ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ತನ್ನ ಉನ್ನತ ಸೇವೆಯಿಂದಾಗಿ, ವಿಶಾಲ ಜಾಗದಿಂದಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇದೀಗ ಇದೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Airport), ಶೀಘ್ರದಲ್ಲೇ ಹೊಸ ವಾಯು ಸಂಚಾರ ನಿಯಂತ್ರಣ (ATC) ಗೋಪುರವನ್ನು ನಿರ್ಮಿಸಲಿದೆ. ದೇಶದ ಮೂರನೇ ಅತಿ ದೊಡ್ಡ ಮತ್ತು ಕಾರ್ಯನಿರತ ವಿಮಾನ ನಿಲ್ದಾಣವೆಂದು (Busiest Airport) ಗುರುತಿಸಿಕೊಂಡಿರುವ KIA, ಹೆಚ್ಚುತ್ತಿರುವ ವಿಮಾನ ಸಂಚಾರವನ್ನು ಸಮರ್ಥವಾಗಿ ನಿಭಾಯಿಸುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ.

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಸಂಸ್ಥೆಯು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಗೆ ಹೊಸ ATC ಗೋಪುರ ನಿರ್ಮಿಸುವಂತೆ ಸೂಚನೆ ನೀಡಿದೆ. ವಿಮಾನ ನಿಲ್ದಾಣವು ವಾರ್ಷಿಕವಾಗಿ 114 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯಕ್ಕೆ ವಿಸ್ತರಣೆಯಾಗುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
KIA ಕಾರ್ಯಾಚರಣೆಯನ್ನು ನಿರ್ವಹಿಸುವ BIAL, ಹೊಸ ATC ಗೋಪುರದ ವಿನ್ಯಾಸ ಮತ್ತು ಅಭಿವೃದ್ಧಿ ಕಾರ್ಯಕ್ಕಾಗಿ ಈಗಾಗಲೇ ಎಕ್ಸ್‌ಪ್ರೆಶನ್ ಆಫ್ ಇಂಟರೆಸ್ಟ್ (EOI) ಆಹ್ವಾನಿಸಿದೆ.
ಟೆಂಡರ್ ದಾಖಲೆಗಳ ಪ್ರಕಾರ, "ಉನ್ನತೀಕರಿಸಿದ ಗೋಪುರವು ಕಾರ್ಯಾಚರಣೆಯ ಸುರಕ್ಷತೆಯನ್ನು ಹೆಚ್ಚಿಸುತ್ತದೆ, ತುರ್ತು ನಿರ್ವಹಣೆಯನ್ನು ಬಲಪಡಿಸುತ್ತದೆ, ಹವಾಮಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸಲಿದೆ, ವಿಮಾನದಲ್ಲಿ ಏನಾದರು ಅಡಚಣೆಗಳಿದ್ದರೆ ಅದನ್ನು ಪರಿಹರಿಸುತ್ತದೆ "
4,009 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಈ ವಿಮಾನ ನಿಲ್ದಾಣವು ಎರಡು ರನ್‌ವೇಗಳು, ಟ್ಯಾಕ್ಸಿವೇಗಳು, ಏಪ್ರನ್‌ಗಳು, ಕಮ್ಯುನಿಕೇಶನ್, ನ್ಯಾವಿಗೇಶನ್ ಮತ್ತು Surveillance (CNS) ಮೂಲಸೌಕರ್ಯ ಮತ್ತು ಪ್ರಸ್ತುತ ಒಂದು ATC ಗೋಪುರವನ್ನು ಹೊಂದಿದೆ.
ಪ್ರಸ್ತುತ ATC ಗೋಪುರವು ಪೂರ್ಣ ಸಾಮರ್ಥ್ಯದ ಸಮಾನಾಂತರ ರನ್‌ವೇ ಕಾರ್ಯಾಚರಣೆಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಿದ್ದರೂ, ಹೊಸ ವಾಯು ಸಂಚಾರ ನಿರ್ವಹಣೆ (ATM) ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಇದು ಸೀಮಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ATM ವ್ಯವಸ್ಥೆಯು, ವಿಮಾನಗಳ ಸುರಕ್ಷಿತ ಮತ್ತು ಸರಿಯಾದ ಸಂಚಾರಕ್ಕೆ ಇದು ಸಹಕಾರಿಯಾಗಲಿದೆ. ಈ ಮಿತಿಗಳನ್ನು ಪರಿಗಣಿಸಿ, AAI, BIAL ಗೆ ಹೊಸ ATC ಗೋಪುರವನ್ನು ನಿರ್ಮಿಸಲು ಸೂಚನೆ ನೀಡಿದೆ.
ಅಷ್ಟೇ ಅಲ್ಲದೇ, ಕೇವಲ ಹೊಸ ಗೋಪುರ ಮಾತ್ರವಲ್ಲದೆ, ಸಮಗ್ರ ವಾಯು ಸಂಚಾರ ಸೇವೆಗಳ (ATS) ಪರಿಹಾರಕ್ಕಾಗಿ ಇದು ತುರ್ತು ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. 17 ವರ್ಷಗಳ ಹಿಂದೆ ನಿರ್ಮಿಸಲಾದ ಪ್ರಸ್ತುತ ATC ಕಟ್ಟಡವು ಸದ್ಯ ಸ್ಥಳಾವಕಾಶದ ಕೊರತೆಯಿಂದ ಸಮಸ್ಯೆ ಎದುರಿಸುತ್ತಿ, ಆದ್ದರಿಂದ ಈ ಹೊಸ ಎಟಿಸಿ ಗೋಪುರ ಅಗತ್ಯವಾಗಿದೆ.
ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಮಾರ್ಗಸೂಚಿಗಳ ಪ್ರಕಾರ, ATS/ATC ಸೌಲಭ್ಯವು ನಿರ್ವಾಹಕರಿಗೆ ಸೂಕ್ತವಾದ ವಿಶ್ರಾಂತಿ ಸೌಲಭ್ಯಗಳನ್ನು ನೀಡಲು ಸಜ್ಜಾಗಿದೆ. ಇದರಲ್ಲಿ ಬೆಡ್-ರೆಸ್ಟ್ ರೂಮ್‌ಗಳು, ಶವರ್ ಸೌಲಭ್ಯಗಳು, ಜಿಮ್ ಅಥವಾ ಮನರಂಜನಾ ಕೊಠಡಿಗಳು ಮತ್ತು ಆಯಾಸವನ್ನು ಕಡಿಮೆ ಮಾಡಲು ವಿಶ್ರಾಂತಿ ಸ್ಥಳಗಳನ್ನು ಸೇರಿಸಲಾಗುತ್ತದೆ. ಅಲ್ಲದೇ ಲಾಕರ್, ವೃತ್ತಿಪರ ತರಬೇತಿ ಮತ್ತು ಸಿಮ್ಯುಲೇಶನ್ ಕೊಠಡಿಗಳೂ ಇರಬೇಕು ಎಂದು ಹೇಳಲಾಗಿದೆ. ಪ್ರಸ್ತುತ ಇರುವ ಗೋಪುರ ಈ ಎಲ್ಲಾ ಅವಶ್ಯಕತೆಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿಲ್ಲ ಎಂದು ಮೂಲಗಳು ಹೇಳಿವೆ.
More From GoodReturns

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ



Click it and Unblock the Notifications