್ಯೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ.
ATM ಗಳಿಗೆ RBI ಆದೇಶ
ಭಾರತದಲ್ಲಿ ನಗದು ಇನ್ನೂ ಪ್ರಮುಖ ಪಾತ್ರ ವಹಿಸುತ್ತಿದ್ದು, 2022ರಲ್ಲಿ ದೇಶದ ಒಟ್ಟು ವಹಿವಾಟಿನ ಶೇಕಡಾ 89 ಮತ್ತು GDPಯ ಶೇಕಡಾ 12ರಷ್ಟು ಪಾಲನ್ನು ಹೊಂದಿದೆ. ಅದ್ರೂ ಕೂಡಾ ATMಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪ್ರಸ್ತುತ, ಪ್ರತಿ ಲಕ್ಷ ಜನರಿಗೆ ಕೇವಲ 15 ATMಗಳು ಮಾತ್ರ ಲಭ್ಯವಿವೆ.
ಉಚಿತ ವಹಿವಾಟುಗಳನ್ನು ಅನುಮತಿಸುವ ನಿಯಮ, ಎಲ್ಲಾ ಬ್ಯಾಂಕುಗಳ ATMಗಳನ್ನು ಯಾವುದೇ ಬ್ಯಾಂಕ್‌ನ ಗ್ರಾಹಕರು ಬಳಸಬಹುದಾದ ನಿಯಮ ಮತ್ತು ಇಂಟರ್‌ಚೇಂಜ್ ಶುಲ್ಕಗಳು ಕುರಿತಾದ ಆರ್‌ಬಿಐನ ನಿಯಮಗಳು ಹಾಗೂ ಅವುಗಳ ನಿರ್ವಹಣೆಗೆ ತಗಲುವ ಖರ್ಚು ವೆಚ್ಚಗಳಿಂದ ಬ್ಯಾಂಕುಗಳು ಹೊಸ ATMಗಳನ್ನು ಸ್ಥಾಪಿಸಲು ಹಿಂಜರಿಯುತ್ತಿವೆ. ಈ ಕಾರಣದಿಂದಾಗಿ, ATMಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ಭಾರತದಲ್ಲಿ ಬ್ಯಾಂಕಿಂಗ್ ವಲಯವು ಡಿಜಿಟಲ್ ಆಗಿ ಬೆಳೆಯುತ್ತಿದ್ದರೂ, ಗ್ರಾಹಕರು ಇನ್ನೂ ನಗದು ವಹಿವಾಟುಗಳನ್ನು ಬಯಸುತ್ತಾರೆ. ಹೀಗಾಗಿ, ಬ್ಯಾಂಕುಗಳು ತಮ್ಮ ಗ್ರಾಹಕರ ಭೌತಿಕ ಮತ್ತು ಡಿಜಿಟಲ್ ಎರಡೂ ಅಗತ್ಯಗಳನ್ನು ಪೂರೈಸಲು ಹೊಸ ಮಾದರಿಯನ್ನು ಅಳವಡಿಸಿಕೊಳ್ಳಲು ಯೋಜಿಸುತ್ತಿವೆ. ಈ ಮಾದರಿಯ ಪ್ರಕಾರ, ಪ್ರತಿ ಬ್ಯಾಂಕ್ ಶಾಖೆಯಲ್ಲಿ ಸರಾಸರಿ ಎರಡು ಎಟಿಎಂಗಳು ಇರಲಿವೆ.


Click it and Unblock the Notifications