August Bank Holidays 2025: ಜುಲೈ ತಿಂಗಳು ಮುಗಿಯಲು ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಇದ್ದು,ಎಲ್ಲರೂ ಕಣ್ಣು ಮುಂದಿನ ತಿಂಗಳ ರಜೆಯ ಪಟ್ಟಿಯ ಮೇಲೆ ಇದೆ. ಅದರಲ್ಲೂಅಗಸ್ಟ್ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಇವೆ. ಬ್ಯಾಂಕ್ ರಜೆ ಈ ತಿಂಗಳಲ್ಲಿ ಎಷ್ಟು ದಿನ ಇರುತ್ತೆ ಎಂದು ಬ್ಯಾಂಕ್ ನೌಕರರು ಪ್ರತಿ ತಿಂಗಳು ಕಾಯುತ್ತಲೇ ಇರುತ್ತಾರೆ.
ಹೌದು, ತಿಂಗಳು ಆರಂಭವಾಗುವ ಮೊದಲು ಬ್ಯಾಂಕ್ ನೌಕರರು, ಸಾರ್ವಜನಿಕರು ಎಲ್ಲರೂ ತಿಂಗಳ ಕೊನೆಯಲ್ಲಿ ಎಲ್ಲರೂ ಬ್ಯಾಂಕ್ ರಜೆ ಪಟ್ಟಿಯನ್ನು ಹುಡುಕುತ್ತಾರೆ. ಯಾಕೆಂದರೆ ಬ್ಯಾಂಕ್ ನೌಕರರು ಕೆಲಸಕ್ಕೆ ರಜೆ ಸಿಗುತ್ತದೆ ಎಂದು ಹುಡುಕಿದ್ದರೇ ಮತ್ತೆ ಕೆಲವೊಂದು ಮಂದಿ ಮುಂದಿನ ತಿಂಗಳು ಯಾವ ದಿನ ನಾವು ಹಣಕಾಸಿನ ವ್ಯವಹಾರ ಮಾಡಬೇಕು ಎಂದು ನೋಡಲು ಕ್ಯಾಲೆಂಡರ್ ನೋಡುತ್ತಾರೆ. ಹಾಗಿದ್ರೆ ಆಗಸ್ಟ್ (August 2025) ತಿಂಗಳಿನಲ್ಲಿ ಬ್ಯಾಂಕ್ ರಜಾದಿನಗಳು (Bank Holidays) ಯಾವ ದಿನ ಬಂದಿದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ನಿಮ್ಮಗೆ ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ ಕೆಲಸ ಮುಗಿಸೋ ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಿದ್ರೆ, ರಜಾ ದಿನಗಳ ಲಿಸ್ಟ್ ಒಮ್ಮೆ ನೋಡ್ಕೊಳ್ಳಿ. ಯಾಕಂದ್ರೆ ಈ ತಿಂಗಳಲ್ಲಿ ಹಬ್ಬಗಳು ಜಾಸ್ತಿ ಇರೋದ್ರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಾಸ ಇರುತ್ತದೆ.
ಆಗಸ್ಟ್ ತಿಂಗಳು ಹನ್ನಗಳ ತಿಂಗಳೇ ಎಂದು ಹೇಳಬಹುದು ಯಾಕೆಂದರೆ ಶ್ರಾವಣ ಮಾಸದಲ್ಲಿ ಅತಿ ಹೆಚ್ಚಾಗಿ ಹಬ್ಬಗಳು ಬರುತ್ತೇವೆ.ವರಲಕ್ಷ್ಮಿ ಹಬ್ಬ, ಸ್ವಾತಂತ್ರ್ಯ ದಿನಾಚರಣೆ, ರಕ್ಷಾ ಬಂಧನ, ಜನ್ಮಾಷ್ಟಮಿ, ಗಣೇಶ ಚತುರ್ಥಿ ಸೇರಿದಂತೆ ದೊಡ್ಡ ಹಬ್ಬಗಳು ಈ ತಿಂಗಳು ಇರುತ್ತದೆ. ಪ್ರತಿ ಭಾನುವಾರ ಮತ್ತು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕುಗಳು
ಕೂಡ ರಜೆ ಇರುತ್ತದೆ.ಹಾಗಾಗಿ, ನಿಮ್ಮ ಬ್ಯಾಂಕಿಂಗ್ ಕೆಲಸಗಳನ್ನ ಪ್ಲ್ಯಾನ್ ಮಾಡಿಕೊಳ್ಳುವಾಗ ಈ ರಜಾದಿನಗಳನ್ನ ಗಮನದಲ್ಲಿ ಇಟ್ಟುಕೊಳ್ಳಿ.
ಆಗಸ್ಟ್ ತಿಂಗಳ ರಜಾ ದಿನಗಳ ವಿವರ
ಆಗಸ್ಟ್ 3 ಭಾನುವಾರ: ವಾರಾಂತ್ಯದ ರಜೆ,
ಆಗಸ್ಟ್ 8 ಶುಕ್ರವಾರ: ತೆಂಡೊಂಗ್ ಲೋ ರಮ್ ಫಟ್ (ಸಿಕ್ಕಿಂ, ಒಡಿಶಾ),
ಆಗಸ್ಟ್ 9: ರಕ್ಷಾ ಬಂಧನ ಯುಪಿ, ಎಂಪಿ, ಹರಿಯಾಣ, ರಾಜಸ್ಥಾನ ಇತ್ಯಾದಿ.
ಆಗಸ್ಟ್ 10: ಎರಡನೇ ಶನಿವಾರ ಎಲ್ಲಾ ರಾಜ್ಯಗಳಿಗೂ ರಜೆ ಇರುತ್ತದೆ.
ಆಗಸ್ಟ್ 13: ದೇಶಭಕ್ತಿ ದಿನ ಮಣಿಪುರ
ಆಗಸ್ಟ್ 15 : ಸ್ವಾತಂತ್ರ್ಯ ದಿನ ರಜೆ ಇರುತ್ತದೆ.
ಆಗಸ್ಟ್16: ಜನ್ಮಾಷ್ಟಮಿ/ಪಾರ್ಸಿ ಹೊಸ ವರ್ಷ ಗುಜರಾತ್, ಮಹಾರಾಷ್ಟ್ರ
ಆಗಸ್ಟ್ 23: ನಾಲ್ಕನೇ ಶನಿವಾರ ಎಲ್ಲಾ ರಾಜ್ಯಗಳು
ಆಗಸ್ಟ್ 26-28: ಆಗಸ್ಟ್ ಗಣೇಶ ಚತುರ್ಥಿ ಮತ್ತು ನುವಾಖಾಯ್ ಮಹಾರಾಷ್ಟ್ರ, ಕರ್ನಾಟಕ, ಒಡಿಶಾ, ಪಂಜಾಬ್ ಇತ್ಯಾದಿ
ರಜಾ ದಿನಗಳ ಕಾರಣದಿಂದಾಗಿ ಎಟಿಎಂಗಳಲ್ಲಿ ಹಣದ ಸಮಸ್ಯೆ, ಚೆಕ್ ಕ್ಲಿಯರ್ ಆಗಲು ತಡವಾಗಬಹುದು. ಬ್ಯಾಂಕ್ ಶಾಖೆಗಳಲ್ಲಿ ದೊಡ್ಡ ಕ್ಯೂ ನಿಲ್ಲಬೇಕಾಗಬಹುದು. ಆದಷ್ಟು ಬೇಗ, ಅಂದ್ರೆ ಆಗಸ್ಟ್ 1 ರಿಂದ 5 ರ ಒಳಗೆ ಹಣ ಹಾಕುವುದು, ಲೋನ್ ತಗೊಳೋದು, ಖಾತೆ ಅಪ್ಡೇಟ್ ಮಾಡುವಂತಹ ಕೆಲಸಗಳನ್ನ ಮುಗಿಸಿ. ಯಾಕಂದ್ರೆ ಹಬ್ಬಗಳ ಸಮಯದಲ್ಲಿ, ಅದರಲ್ಲೂ ಆಗಸ್ಟ್ 14 ರಿಂದ 17 ರ ವರೆಗೆ ಜನಸಂದಣಿ ಹೆಚ್ಚಾಗಬಹುದು.
ಈ ರಜಾದಿನಗಳ ಸಮಯದಲ್ಲಿ ಬ್ಯಾಂಕ್‌ಗಳು ಆನ್‌ಲೈನ್ ಮೂಲಕ ಜನರಿಗೆ ಸೇವೆಗಳನ್ನ ನೀಡಲಿವೆ. ಮೊಬೈಲ್ ಬ್ಯಾಂಕಿಂಗ್ ಮೂಲಕ ನೀವು ನಿಮ್ಮ ಬ್ಯಾಂಕಿಂಗ್ ಸೇವೆಗಳನ್ನ ಮಾಡಿಕೊಳ್ಳಬಹುದು. ಅಲ್ಲದೆ ರಜಾದಿನಗಳಲ್ಲಿ ಸಹಜವಾಗಿ ಎಟಿಎಂಗಳು ತೆರೆದಿರುತ್ತವೆ. ನಿಮಗೆ ತ್ವರಿತ ಸೇವೆಗಳು ಬೇಕಿದ್ದಲ್ಲಿ ನೆಟ್‌ಬ್ಯಾಂಕಿಂಗ್ ಬಳಕೆ ಮಾಡಿಕೊಂಡು ನೀವು ನಿಮ್ಮ ಹಣವನ್ನ ಪಡೆಯಬಹುದು ಅಥವಾ ಕಳುಹಿಸಬಹುದು.
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications