ಬೆಂಗಳೂರು, ಆಗಸ್ಟ್ 13: 12 ಸದಸ್ಯರನ್ನು ಒಳಗೊಂಡ ತಂಡ ಬೆಂಗಳೂರು ಬಿಸಿನೆಸ್ ಕಾರಿಡಾರ್ ಲಿಮಿಟೆಡ್‌ನ ಭಾಗವಾಗಲಿದ್ದಾರೆ ಎಂದು ಸೋಮವಾರ ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈಗಿರುವ ಪೆರಿಫೆರಲ್ ರಿಂಗ್ ರೋಡ್ (PRR) ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಏಕೆಂದರೆ 73 ಕಿಮೀ ರಸ್ತೆಯನ್ನು ಮರುನಾಮಕರಣ ಮಾಡಲಾಗಿದೆ. ರಾಜ್ಯ ಸರ್ಕಾರವು ಯೋಜನೆಯನ್ನು ಪುನರುಜ್ಜೀವನಗೊಳಿಸಲು ಹೊಸ ಪ್ರಯತ್ನವನ್ನು ಮಾಡಿದೆ.
ಬೆಂಗಳೂರು ಅಭಿವೃದ್ಧಿ ಸಚಿವರು ಘಟಕದ ಅಧ್ಯಕ್ಷರಾಗಿರುತ್ತಾರೆ. ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ, ಹಣಕಾಸು ಇಲಾಖೆ, ಲೋಕೋಪಯೋಗಿ ಇಲಾಖೆಯ ಉನ್ನತಾಧಿಕಾರಿಗಳು ಸದಸ್ಯರಾಗಿರುತ್ತಾರೆ. ಬಿಡಿಎಯ ಇಂಜಿನಿಯರ್ ಸದಸ್ಯರು, ಹಣಕಾಸು ಸದಸ್ಯರು, ಸಹಾಯಕ ಆಯುಕ್ತರು, ನಗರ ಯೋಜನೆ ಸದಸ್ಯರು 12 ಸದಸ್ಯರ ಪಟ್ಟಿಯಲ್ಲಿ ಭಾಗವಾಗಿದ್ದಾರೆ. ಬಿಡಿಎ ಅಧ್ಯಕ್ಷರು ಹೊಸ ಘಟಕದ ಉಪಾಧ್ಯಕ್ಷರಾಗಿರುತ್ತಾರೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪಿಆರ್‌ಆರ್ ಅನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎಂದು ಮರುನಾಮಕರಣ ಮಾಡಿದ್ದರು, ಯೋಜನೆಯನ್ನು ಯಶಸ್ವಿಗೊಳಿಸಲು 73 ಕಿಮೀ ವ್ಯಾಪ್ತಿಯ ಸುತ್ತಮುತ್ತಲಿನ ಭೂಮಿಯನ್ನು ಮಾನಿಟೈಸ್ ಮಾಡಲು ಆಶಿಸಿದ್ದರು. ಯೋಜನೆ ಅನುಷ್ಠಾನಕ್ಕೆ ಬಿಡಿಎ ಇನ್ನೂ ಹೊಸದಾಗಿ ಟೆಂಡರ್ ಕರೆದಿಲ್ಲ.
ವಾಹನ ಸಂಚಾರ ಸಂಪೂರ್ಣ ನಿರ್ಬಂಧ:
ಆನಂದನಗರ ಮ್ಯಾಜಿಕ್ ಬಾಕ್ಸ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಬುಧವಾರದವರೆಗೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಬೆಂಗಳೂರು ಸಂಚಾರಿ ಪೊಲೀಸರು ಮ್ಯಾಜಿಕ್ ಬಾಕ್ಸ್ ಬಳಿ ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಿದ್ದಾರೆ.
ಸಂಜಯನಗರ ಕ್ರಾಸ್‌ನಿಂದ ಆನಂದನಗರ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಸರ್ವಿಸ್ ರಸ್ತೆಯಲ್ಲಿ ಪಶುವೈದ್ಯಕೀಯ ಕಾಲೇಜು ದಾಟಿ ಕೆ-2 ಬಸ್ ನಿಲ್ದಾಣದ ಬಳಿ ಯು-ಟರ್ನ್ ತೆಗೆದುಕೊಂಡು ಬ್ಯಾಪ್ಟಿಸ್ಟ್ ಆಸ್ಪತ್ರೆಯ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ಮುಂದುವರಿಯಬೇಕು ಮತ್ತು ಆನಂದ್ ನಗರ ಕ್ರಾಸ್ ಬಳಿ ಎಡಕ್ಕೆ ಹೋಗಬೇಕು.
ಆನಂದನಗರದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಪ್ರಯಾಣಿಸುವವರು ಸಿಬಿಐ ಜಂಕ್ಷನ್ ಬಳಿಯಿರುವ ಸಿಬಿಐ ಸರ್ವೀಸ್ ರೋಡ್ ಮ್ಯಾಜಿಕ್ ಬಾಕ್ಸ್ ಅನ್ನು ತೆಗೆದುಕೊಳ್ಳಬೇಕು. ಡಾಂಬರೀಕರಣ ಕಾಮಗಾರಿಯಿಂದ ವಾಹನ ಸಂಚಾರ ನಿಧಾನವಾಗಲಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications