ಯಾವುದೇ ಬ್ಯಾಕಪ್‌ ಇಲ್ಲದೆ 1 ಕೋಟಿ ಉದ್ಯೋಗವನ್ನು ಬಿಟ್ಟ ಬೆಂಗಳೂರು ಉದ್ಯಮಿ! ಯಾಕೆ ತಿಳಿಯಿರಿ;

ಅಮೆಜಾನ್‌ ಉದ್ಯೋಗಿ ಶಕ್ತಿ ಮಣಿ ತ್ರಿಪಾಠಿ ಅವರು ತಮ್ಮ ಯಾವುದೇ ಬ್ಯಾಕ್‌ಅಪ್‌ ಇಲ್ಲದೇನೆ ತಮ್ಮ 1 ಕೋಟಿ ಸಂಬಳದ ಉದ್ಯೋಗವನ್ನು ಬಿಟ್ಟಿದ್ದಾರೆ. ತಮ್ಮದೇ ಆದ ಒಂದು ಹೊಸ ಸ್ಟಾರ್ಟ್‌ಅಪ್‌ ಒಂದನ್ನ ಆರಂಭಿಸಲು ಅವರು ತಮ್ಮ ದೊಡ್ಡ ಸಂಬಳದ ಕೆಲಸವನ್ನ ತೊರೆದಿದ್ದಾರೆ. ಇನ್ನು ಕೆಲಸವನ್ನ ತೊರೆದ ನಂತರ ಅವರು ಎದುರಿಸಿದಂತ ಸವಾಲುಗಳ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶಕ್ತಿ ಮಣಿ ತ್ರಿಪಾಠಿ ಅವರು ಪ್ರಸ್ತುತ ರಿಫ್ಲೆಕ್‌ನ ಸಹ ಸಂಸ್ಥಾಪಕ ಮತ್ತು CTO ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಈ ವಿಚಾರಗಳ ಬಗ್ಗೆ ಎಕ್ಸ್‌ನ ಪೋಸ್ಟ್‌ನ ಮೂಲಕ ಹಂಚಿಕೊಂಡಿದ್ದಾರೆ. ಸಧ್ಯ ಈ ಪೋಸ್ಟ್‌ ಎಲ್ಲೆಡೆ ವೈರಲ್‌ ಆಗ್ತಿದ್ದು, ಎಲ್ಲೆಡೆ ಚರ್ಚೆ ಆಗ್ತಿದೆ. ಅವರು ತಮ್ಮ 1ಕೋಟಿ ಸಂಬಳದ ಕೆಲಸವನ್ನ ತ್ಯಜಿಸಿದ ನಂತರ 2024ರಲ್ಲಿ ಅವರು ಎದುರಿಸಿದ ಸವಾಲುಗಳ ಬಗ್ಗೆ ಹಂಚಿಕೊಂಡಿದ್ದಾರೆ.

1 ಕೋಟಿ ಉದ್ಯೋಗವನ್ನು ಬಿಟ್ಟ ಬೆಂಗಳೂರು ಉದ್ಯಮಿ!

ಅಮೆಜಾನ್‌ನನ್ನು ತೊರೆದ ನಂತರ, ತ್ರಿಪಾಠಿ 2024ರಲ್ಲಿ ತನ್ನ ಮೊದಲ ಸ್ಟಾರ್ಟ್‌ಅಪ್, ಹೂಬಾಹೂ AI ಅನ್ನು ಪ್ರಾರಂಭ ಮಾಡಿದರು. ಆದ್ರೂ ಕೂಡ, ಅವರ ಆರಂಭಿಕ ಉದ್ಯಮವು ವೈ ಕಾಂಬಿನೇಟರ್‌ನಿಂದ ನಿರಾಕರಣೆ ಮತ್ತು 30 ಕ್ಕೂ ಹೆಚ್ಚು ಸಾಹಸೋದ್ಯಮ ಬಂಡವಾಳಗಾರರಿಗೆ ವಿಫಲವಾದ ಪಿಚ್‌ಗಳನ್ನು ಒಳಗೊಂಡಂತೆ ತಕ್ಷಣಕ್ಕೆ ಸಾಕಷ್ಟು ಸವಾಲುಗಳನ್ನ ಎದುರಿಸುವಂತಾಯಿತು. ಅಂತಿಮವಾಗಿ ಅದನ್ನ ಮುಚ್ಚಬೇಕಾಗಿ ಬಂತು.

ನಂತರ ತ್ರಿಪಾಠಿ ಮತ್ತು ಅವರ ಸಹ-ಸಂಸ್ಥಾಪಕರಾದ ಕುನಾಲ್ ರಂಜನ್, ಅವರು ಇಂಜಿನಿಯರಿಂಗ್ ಉತ್ಪಾದಕತೆಯ ಮೆಟ್ರಿಕ್‌ಗಳನ್ನು ಮೇಲ್ವಿಚಾರಣೆ ಮಾಡುವ B2B SaaS ಉತ್ಪನ್ನವನ್ನು ಅಭಿವೃದ್ಧಿಪಡಿಸಲು ಮುಂದಾದರು. ಆದ್ರೆ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಉತ್ಪಾದಕತೆಯನ್ನು ಪರಿಣಾಮಕಾರಿಯಾಗಿ ಅವರು ಅರಿತುಕೊಂಡ ನಂತರ ಈ ಆಲೋಚನೆಯನ್ನು ಕೂಡ ಕೈಬಿಡಲಾಯಿತು. ಅವರು ನಂತರ ಡೆವಲಪರ್‌ಗಳಿಗಾಗಿ AI ಸಾಧನವಾದ ಕೋಡರ್‌ಮನ್ AI ಅನ್ನು ರಚಿಸಲು ನಿರ್ಧರಿಸಿದರು ಆದರೆ ಕೊನೆಯಲ್ಲಿ ಮಾರುಕಟ್ಟೆಯ ಸ್ಯಾಚುರೇಷನ್‌ನಿಂದಾಗಿ ಮತ್ತೆ ಪಿವೋಟ್ ಮಾಡಲು ಮುಂದಾದರು.

ಈ ಎಲ್ಲಾ ಪ್ರಯತ್ನಗಳ ನಂತರ ಅವರಿಬ್ಬರು ಮುಂದೆ ಪೂರೈಕೆ ಸರಪಳಿ ವಲಯದಲ್ಲಿ ಅವಕಾಶಗಳನ್ನ ಹುಡುಕಲು ಶುರು ಮಾಡಿದ್ರು. ಇನ್ನು ಅದರ ಸಂಗ್ರಹಣೆಗಾಗಿ AI ಏಜೆಂಟ್ ಅನ್ನು ನಿರ್ಮಿಸುವ ಗುರಿಯನ್ನ ಕೂಡ ಅವರು ಹೊಂದಿದ್ದಾರೆ. ಆದ್ರೆ ಅವರಿಗೆ ಆ ಕ್ಏತ್ರದಲ್ಲಿ ಅನುಭವದ ಕೊರತೆ ಇದೆ ಎನ್ನುವುದು ತಿಳಿಯಿತು. ಹೀಗಾಘಿ ಅದನ್ನ ಗಮನದಲ್ಲಿ ಇಟ್ಟುಕೊಂಡು ಮತ್ತೊಂದು ಬದಲಾವಣೆಯನ್ನ ಮಾಡಲು ಶುರುಮಾಡಿದ್ರು.

ಸತತ ಪ್ರಯತ್ನಗಳ ನಂತರ ತ್ರಿಪಾಠಿ ಅವರು Reflecc AI ರಚನೆ ಮಾಡಿದ್ರು. ಅಲ್ಲಿ ಅವರು ಮತ್ತು ಅವರ ತಂಡವು ಕೇವಲ ಏಳು ದಿನಗಳಲ್ಲಿ ಕನಿಷ್ಠ ಮಿನಿಮಮ್‌ ವೈಯೇಬಲ್‌ ಪ್ರೊಡಕ್ಟ್‌ (MVP)ಅನ್ನು ಅಭಿವೃದ್ಧಿಪಡಿಸಿದರು. ಅವರು ತಮ್ಮ ಪರಿಕಲ್ಪನೆಯನ್ನು ಮೌಲ್ಯೀಕರಿಸಲು 50 ಕ್ಕೂ ಹೆಚ್ಚು ಸಂಭಾವ್ಯ ಕ್ಲೈಂಟ್‌ಗಳು ಮತ್ತು ಉದ್ಯಮ ತಜ್ಞರೊಂದಿಗೆ ಚರ್ಚೆ ಮಾಡಿದ್ರು. ಇದರ ಪರಿಣಾಮವಾಗಿ ಆಸಕ್ತ ಪಕ್ಷಗಳಿಂದ ಮೂರು ಲೆಟರ್ಸ್ ಆಫ್ ಇಂಟೆಂಟ್ (LOI ಗಳು). 10% Y ಕಾಂಬಿನೇಟರ್ ಅಪ್ಲಿಕೇಶನ್‌ಗಳು, ಅಂತಿಮವಾಗಿ ಅವುಗಳನ್ನು ಕೂಡ ಮತ್ತೊಮ್ಮೆ ತಿರಸ್ಕಾರ ಮಾಡಲಾಯಿತು.

ಅವರ ಈ ಸ್ಟಾರ್ಟ್‌ ಅಪ್‌ ಪ್ರಯಾಣದ ಬಗ್ಗೆ ಹೇಳುತ್ತ ತಮ್ಮ ಪ್ರಯಾಣ ತ್ರಿಪಾಠಿ ಅವರು ತಮ್ಮ ಹೆಚ್ಚು ಕೇಂದ್ರೀಕೃತ ವಿಧಾನದ ಅಗತ್ಯವನ್ನು ಒಪ್ಪಿಕೊಂಡರು. AI ಡಿಜಿಟಲ್ ಮಾರ್ಕೆಟರ್ ಅನ್ನು ಅಭಿವೃದ್ಧಿಪಡಿಸುವ ಕಡೆಗೆ ಪಿವೋಟ್ ಮಾಡಲು ಕಾರಣವಾಯಿತು. ಅಲ್ಲದೆ 2025ರಲ್ಲಿ ತನ್ನ ಉದ್ಯಮಶೀಲತೆಯ ಆಕಾಂಕ್ಷೆಗಳನ್ನು ತ್ಯಜಿಸಿ ಮತ್ತೆ ಕಾರ್ಪೊರೇಟ್ ಕೆಲಸಕ್ಕೆ ಹೋಗುವಂತೆ ಮಾಡದಿದ್ರೆ ಉತ್ತಮ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ತ್ರಿಪಾಠಿ ಅವರ ಈ ಸ್ಟಾರ್ಟ್ಅಪ್‌ ಪಯಣದ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. X ನಲ್ಲಿ 77,000 ಕ್ಕೂ ಹೆಚ್ಚು ಬಳಕೆದಾರರು ಈ ಪೋಸ್ಟ್‌ ಅನ್ನು ನೋಡಿದ್ದಾರೆ. ಅಲ್ಲಿ ಹಲವಾರು ಕಾಮೆಂಟ್‌ಗಳು ತಮ್ಮ ಸ್ವಂತ ಅನುಭವಗಳನ್ನ ವೈಫಲ್ಯಗಳನ್ನ ಹಂಚಿಕೊಂಡಿದ್ದಾರೆ ಮತ್ತು ಪ್ರೋತ್ಸಾಹದ ಮಾತುಗಳನ್ನು ಕೂಡ ನೀಡಿದ್ದಾರೆ.

ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ, ನನ್ನ 2023ರ ವಿಶಿಷ್ಟ ಸಂಸ್ಥಾಪಕ ಪ್ರಯಾಣವು ಕೂಡ ಇದೇ ಆಗಿತ್ತು. ಆದರೆ ನಾನು ಅದನ್ನು ತ್ಯಜಿಸಿದೆ ಮತ್ತು ನಾನೇ ಮತ್ತೊಂದು ಸ್ಟಾರ್ಟ್‌ಅಪ್‌ಗೆ ಸೇರಿಕೊಂಡೆ ಎಂದು ಹೇಳಿಕೊಂಡಿದ್ದಾರೆ. ಆದ್ರೆ ಆಶಾದಾಯಕವಾಗಿ ನೀವು ನೋಟ್‌ಗಳನ್ನು ವಿನಿಮಯ ಮಾಡಿಕೊಳ್ಳಲು ಸಂತೋಷದ ಹೋರಾಟವನ್ನು ಮುಂದುವರಿಸಬಹುದು ಎಂದು ಕಮೆಂಟ್‌ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರರು ಅವರಿಗೆ ಅದೃಷ್ಟವನ್ನು ಹಾರೈಸಿದರು. ನೀವು ನಿಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಮಾತ್ರ ವ್ಯವಹಾರದಲ್ಲಿ ಇಂತಹ ಅಪಾಯಗಳನ್ನು ತೆಗೆದುಕೊಳ್ಳಬಹುದು . ಆದ್ದರಿಂದ ಮುಂದುವರಿಯಿರಿ ಮತ್ತು ನಿಮಗೆ ಶುಭ ಹಾರೈಸುತ್ತೇನೆ ಎಂದು ಕಮೆಂಟ್‌ ಮಾಡಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+