ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಆ್ಯಕ್ಸಿಸ್ ಬ್ಯಾಂಕ್ ನಿರೀಕ್ಷೆಗೂ ಮೀರಿದ ತ್ರೈಮಾಸಿಕ ಲಾಭ ದಾಖಲಿಸಿದೆ. 2020-21ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 2,677 ಕೋಟಿ ರೂಪಾಯಿ ನಿವ್ವಳ ಲಾಭ ವರದಿ ಮಾಡಿದೆ.
ವರ್ಷದ ಹಿಂದೆ ಇದೇ ಅವಧಿಯಲ್ಲಿ ಆ್ಸಕ್ಸಿಸ್ ಬ್ಯಾಂಕ್ 1,388 ಕೋಟಿ ರೂಪಾಯಿ ನಿವ್ವಳ ನಷ್ಟವನ್ನು ವರದಿ ಮಾಡಿತ್ತು.

ಬ್ಯಾಂಕ್‌ನ ನಿವ್ವಳ ಬಡ್ಡಿ ಆದಾಯ(ಸಾಲದ ಮೇಲಿನ ಬಡ್ಡಿ) ಶೇಕಡಾ 11ರಷ್ಟು ಏರಿಕೆ ಕಂಡು 7,555 ಕೋಟಿ ರೂ.ಗೆ ತಲುಪಿದೆ. ಇದು ಒಂದು ವರ್ಷದ ಹಿಂದೆ 6,808 ಕೋಟಿ ರೂ. ನಷ್ಟಿತ್ತು. ತ್ರೈಮಾಸಿಕದಲ್ಲಿ ಕೋವಿಡ್ ನಿಬಂಧನೆಗಳು ಮತ್ತು ಲಾಕ್‌ಡೌನ್‌ನಿಂದಾಗಿ ಶೇಕಡಾ 58ರಷ್ಟು ಇಳಿದು 3,295 ಕೋಟಿ ರೂ.ಗಳಿಗೆ ತಲುಪಿತ್ತು.
ಮಾರ್ಚ್ ತ್ರೈಮಾಸಿಕದ ಒಟ್ಟು ಎನ್‌ಪಿಎ ಕಳೆದ ತ್ರೈಮಾಸಿಕದಲ್ಲಿ ಶೇಕಡಾ 3.44 ರಷ್ಟಿದ್ದು, ಇದು ಶೇಕಡಾ 3.70ಕ್ಕೆ ಏರಿಕೆಗೊಂಡಿದೆ.
ಇತ್ತೀಚೆಗಷ್ಟೇ ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಹೆಚ್‌ಡಿಎಫ್‌ಸಿ ಕೂಡ ನಾಲ್ಕನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 18.2ರಷ್ಟು ಆದಾಯದ ಬೆಳವಣಿಗೆಯನ್ನು ಸಾಧಿಸಿದ್ದು, 8,186.5 ಕೋಟಿ ರೂ. ಲಾಭ ವರದಿ ಮಾಡಿದೆ.


Click it and Unblock the Notifications