ನೀವು 70 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರೇ.. ಹಾಗಿದ್ದರೆ ನಿಮ್ಮಗೆ ಇದು ಒಳ್ಳೆಯ ಸುದ್ದಿ... ಹೌದು, ಕೇಂದ್ರ ಸರ್ಕಾರ ಅತಿ ದೊಡ್ಡ ಯೋಜನೆಯಾದ ಆಯುಷ್ಮಾನ್ ವಯ ವಂದನಾ ಕಾರ್ಡ್ ಜಾರಿಗೆ ತಂದಿದೆ. ಇದು 70 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನಗದು ರಹಿತ ಆಸ್ಪತ್ರೆ ಸೌಲಭ್ಯ ಕಲ್ಪಿಸುವ ಉದ್ದೇಶವನ್ನು ಹೊಂದಿದೆ.
ಈ ಯೋಜನೆಯನ್ನು ಕೇಂದ್ರ ಸರ್ಕಾರ ಅಕ್ಟೋಬರ್ 29, 2024 ರಂದು ಜಾರಿಗೆ ತರಲಾಗಿತ್ತು.ಈ ಯೋಜನೆಯಡಿಯಲ್ಲಿ, ಪ್ರತಿಯೊಬ್ಬ ಹಿರಿಯ ನಾಗರಿಕರು 5 ಲಕ್ಷ ರೂ.ಗಳವರೆಗೆ ಉಚಿತ ನಗದು ರಹಿತ ಚಿಕಿತ್ಸೆಯನ್ನು ಪಡೆಯುತ್ತಾರೆ. ಇದು ಯಾವುದೇ ಪ್ರೀಮಿಯಂ ಪಾವತಿಸದೆ ಸಂಪೂರ್ಣವಾಗಿ ಉಚಿತವಾಗಿ ಆರೋಗ್ಯದ ವೆಚ್ಚವನ್ನು ಭರಿಸುತ್ತದೆ.

ಯಾವುದೇ ಹಣಕಾಸಿ ತೊಂದರೆ ಇಲ್ಲದಂತೆ ಹಿರಿಯ ನಾಗರೀಕರು ವೈದ್ಯಕೀಯ ಚಿಕಿತ್ಸೆಯನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳಬಹುದು. ನೀವು ಇನ್ನೂ ಆಯುಷ್ಮಾನ್ ವಯ ವಂದನ ಕಾರ್ಡ್ ಮಾಡಿಲ್ಲದಿದ್ದರೆ, ನೀವು ಚಿಂತಿಸಬೇಕಾಗಿಲ್ಲ, ಯಾಕೆಂದರೆ ಸುಲಔವಾಗಿ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಈ ಕಾರ್ಡ್ ಮಾಡಿಸಿಕೊಳ್ಳುವುದರಿಂದ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು.
ಆಯುಷ್ಮಾನ್ ಭಾರತ್ ಅಡಿಯಲ್ಲಿ, ಕುಟುಂಬದ ಹಿರಿಯ ನಾಗರಿಕರಿಗೆ ಕುಟುಂಬದ ಉಳಿದವರಿಗೆ 5 ಲಕ್ಷ ರೂ.ಗಳ ವಿಮಾ ರಕ್ಷಣೆ ಸಿಗುತ್ತದೆ. ಆದರೆ ಆಯುಷ್ಮಾನ್ ವಯ ವಂದನ ಯೋಜನೆಯಡಿಯಲ್ಲಿ, ಹಿರಿಯ ನಾಗರಿಕರಿಗೆ ಮಾತ್ರ 5 ಲಕ್ಷ ರೂ.ಗಳ ವಿಮಾ ರಕ್ಷಣೆ ಸಿಗುತ್ತದೆ. ಈ ಮೂಲಕ ಭಾರತದಲ್ಲಿ ವೃದ್ಧರಿಗೆ ಹೆಚ್ಚು ಚಿಕಿತ್ಸೆಯನ್ನು ಒದಗಿಸಲು ಸರ್ಕಾರ ಆರ್ಥಿಕ ನೆರವುನ್ನು ಈ ಮೂಲಕ ನೀಡುತ್ತಿದೆ.
ಆಯುಷ್ಮಾನ್ ವಯ ವಂದನಾ ಕಾರ್ಡ್ ಎಂದರೇನು?
ಈ ಯೋಜನೆಯು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (PM-JAY) ಒಂದು ಭಾಗವಾಗಿದೆ . ಈ ಯೋಜನೆಯನ್ನು 70 ವರ್ಷಕ್ಕಿಂತ ಮೇಲ್ಪಟ್ಟವರಿಗಾಗಿ ಪ್ರಾರಂಭಿಸಲಾಗಿದೆ. ಈ ಕಾರ್ಡ್ ಮೂಲಕ, ಸರ್ಕಾರಿ ಮತ್ತು ಕೆಲವು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದೆ. ಪ್ರತಿ ಕುಟುಂಬವು ಪ್ರತಿ ವರ್ಷ 5 ಲಕ್ಷ ರೂ.ಗಳವರೆಗೆ ಆರೋಗ್ಯ ವಿಮೆಯನ್ನು ಪಡೆಯುತ್ತದೆ.
ಈ ಯೋಜನೆಯಿಂದ ಏನೆಲ್ಲಾ ಅನುಕೂಲಗಳು ಇವೆ..?
- ಆಯುಷ್ಮಾನ್ ವಯ ವಂದನ ಯೋಜನೆಯಡಿ ವರ್ಷಕ್ಕೆ 5 ಲಕ್ಷ ರೂ.ಗಳವರೆಗೆ ನಗದು ರಹಿತ ಚಿಕಿತ್ಸೆಯ ಉಪಯೋಗವನ್ನು ಪಡೆದುಕೊಳ್ಳಬಹುದು.
- 2,000 ಕ್ಕೂ ಹೆಚ್ಚು ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸೆಗಳನ್ನು ಈ ಯೋಜನೆ ಒಳಗೊಂಡಿದೆ. ಇದರಲ್ಲಿ ಡಯಾಲಿಸಿಸ್, ಕ್ಯಾನ್ಸರ್, ಹೃದ್ರೋಗ, ಐಸಿಯು ಸೇವೆಗಳು, ಮೂಳೆಚಿಕಿತ್ಸೆ ಇತ್ಯಾದಿ ಸೇವೆಗಳು ಲಭ್ಯವಿದೆ ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
- ನಿಮ್ಮ ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಲಭ್ಯಗಳು ಮೊದಲ ದಿನದಿಂದಲೇ ಪ್ರಾರಂಭವಾಗುತ್ತದೆ. ನೀವು ಹೆಚ್ಚು ಸಮಯ ಕಾಯಬೇಕಾಗಿಲ್ಲ.
- ನಿಮ್ಮ ಬಳಿ ಆಯುಷ್ಮಾನ್ ವಯ ವಂದನ ಕಾರ್ಡ್ ಇದ್ದರೆ ನೀವು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು.
- ದೇಶಾದ್ಯಂತ 30,000 ಕ್ಕೂ ಹೆಚ್ಚು ಆಸ್ಪತ್ರೆಗಳು ಈ ವಿಮಾ ಸೇವೆಯನ್ನು ಹೊಂದಿವೆ.
- ಆಯುಷ್ಮಾನ್ ವಯ ವಂದನ ಕಾರ್ಡ್ ಸೇವೆಯನ್ನು ಪಡೆಯಲು ಯಾವುದೇ ಜಾತಿ, ಧರ್ಮ ಅಥವಾ ಆದಾಯ ಮಿತಿಯನ್ನು ಆಧರಿಸಿಲ್ಲ. ವಯಸ್ಸು 70 ವರ್ಷ ಮೇಲ್ಪಟ ಎಲ್ಲರಿಗೂ ಈ ಸೇವೆ ಸೌಲ್ಯಭ್ಯ ಸಿಗುತ್ತದೆ.
ಆಯುಷ್ಮಾನ್ ವಯ ವಂದನಾ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
- ನೀವು ಅಧಿಕೃತ ವೆಬ್‌ಸೈಟ್ beneficiary.nha.gov.in ಅಥವಾ ಆಯುಷ್ಮಾನ್ ಭಾರತ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
- ವೆಬ್‌ಸೈಟ್ ಗೆ ಭೇಟಿ ನೀಡಿದ ನಂತರ ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ಬಳಸಿ ಲಾಗಿನ್ ಮಾಡಿ.
- "70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ನೋಂದಣಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಆಧಾರ್ ಸಂಖ್ಯೆ, OTP ಅಥವಾ ಬಯೋಮೆಟ್ರಿಕ್ ಬಳಸಿ ಇ-ಕೆವೈಸಿ ಪೂರ್ಣಗೊಳಿಸಿ.
- ನಿಮ್ಮ ಛಾಯಾಚಿತ್ರ ಮತ್ತು ರಾಜ್ಯ, ಜಿಲ್ಲೆ, ಜಾತಿ ಇತ್ಯಾದಿ ಅಗತ್ಯವಿರುವ ಇತರ ಮಾಹಿತಿಯನ್ನು ಭರ್ತಿ ಮಾಡಿ. ಫಾರ್ಮ್ ಅನ್ನು ಸಲ್ಲಿಸಿ ಮತ್ತು 15-20 ನಿಮಿಷಗಳಲ್ಲಿ ಡಿಜಿಟಲ್ ಕಾರ್ಡ್ ಅನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಿ.
ಆಫ್‌ಲೈನ್ ಅಪ್ಲಿಕೇಶನ್ ಅರ್ಜಿ ಸಲ್ಲಿಕೆ ಮಾಡಲು ಸೇವಾ ಕೇಂದ್ರ ಅಥವಾ ಯಾವುದೇ ಆಯುಷ್ಮಾನ್ ಪ್ಯಾನಲ್ ಆಸ್ಪತ್ರೆಗೆ ಹೋಗಿ. ನಿಮ್ಮ ಆಧಾರ್ ಕಾರ್ಡ್ ಅನ್ನು ನೀಡಿ ಅಲ್ಲಿ ಅವರು ಕೇಳುವ ನಿಮ್ಮ ಫೋಟೋ ಮತ್ತು ಮಾಹಿತಿಯನ್ನು ನೀಡಿ , ಮತ್ತು ಸಿಬ್ಬಂದಿ ಫಾರ್ಮ್ ಅನ್ನು ಭರ್ತಿ ಮಾಡಿ ಕಾರ್ಡ್ ಅನ್ನು ಸಿದ್ಧಪಡಿಸುತ್ತಾರೆ.
ಸಹಾಯವಾಣಿಗೆ ಕರೆ
ನಿಮ್ಮಗೆ ಅರ್ಜಿ ಸಲ್ಲಿಸುವಲ್ಲಿ ಯಾವುದೇ ಸಮಸ್ಯೆ ಆದರೆ ನೀವು ಸರ್ಕಾರಿ ಸಹಾಯವಾಣಿಗೆ ಕರೆ ಮಾಡಬಹುದು. ಸಹಾಯವಾಣಿ ಸಂಖ್ಯೆ ಹೀಗಿದೆ 14555 ಅಥವಾ 1800-11-0770 (ಈ ಸಂಖ್ಯೆಗಳು 24x7 ಕೆಲಸ ಮಾಡುತ್ತವೆ)
ಇದುವರೆಗೂ ಎಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ?
ಸರ್ಕಾರಿ ಮಾಹಿತಿಯ ಪ್ರಕಾರ, ಈ ಯೋಜನೆಯಡಿಯಲ್ಲಿ 25 ಮೇ 2025 ರೊಳಗೆ ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಸ್ವೀಕರಿಸಲಾದ ಒಟ್ಟು ಅರ್ಜಿಗಳ ಸಂಖ್ಯೆ ಸುಮಾರು 66 ಲಕ್ಷ. ಅನುಮೋದನೆ ಅರ್ಜಿಗಳು 65 ಲಕ್ಷ ಮತ್ತು ಬಾಕಿ ಇರುವ ಅರ್ಜಿಗಳು 96 ಸಾವಿರಕ್ಕೂ ಹೆಚ್ಚು.
ಇಲ್ಲಿಯವರೆಗೆ ಕೆಲವೇ ಜನರು ಈ ಯೋಜನೆಯ ಕಾರ್ಡ್‌ಗಳನ್ನು ಪಡೆದಿದ್ದಾರೆ. ರಾಜ್ಯಗಳ ಪೈಕಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಗುಜರಾತ್ ಮತ್ತು ಕೇರಳದಿಂದ ಅತಿ ಹೆಚ್ಚು ಅರ್ಜಿಗಳು ಬಂದಿವೆ.
ಆಸ್ಪತ್ರೆಗಳ ಪಟ್ಟಿ ಮಾಹಿತಿಯನ್ನು ತಿಳಿಯುವುದು ಹೇಗೆ..?
ಆಯುಷ್ಮಾನ್ ವಯ ವಂದನಾ ಯೋಜನೆಯನ್ನು ಯಾವ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿದೆ ಎಂದು ತಿಳಿಯುವುದು ಹೇಗೆ ಎಂಬ ವಿವರ ಈ ಕೆಳಕಂತೆ ವಿವರರಿಸಲಾಗಿದೆ.
ನೀವು ಯಾವ ಆಸ್ಪತ್ರೆಯಲ್ಲಿ ಆಯುಷ್ಮಾನ್ ವಯ ವಂದನಾ ಯೋಜನೆ ಸೌಲಭ್ಯವಿದೆ ಎಂದು ತಿಳಿಯಲು ಅಧಿಕೃತ ವೆಬ್‌ಸೈಟ್ ಆದ https://hospitals.pmjay.gov.in ಭೇಟಿ ನೀಡಿ. ಈ ಮೂಲಕ ನಿಮ್ಮ ಹತ್ತಿರದ ಪ್ಯಾನಲ್ ಆಸ್ಪತ್ರೆಯ ಬಗ್ಗೆ ಮಾಹಿತಿಯನ್ನು ನೀವು ಪಡೆಯಬಹುದು. ಅಲ್ಲಿ, ನೀವು ರಾಜ್ಯ, ಜಿಲ್ಲೆ ಅಥವಾ ಪಿನ್ ಕೋಡ್‌ಗಾಗಿ ಹುಡುಕಿದರೆ, ಯಾವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಯೋಜನೆಯಲ್ಲಿ ಸೇರಿಸಲಾಗಿದೆ ಎಂಬ ಮಾಹಿತಿ ಸಿಗುತ್ತದೆ.


Click it and Unblock the Notifications