For Quick Alerts
ALLOW NOTIFICATIONS  
For Daily Alerts

ಲಾಭದಲ್ಲಿರುವ ಎಕ್ಸಿಸ್ ಬ್ಯಾಂಕ್‌ನ 3 ಕೋಟಿಗೂ ಹೆಚ್ಚು ಷೇರುಗಳ ಮಾರಾಟ ಇಂದು

|

ಮುಂಬೈ, ನ. 1: ಎಕ್ಸಿಸ್ ಬ್ಯಾಂಕ್‌ನ ಪ್ರಮುಖ ಹೂಡಿಕೆದಾರರಲ್ಲಿ ಒಂದೆನಿಸಿರುವ ಬೇನ್ ಕ್ಯಾಪಿಟಲ್ ಸಂಸ್ಥೆ ತನ್ನ ಪಾಲಿನ ಕೆಲ ಷೇರುಗಳನ್ನು ಮಾರುತ್ತಿದೆ. ಅಮೆರಿಕದ ಬೇನ್ ಕ್ಯಾಪಿಟಲ್ ಶೇ. 1.24 ಷೇರುಗಳನ್ನು ಮಾರುತ್ತಿದ್ದು ಒಟ್ಟು ಮೌಲ್ಯ 3,350 ಕೋಟಿ ರೂಪಾಯಿ ಎನ್ನಲಾಗಿದೆ.

ನವೆಂಬರ್ 1, ಮಂಗಳವಾರದಂದು ಬ್ಲಾಕ್ ಡೀಲ್ ಮುಖಾಂತರ ಎಕ್ಸಿಸ್ ಬ್ಯಾಂಕ್‌ನಲ್ಲಿರುವ ತನ್ನ ಷೇರುಗಳನ್ನು ಮಾರಲು ಬೇನ ಕ್ಯಾಪಿಟಲ್ ನಿರ್ಧರಿಸಿರುವುದು ತಿಳಿದುಬಂದಿದೆ. ಬ್ಲಾಕ್ ಡೀಲ್‌ನಲ್ಲಿ ಸಾಮಾನ್ಯವಾಗಿ ಸಾಂಸ್ಥಿಕ ಹೂಡಿಕೆದಾರರ ಮಧ್ಯೆ ಲಾಟ್ ಲೆಕ್ಕದಲ್ಲಿ ವಹಿವಾಟು ನಡೆಯುತ್ತದೆ. ಒಂದು ವಹಿವಾಟಿನಲ್ಲಿ ಕನಿಷ್ಠ 5 ಲಕ್ಷ ಷೇರುಗಳು ಅಥವಾ 5 ಕೋಟಿ ರೂ ಮೌಲ್ಯದ ಷೇರುಗಳನ್ನು ಖರೀದಿಸಬೇಕಾಗುತ್ತದೆ.

ಬೇನ್ ಕ್ಯಾಪಿಟಲ್ ಸಂಸ್ಥೆ ಶೇ. 2ರಷ್ಟು ಕಡಿಮೆ ಬೆಲೆಗೆ ತನ್ನ ಪಾಲಿನ ಷೇರುಗಳನ್ನು ಮಾರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಎಕ್ಸಿಸ್ ಬ್ಯಾಂಕ್‌ನ ಷೇರು ನಿನ್ನೆ ಅಕ್ಟೋಬರ್ 31ರ ಅಂತ್ಯದಲ್ಲಿ 906 ರೂಪಾಯಿ ಬೆಲೆ ಪಡೆದಿತ್ತು. ಇಂದು ಬೇನ್ ಕ್ಯಾಪಿಟಲ್ ಸಂಸ್ಥೆ ತನ್ನ ಎಕ್ಸಿಸ್ ಬ್ಯಾಂಕ್ ಷೇರನ್ನು 888 ರೂ ಬೆಲೆಗೆ ಮಾರಾಟಕ್ಕಿಡುವ ನಿರೀಕ್ಷೆ ಇದೆ. 3.77 ಕೋಟಿಗೂ ಹೆಚ್ಚು ಷೇರುಗಳು ಇಂದು ಮಾರಾಟವಾಗುವ ನಿರೀಕ್ಷೆ ಇದೆ.

ಎಕ್ಸಿಸ್ ಬ್ಯಾಂಕ್‌ನ 3 ಕೋಟಿಗೂ ಹೆಚ್ಚು ಷೇರುಗಳ ಮಾರಾಟ ಇಂದು

2017ರಿಂದ ಎಕ್ಸಿಸ್ ಬ್ಯಾಂಕ್‌ನಲ್ಲಿ ಬೇನ್ ಹೂಡಿಕೆ
ಎಕ್ಸಿಸ್ ಬ್ಯಾಂಕ್ 2017ರಲ್ಲಿ ತನ್ನ ಶೇ. 9ರಷ್ಟು ಷೇರುಗಳನ್ನು ಮಾರಾಟಕ್ಕಿಟ್ಟು 11,626 ಕೋಟಿ ರೂ ಬಂಡವಾಳ ಸಂಗ್ರಹಿಸಿತ್ತು. ಆ ಸಂದರ್ಭದಲ್ಲಿ ಅಮೆರಿಕದ ಹೂಡಿಕೆ ಸಂಸ್ಥೆ ಬೇನ್ ಕ್ಯಾಪಿಟಲ್ ಪ್ರತೀ ಷೇರಿಗೆ 525 ರೂನಂತೆ ಒಟ್ಟು 6,854 ರೂ ಮೊತ್ತದ ಷೇರುಗಳನ್ನು ಖರೀದಿ ಮಾಡಿತ್ತು. ಸದ್ಯಕ್ಕೆ ಬೇನ್ ಕ್ಯಾಪಿಟಲ್‌ನ ಮೂರು ಅಂಗ-ಸಂಸ್ಥೆಗಳು ವಿದೇಶೀ ನೇರ ಹೂಡಿಕೆ (ಎಫ್‌ಡಿಐ) ಕೆಟಗರಿ ಅಡಿಯಲ್ಲಿ ಎಕ್ಸಿಸ್ ಬ್ಯಾಂಕ್‌ನಲ್ಲಿ ಶೇ. 4.24ರಷ್ಟು ಪಾಲನ್ನು ಹೊಂದಿವೆ.

ಇವತ್ತು ಬ್ಲಾಕ್ ಡೀಲ್‌ನಲ್ಲಿ ಬೇಲ್ ಕ್ಯಾಪಿಟಲ್‌ನ ಶೇ. 1.24 ಎಕ್ಸಿಸ್ ಷೇರುಗಳು ಮಾರಾಟವಾಗಬಹುದು. ಅದು ಸಾಧ್ಯವಾದಲ್ಲಿ ಎಕ್ಸಿಸ್ ಬ್ಯಾಂಕ್‌ನಲ್ಲಿ ಬೇಲ್ ಕ್ಯಾಪಿಟಲ್‌ನ ಪಾಲು ಶೇ. 2ಕ್ಕೆ ಇಳಿಯಬಹುದು.

ಎಕ್ಸಿಸ್ ಬ್ಯಾಂಕ್‌ನ 3 ಕೋಟಿಗೂ ಹೆಚ್ಚು ಷೇರುಗಳ ಮಾರಾಟ ಇಂದು

ಲಾಭದಲ್ಲಿ ಎಕ್ಸಿಸ್ ಬ್ಯಾಂಕ್
ಎಕ್ಸಿಸ್ ಬ್ಯಾಂಕ್ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ, ಅಂದರೆ ಜುಲೈನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಉತ್ತಮ ಲಾಭದ ಪ್ರಗತಿ ತೋರಿಸಿದೆ. ಹಿಂದಿನ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಈ ಬಾರಿ ಶೇ. 29ರಷ್ಟು ನಿವ್ವಳ ಲಾಭದಲ್ಲಿ ಹೆಚ್ಚಳವಾಗಿದೆ. ಇನ್ನು, ಕಳೆದ ವರ್ಷದ ಇದೇ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಈ ಬಾರಿ ಎಕ್ಸಿಸ್ ಬ್ಯಾಂಕ್‌ನ ನಿವ್ವಳ ಲಾಭ ಶೇ. 70ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ.

ಅಕ್ಟೋಬರ್ 20 ರಂದು ಎಕ್ಸಿಸ್ ಬ್ಯಾಂಕ್ ತನ್ನ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿತ್ತು. ಅದರ ಪ್ರಕಾರ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್‌ಗೆ ನಿವ್ವಳ ಬಡ್ಡಿ ಆದಾಯ (ಎನ್‌ಐಐ- ನೆಟ್ ಇಂಟರೆಸ್ಟ್ ಇನ್ಕಂ) 10,360.3 ರೂ ಬಂದಿದೆ. ಹಿಂದಿನ ತ್ರೈಮಾಸಿಕ ಅವಧಿಯಲ್ಲಿ 9,384 ಕೋಟಿ ರೂನಷ್ಟು ನಿವ್ವಳ ಬಡ್ಡಿ ಅದಾಯ ಬಂದಿತ್ತು. ಅದಕ್ಕೆ ಹೋಲಿಸಿದರೆ ಎಕ್ಸಿಸ್ ಬ್ಯಾಂಕ್‌ನ ಎನ್‌ಐಐ ಈ ಬಾರಿ ಗಣನೀಯವಾಗಿ ಹೆಚ್ಚಿದೆ. ಇನ್ನು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 7,900 ಕೋಟಿ ರೂ ಮಾತ್ರ ಬಂದಿತ್ತು. ಇದೇ ವೇಳೆ, ಎಕ್ಸಿಸ್ ಬ್ಯಾಂಕ್‌ನ ನೆಟ್ ಇಂಟರೆಸ್ಟ್ ಮಾರ್ಜಿನ್ ಶೇ. 3.96 ಇದೆ.

English summary

Bain Capital May Sell Over 3 Crore Shares of Axis Bank At Lower Price

US based invest firm Bain Capital has reportedly selling its 1.24% stake in Axis bank on November 1st 2022. The transaction is likely to be of block deal.
Story first published: Tuesday, November 1, 2022, 9:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X