ಜನವರಿ 21ರಂದು ಎಸ್‌ಬಿಐ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. ಈ ಸಂಶೋಧನಾ ವರದಿಯು ಅಯೋಧ್ಯೆಯಲ್ಲಿನ ರಾಮಮಂದಿರದಿಂದಾಗಿ ಭಾರತದ ಆರ್ಥಿಕತೆಯು ಬೆಳವಣಿಗೆಯಾಗಲಿದೆ ಎಂದು ಹೇಳಿದೆ.
ಕೇಂದ್ರದ ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಪರಂಪರೆ ವರ್ಧನೆ ಅಭಿಯಾನ (ಪಿಆರ್‌ಎಎಸ್) ಯೋಜನೆಯ ವಿವಿಧ ರಾಜ್ಯ ಸರ್ಕಾರದ ಉಪಕ್ರಮಗಳೊಂದಿಗೆ ಭಾರತದಲ್ಲಿ ಆಧ್ಯಾತ್ಮಿಕ ಪ್ರಯಾಣ ಉದ್ಯಮವನ್ನು ಅಭಿವೃದ್ಧಿಪಡಿಸುವಲ್ಲಿ ಪಾತ್ರವನ್ನು ವಹಿಸುತ್ತದೆ ಎಂದು ಎಸ್‌ಬಿಐ ಸಂಶೋಧನಾ ವರದಿ ಉಲ್ಲೇಖಿಸಿದೆ.

ಭಾರತದಲ್ಲಿ ರಾಮಮಂದಿರದಿಂದಾಗಿ ಪ್ರವಾಸೋದ್ಯಮ ಬೆಳೆದು ಅದರ ಪ್ರಭಾವ ಭಾರತದ ಆರ್ಥಿಕತೆಯ ಮೇಲೆ ಅಧಿಕವಾಗಿರಲಿದೆ. ರಾಮ ಮಂದಿರದಿಂದಾಗಿ ಉತ್ತರ ಪ್ರದೇಶ ಸರ್ಕಾರದ ತೆರಿಗೆ ಆದಾಯವನ್ನು ಹೆಚ್ಚಿಸಲಿದೆ. ಹಣಕಾಸು ವರ್ಷ 2025ರ ವೇಳೆಗೆ ಆದಾಯ ತೆರಿಗೆ ಭಾರೀ ಅಧಿಕವಾಗಲಿದೆ ಎಂದು ಸಂಶೋಧನೆ ಹೇಳಿದೆ.
ಭಾರತದ ಆರ್ಥಿಕತೆ ಬೂಸ್ಟ್ ಮಾಡುವ ಆಧ್ಯಾತ್ಮಿಕ ಪ್ರವಾಸೋದ್ಯಮ
ಆಧ್ಯಾತ್ಮಿಕ ಪ್ರವಾಸೋದ್ಯಮದ ಬೆಳವಣಿಗೆಯು ಉತ್ತರ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಗಣನೀಯವಾಗಿ ಪರಿವರ್ತನೆ ಮಾಡಲಿದೆ ಎಂದು ವರದಿಯಲ್ಲಿ ಸೇರಿಸಲಾಗಿದೆ. ಆಧ್ಯಾತ್ಮಿಕ ಪ್ರವಾಸೋದ್ಯಮದ ಬೆಳವಣಿಗೆ ಆದಂತೆ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯ ಹೆಚ್ಚಾಗಲಿದೆ. ಇದರಿಂದಾಗಿ ಪ್ರಯಾಣಿಕರ ಪ್ರಮಾಣವು ಕೂಡಾ ಹೆಚ್ಚಳವಾಗಲಿದೆ.
ಉತ್ತರಪ್ರದೇಶದಲ್ಲಿ ಹಲವಾರು ಗಂಗಾ ನದಿ, ತಾಜ್ ಮಹಲ್ ಮತ್ತು ಈಗ ಅಯೋಧ್ಯೆಯಲ್ಲಿನ ರಾಮ ಮಂದಿರದಂತಹ ಪವಿತ್ರ ತಾಣಗಳಿದೆ. ಹಾಗಾಗಿ ರಾಜ್ಯದಲ್ಲಿ ಪ್ರವಾಸೋದ್ಯಮ ಇನಷ್ಟು ಬೆಳೆಯಲಿದೆ, ಅದರೊಂದಿಗೆ ದೇಶೀಯ ಪ್ರವಾಸೋದ್ಯಮವೂ ಕೂಡಾ ಗಮನಾರ್ಹ ಏರಿಕೆಯನ್ನು ಕಾಣುತ್ತಿದೆ ಎಂದು ಸಂಶೋಧನ ವರದಿ ಹೇಳಿದೆ.
ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ ಸುಮಾರು 2022 ರಲ್ಲಿ ಸುಮಾರು 32 ಕೋಟಿ ಪ್ರವಾಸಿಗರು ರಾಜ್ಯಕ್ಕೆ ಭೇಟಿ ನೀಡಿದ್ದು, ಅಯೋಧ್ಯೆಯಲ್ಲಿಯೇ 2.21 ಕೋಟಿ ಜನರು ಭೇಟಿ ನೀಡಿದ್ದಾರೆ. ಈ ಪ್ರವಾಸಿಗರ ಒಟ್ಟು ಖರ್ಚು 2 ಲಕ್ಷ ಕೋಟಿ ರೂಪಾಯಿಯನ್ನು ಮೀರಿದೆ. ಇನ್ನು ನಾವು ವಿದೇಶಿ ಪ್ರವಾಸಿಗರ ಲೆಕ್ಕಾಚಾರಕ್ಕೆ ಹೋದಾಗ ಭಾರತದಲ್ಲಿ ಹೆಚ್ಚು ಭೇಟಿ ನೀಡುವ ಐದನೇ ರಾಜ್ಯ ಉತ್ತರ ಪ್ರದೇಶ ಎಂದು ಹೇಳಬಹುದು.
ರಾಜ್ಯದ ಆರ್ಥಿಕತೆಗೆ ಹೆಚ್ಚುವರಿ 10,500 ಕೋಟಿ ರೂಪಾಯಿಯಷ್ಟು ಕೊಡುಗೆಯನ್ನು ವಿದೇಶಿ ಪ್ರವಾಸಿಗರು ನೀಡಿದ್ದಾರೆ. ಪ್ರವಾಸೋದ್ಯಮ ಬೆಳವಣಿಗೆಯು ಗಣನೀಯ ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಉತ್ತರ ಪ್ರದೇಶಕ್ಕೆ ಅವಕಾಶ ನೀಡಿದೆ, ಸ್ಥಾನವನ್ನು ನೀಡಿದೆ ಎಂದು ವರದಿ ಉಲ್ಲೇಖಿಸಿದೆ.


Click it and Unblock the Notifications