ತೆರಿಗೆ ಕಟ್ಟದವರಿಗೆ ಶಾಕ್! ಆಸ್ತಿ ತೆರಿಗೆ ವಸೂಲಿಗೆ ಬಿಬಿಎಂಪಿ ಹೊಸ ಅಸ್ತ್ರವನ್ನು ಪ್ರಯೋಗ ಮಾಡಲು ಶುರುಮಾಡಿದೆ. ಹೌದು,ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡಲು ಬಿಬಿಎಂಪಿಯು ದೀರ್ಘಕಾಲದಿಂದ ಆಸ್ತಿ ತೆರಿಗೆಯನ್ನು ಪಾವತಿ ಮಾಡದ ಸುಸ್ತಿದಾರರ ಸ್ಥಿರ ಆಸ್ತಿಗಳನ್ನು ತುರ್ತು ಮಾರಾಟ ಮಾಡಲು ಹರಾಜ ಪ್ರಕ್ರಿಯೆಯನ್ನು ಆರಂಭಿಸುತ್ತಿದೆ.ಹಾಗಿದ್ರೆ ಸ್ಥಿರ ಆಸ್ತಿಗಳ ಹರಾಜು ಪ್ರಕ್ರಿಯೆ ಹೇಗೆರಲಿದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಈ ಆಸ್ತಿ ಮಾಲೀಕರುಗಳಿಗೆ ಕೆಳಗಿನ ಹಂತಗಳ ಪ್ರಕ್ರಿಯೆಯ ಹೊರತಾಗಿಯೂ ಬಾಕಿ ಆಸ್ತಿತೆರಿಗೆಯನ್ನು ಪಾವತಿಸಿರುವುದಿಲ್ಲ ಆದುದರಿಂದ ಈ ಹರಾಜು ಪ್ರಕ್ರಿಯೆಯನ್ನು ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 156 ಉಪಪ್ರಕರಣ 5 ರ ಅಡಿಯಲ್ಲಿ ಮಾಡಲಾಗುತ್ತಿದೆ.

* ಕಾರಣ ತೋರಿಸು ಸೂಚನೆ
* ಬೇಡಿಕೆ ನೋಟಿಸ್
* ಆಸ್ತಿಗಳ ಮುಟ್ಟುಗೋಲು
* ವಸತಿಯೇತರ ಆಸ್ತಿಗಳ ಸಂದರ್ಭದಲ್ಲಿ ಬೀಗಮುದ್ರೆ
ಆದುದರಿಂದ ಕೊನೆಯ ಹಂತವಾಗಿ ಆಸ್ತಿ ತೆರಿಗೆ ವಸೂಲಾತಿಗಾಗಿ ಈ ಆಸ್ತಿಗಳನ್ನು ಹರಾಜಿಗೆ ಇಡಲಾಗುತ್ತಿದೆ.
ಹರಾಜಿನಲ್ಲಿ ಸ್ವೀಕರಿಸಿದ ಯಾವುದೇ ಹೆಚ್ಚುವರಿ ಹಣವನ್ನು ಪಾಲಿಕೆಗೆ ಸಂದಾಯವಾಗಬೇಕಿರುವ ಪೂರ್ಣ ಬಾಕಿ ವಸೂಲಿ ಮಾಡಿದ ನಂತರ ಮಾಲೀಕರ ಬ್ಯಾಂಕ್ ಖಾತೆಗೆ ಜಮೆಮಾಡಲಾಗುವುದು.
ಪಾಲಿಕೆಯಲ್ಲಿನ 8-10 ಪ್ರಮುಖ ಸುಸ್ತಿದಾರರುಗಳನ್ನು ಪ್ರತಿ ವಲಯದಿಂದ ಸುಮಾರು 1-2 ಸುಸ್ತಿದಾರರುಗಳನ್ನು ಗುರುತಿಸಲಾಗಿದೆ ಮತ್ತು ಸ್ಥಿರ ಆಸ್ತಿಗಳ ಮಾರಾಟದ ಹರಾಜು ಮಾರಾಟ ದಿನಾಂಕವನ್ನು ನಿಗದಿಪಡಿಸುವ ನೋಟಿಸ್‌ಗಳನ್ನು ನೀಡಲಾಗಿದೆ, ಅವು ದೀರ್ಘಕಾಲದ ಆಸ್ತಿ ತೆರಿಗೆಯನ್ನು ಪಾವತಿ ಮಾಡದ ಪ್ರಕರಣಗಳಾಗಿವೆ.
ಇದು ಒಂದು ಆರಂಭವಾಗಿದ್ದು, ಪ್ರತಿ ವಾರ ಹೆಚ್ಚು ಹೆಚ್ಚು ಆಸ್ತಿಗಳನ್ನು (ಹೆಚ್ಚು ಬಾಕಿ ಉಳಿದಿರುವ) - ವಾಣಿಜ್ಯ/ಕೈಗಾರಿಕಾ ಮತ್ತು ವಸತಿ ಎರಡೂ ಸೇರಿದಂತೆ- ಆಸ್ತಿ ತೆರಿಗೆ ಬಾಕಿಗಳನ್ನು ವಸೂಲಿ ಮಾಡಲು ಹರಾಜಿಗೆ ಇಡಲಾಗುತ್ತದೆ. ಮುಂದಿನ ವಾರ ಹೆಚ್ಚಿನ ಆಸ್ತಿಗಳನ್ನು ಹರಾಜು ಮಾರಾಟಕ್ಕೆ ಯೋಜಿಸಲಾಗಿದೆ.
ತೆರಿಗೆ ಬಾಕಿಗಳನ್ನು ಪಾವತಿಸದ ಸುಮಾರು 2 ಲಕ್ಷ ಆಸ್ತಿಗಳಿವೆ ಮತ್ತು ಬಿಬಿಎಂಪಿಯಿಂದ ಇದೇ ರೀತಿಯ ಬಲವಂತದ ವಸೂಲಾತಿ ಕ್ರಮವನ್ನು ತಪ್ಪಿಸಲು ತಕ್ಷಣವೇ ತಮ್ಮ ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸಲು ವಿನಂತಿಸಲಾಗಿದೆ.
15,000 ಕೋಟಿ ಯೋಜನೆ! ಬಿಬಿಎಂಪಿ ದೊಡ್ಡ ನಿರ್ಧಾರ
ಬೆಂಗಳೂರಿಗೆ ದೊಡ್ಡ ತಲೆನೋವಾಗಿರುವ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಬಿಬಿಎಂಪಿ ದೊಡ್ಡ ನಿರ್ಧಾರವನ್ನು ತಗೆದುಕೊಳ್ಳಲು ಮುಂದಾಗಿದೆ.ಟ್ರಾಫಿಕ್ ಕಿರಿಕಿರಿಯಿಂದ ಬೆಂಗಳೂರಿನ ಜನರರು ಬೇಸತ್ತು ಹೋಗಿದ್ದಾರೆ ಇದಕೆಲ್ಲಾ ಮುಕ್ತಿ ನೀಡಲು ಸುಮಾರು 15,000 ಕೋಟಿ ವೆಚ್ಚದ ಯೋಜನೆಯನ್ನು ಸಿದ್ದಪಡಿಸಲು ಬಿಬಿಎಂಪಿ ಪ್ರಸ್ತಾಪ ಮಾಡಿದೆ. ಬೆಂಗಳೂರಿನ ಜನರಿಗೆ ಅನುಕೂಲವಾಗಲಿ ಎಂದು ಸುಮಾರು 46 ಕಿ. ಮೀ ಉದ್ದದ ಸುರಂಗ ಮಾರ್ಗ ಯೋಜನೆಯನ್ನು ತಜ್ಞರು ರೂಪಿಸುವಂತೆಯೇ ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್, ಅಂಡರ್ ಪಾಸ್ ಒಳಗೊಂಡಂತೆ ಸುಮಾರು 15,000 ಕೋಟಿ ವೆಚ್ಚದ ಒಂದು ಡಜನ್ ಯೋಜನೆಗಳನ್ನು ಬಿಬಿಎಂಪಿ ಪ್ರಸ್ತಾಪ ಮಾಡಿದೆ.
ಬಿಬಿಎಂಪಿ ಈ ಪ್ರಸ್ತಾವಿತ ಯೋಜನೆಗಳು 124.7 ಕಿಮೀ ವ್ಯಾಪ್ತಿಯನ್ನು ಒಳಗೊಂಡಿದೆ. ಅದರ ಸಮಗ್ರ ಸಂಚಾರ ನಿರ್ವಹಣಾ ಯೋಜನೆಯಲ್ಲಿ ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ ಸಮಸ್ಯೆಗೆ ಮುಕ್ತಿ ನೀಡುತ್ತದೆ ಎಂದು ಹೇಳಿದ್ದಾರೆ.
ನಿರ್ಮಾಣಕ್ಕೆ ಎಷ್ಟು ಕೋಟಿ ವೆಚ್ಚ?
ನವದೆಹಲಿ ಮೂಲದ ಅಲ್ಟಿನೋಕ್ ಕನ್ಸಲ್ಟಿಂಗ್ ಇಂಜಿನಿಯರಿಂಗ್ ಇಂಕ್ ಸಿದ್ಧಪಡಿಸಿರುವ ಕಾರ್ಯಸಾಧ್ಯತಾ ವರದಿಯ ಪ್ರಕಾರ 11 ಎಲಿವೇಟೆಡ್ ಕಾರಿಡಾರ್ ಯೋಜನೆಗಳಿವೆ. ಅವುಗಳಲ್ಲಿ ಐದಕ್ಕೆ ಸುಮಾರು 10,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಮಾಹಿತಿ ತಿಳಿಸಿದ್ದಾರೆ.
ಇತರ ಯೋಜನೆಗಳು:
* ಯಲಹಂಕ ನ್ಯೂ ಟೌನ್‌ನಿಂದ KIA ಗೆ 4-ಕಿಮೀ ದೂರದ ಎಲಿವೇಟೆಡ್ ಕಾರಿಡಾರ್
* ಮಾಧವ ಮುದಲಿಯಾರ್ ರಸ್ತೆ (ಟ್ಯಾನರಿ ರಸ್ತೆ)ಯಿಂದ ನಾಗವಾರ ಜಂಕ್ಷನ್ ವರೆಗೂ 5.5 ಕಿಮೀ ದೂರದ 660 ಕೋಟಿ ರೂ. ವೆಚ್ಚದ ಯೋಜನೆ
* ಆನಂದ ರಾವ್ ಸರ್ಕಲ್ ಮೇಲ್ಸೇತುವೆ ಕೆ.ಆರ್.ವೃತ್ತದವರೆಗೆ ಮುಂದುವರಿಕೆ
* ಕನಕಪುರದಿಂದ ಬನಶಂಕರಿವರೆಗಿನ ಕೋಣನಕುಂಟೆ ಕ್ರಾಸ್‌ನಲ್ಲಿ 0.9ಕಿಮೀ ಕೆಳಸೇತುವೆ, ಕನಕಪುರ ರಸ್ತೆಯ ಆಡ್ಯಾರ್ ರಘುವನಹಳ್ಳಿಯಲ್ಲಿ 0.8 ಕಿ.ಮೀ ಫ್ಲೈ ಓವರ್


Click it and Unblock the Notifications