ಕೊರೊನಾವೈರಸ್ ಹರಡುವಿಕೆ ತಡೆಗಟ್ಟಲು 3 ಲಕ್ಷ ಕೋಟಿ ಘೋಷಿಸಿದ ಆಸ್ಟ್ರೇಲಿಯಾ ಸರ್ಕಾರ

ಕೊರೊನಾವೈರಸ್‌ ಸಾಂಕ್ರಾಮಿಕ ರೋಗದ ಹರಡುವಿಕೆಯಿಂದ ಆರ್ಥಿಕ ಹಾನಿಯನ್ನು ತಗ್ಗಿಸಲು ಮತ್ತು ವೈರಸ್ ಹರಡುವಿಕೆ ತಡೆಗಟ್ಟಲು 40 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 3 ಲಕ್ಷ ಕೋಟಿಗೂ ಅಧಿಕ) ಪ್ಯಾಕೇಜನ್ನು ಆಸ್ಟ್ರೇಲಿಯಾ ಸರ್ಕಾರ ಘೋಷಿಸಿದೆ.

ಖಜಾಂಚಿ ಜೋಶ್ ಫ್ರೈಡೆನ್‌ಬರ್ಗ್ ಅವರು ಭಾನುವಾರ ಘೋಷಿಸಿದ ಪ್ರಕಾರ ಸುಮಾರು 189 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್‌ ಅಥವಾ ಒಟ್ಟು ದೇಶೀಯ ಉತ್ಪನ್ನದ(ಜಿಡಿಪಿ) ಸುಮಾರು 10 ಪರ್ಸೆಂಟ್‌ನಷ್ಟು ಹಣವನ್ನು ಆರ್ಥಿಕ ರಿಲೀಫ್ ಪ್ಯಾಕೇಜ್‌ ಅನ್ನು ಘೋಷಿಸಿದೆ.

ಕೊರೊನಾವೈರಸ್ ತಡೆಗಟ್ಟಲು 3 ಲಕ್ಷ ಕೋಟಿ ಘೋಷಿಸಿದ ಆಸ್ಟ್ರೇಲಿಯಾ

"ಈ ಅಸಾಮಾನ್ಯ ಸಮಯದಲ್ಲಿ ಅಸಾಧಾರಣ ಕ್ರಮಗಳು ಬೇಕಾಗುತ್ತವೆ ಮತ್ತು ನಾವು ಹಿಂದೆಂದೂ ಎದುರಿಸದಂತಹ ಜಾಗತಿಕ ಸವಾಲನ್ನು ಎದುರಿಸುತ್ತೇವೆ" ಎಂದು ಅವರು ಕ್ಯಾನ್‌ಬೆರಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸಣ್ಣ ಉದ್ಯಮಗಳಿಗೆ 100,000 ಆಸ್ಟ್ರೇಲಿಯನ್ ಡಾಲರ್ ವರೆಗಿನ ನಗದು ಸಹಾಯಧನವನ್ನು ನೀಡಲಾಗುತ್ತದೆ. ನಿರುದ್ಯೋಗ ಪಾವತಿಗಳನ್ನು ತಾತ್ಕಾಲಿಕವಾಗಿ ದ್ವಿಗುಣಗೊಳಿಸಲಾಗುತ್ತದೆ ಮತ್ತು ಪಿಂಚಣಿದಾರರು 750 ಆಸ್ಟ್ರೇಲಿಯನ್ ಡಾಲರ್ ನಗದು ಪಡೆಯುತ್ತಾರೆ.

ಕೊರೊನಾವೈರಸ್‌ನಿಂದಾಗಿ ಏಕಾಏಕಿ ಕಾರ್ಮಿಕರ ಆದಾಯವು ಕನಿಷ್ಟ 20 ಪರ್ಸೆಂಟ್‌ರಷ್ಟು ಕುಸಿದಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ತಮ್ಮ ನಿವೃತ್ತಿಯ ನಿಧಿಯನ್ನು ಮೊದಲೇ ಪಡೆಯಬಲು ಸಾಧ್ಯವಾಗುವ ಅವಕಾಶವಿದೆ. ಕಷ್ಟಗಳನ್ನು ಎದುರಿಸುತ್ತಿರುವವರು ಎರಡು ವರ್ಷಗಳಲ್ಲಿ 20,000 ಆಸ್ಟ್ರೇಲಿಯನ್ ಡಾಲರ್ ಹಿಂತೆಗೆದುಕೊಳ್ಳಲು ಅವಕಾಶವಿದೆ.

ಆಸ್ಟ್ರೇಲಿಯಾದಲ್ಲಿ 1,200 ಕೊರೊನಾಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈಗಾಗಲೇ ಏಳು ಜನರು ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+