2023ರಲ್ಲಿ ಬೆಂಗಳೂರಿನಲ್ಲಿ ಅಪರಾಧ ಪ್ರಮಾಣ ಭಾರೀ ಏರಿಕೆ!, ಇಲ್ಲಿದೆ ಅಂಕಿಅಂಶ ವಿವರ

ಕರ್ನಾಟಕ ರಾಜ್ಯ ರಾಜಧಾನಿಯಾದ ಬೆಂಗಳೂರು ಉದ್ಯೋಗ, ಐಟಿ ಹಬ್‌ಗಳಿಗಾಗಿ ಎಷ್ಟು ಜನಪ್ರಿಯವಾಗಿದೆಯೋ ಅಷ್ಟೇ ಕ್ರೈಮ್‌ಗಳಿಗೂ ಕುಖ್ಯಾತಿಯನ್ನು ಪಡೆಯುತ್ತಾ ಸಾಗುತ್ತಿದೆ. ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪರಾಧ ಪ್ರಮಾಣ ಏರಿಕೆಯಾಗುತ್ತಿದೆ.

ಬೆಂಗಳೂರಿನಲ್ಲಿ 2023 ರಲ್ಲಿ ವಿವಿಧ ರೀತಿಯ ಅಪರಾಧಗಳ ಅಡಿಯಲ್ಲಿ ಬರೋಬ್ಬರಿ 68,518 ಪ್ರಕರಣಗಳು ದಾಖಲಿಸಲಾಗಿದೆ ಎಂದು ಮಂಗಳವಾರ ಬಿಡುಗಡೆಯಾದ ಅಂಕಿಅಂಶಗಳು ತೋರಿಸಿವೆ. ನಗರದಲ್ಲಿ 2022ರಲ್ಲಿ ಒಟ್ಟಾಗಿ ಸುಮಾರು 46,187 ಅಪರಾಧ ಪ್ರಕರಣಗಳು ವರದಿಯಾಗಿದೆ. ಇದಕ್ಕೆ ಹೋಲಿಸಿದರೆ 2023ರಲ್ಲಿ ಶೇಕಡ 48.34ರಷ್ಟು ಅಪರಾಧ ಪ್ರಮಾಣ ಜಿಗಿತ ಕಂಡಿದೆ.

 2023ರಲ್ಲಿ ಬೆಂಗಳೂರಿನಲ್ಲಿ ಅಪರಾಧ ಪ್ರಮಾಣ ಭಾರೀ ಏರಿಕೆ!

ಅಪರಾಧ ಪ್ರಮಾಣ ಹೆಚ್ಚಳಕ್ಕೆ ಕಾರಣವೇನು?

ಪ್ರಕರಣಗಳ ಹೆಚ್ಚಳಕ್ಕೆ ಮೂರು ಅಂಶಗಳು ಕಾರಣವಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ದೂರುಗಳನ್ನು ದಾಖಲಿಸಲು ಜನರನ್ನು ಪ್ರೋತ್ಸಾಹಿಸುವ ಸ್ನೇಹಪರ ಪೊಲೀಸ್ ಪಡೆ, ಕಂಟ್ರೋಲ್ ರೂಂ (112) ದೂರುಗಳಿಗೆ ಕರೆಗಳನ್ನು ರವಾನಿಸುವುದು ಮತ್ತು ಇ-ಎಫ್‌ಐಆರ್ ಸೌಲಭ್ಯದಿಂದಾಗಿ 2023ರಲ್ಲಿ ಪ್ರಕರಣಗಳ ವರದಿ ಹೆಚ್ಚಾಗಿದೆ ಎಂದು ಪೊಲೀಸರು ಅಭಿಪ್ರಾಯಿಸಿದ್ದಾರೆ.

103 ಕೋಟಿ ರೂಪಾಯಿ ಮೌಲ್ಯದ ಡ್ರಗ್‌ ವಶ

ಒಂದು ವರ್ಷದಲ್ಲಿ ಅಂದರೆ 2023ರಲ್ಲಿ ಅಂದಾಜು 103 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ನಾರ್ಕೋಟಿಕ್ ಡ್ರಗ್ಸ್ ಆಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ 68,518 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು 39,156 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ನಗರ ಪೊಲೀಸರು ಜೂಜು, ಬೆಟ್ಟಿಂಗ್ ಮತ್ತು ಅಕ್ರಮ ಶಸ್ತ್ರಾಸ್ತ್ರಗಳಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ 5,994 ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು 9,614 ಜನರನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿದ್ದ ವಿದೇಶಿಗರ ಗಡಿಪಾರು

ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ವರದಿಯ ಆಧಾರದ ಮೇಲೆ 2023 ರಲ್ಲಿ 247 ವಿದೇಶಿಯರನ್ನು ಬೆಂಗಳೂರಿನಿಂದ ಗಡಿಪಾರು ಮಾಡಲಾಗಿದೆ ಎಂದು ಡೇಟಾ ಬಹಿರಂಗಪಡಿಸಿದೆ. 126 ವಿದೇಶಿಯರನ್ನು ಬಂಧಿಸಲಾಗಿದೆ ಮತ್ತು 92 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಂಕಿಅಂಶಗಳು ತೋರಿಸಿವೆ.

ರಾಜ್ಯದಲ್ಲಿ ಕೊಲೆ ಪ್ರಕರಣ ಏರಿಕೆ

ಕರ್ನಾಟಕದಲ್ಲಿ 2022ರಲ್ಲಿ ಒಟ್ಟು 1,404 ಕೊಲೆ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಹೆಚ್ಚಿನವು ವೈಯುಕ್ತಿಕ ದ್ವೇಷ ಅಥವಾ ವೈಷಮ್ಯದ ವಿವಾದಗಳಿಂದಾಗಿ ಸಂಭವಿಸಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಇತ್ತೀಚಿನ ವರದಿ ತಿಳಿಸಿದೆ.

ಎನ್‌ಸಿಆರ್‌ಬಿ ಡೇಟಾದ ವಿಶ್ಲೇಷಣೆಯ ಪ್ರಕಾರ ರಾಜ್ಯದಲ್ಲಿ ಕೊಲೆ ಪ್ರಕರಣಗಳ ಸಂಖ್ಯೆ 2021 ರಲ್ಲಿ 1,357 ಆಗಿದ್ದು, 2022ರಲ್ಲಿ 1,404 ಕ್ಕೆ ಏರಿದೆ. 28 ರಾಜ್ಯಗಳ ಪೈಕಿ, ಉತ್ತರ ಪ್ರದೇಶದಲ್ಲಿ ಗರಿಷ್ಠ 3,491 ಕೊಲೆ ಪ್ರಕರಣಗಳು ದಾಖಲಾಗಿವೆ. ಅದರ ನಂತರ ಸ್ಥಾನದಲ್ಲಿ ಬಿಹಾರ (2,930) ಮತ್ತು ಮಹಾರಾಷ್ಟ್ರ (2,295) ಇದೆ. 2022 ರಲ್ಲಿ ಕರ್ನಾಟಕ 8 ನೇ ಸ್ಥಾನದಲ್ಲಿದೆ.

ಹಿರಿಯರು, ಮಹಿಳೆಯರು ಟಾರ್ಗೆಟ್

ಎನ್‌ಸಿಆರ್‌ಬಿ ಅಂಕಿಅಂಶಗಳು ಕರ್ನಾಟಕಕ್ಕೆ ಚಿಂತಾಜನಕ ಚಿತ್ರಣವನ್ನು ನೀಡುತ್ತವೆ. ಹಿರಿಯ ನಾಗರಿಕರ ವಿರುದ್ಧದ ಅಪರಾಧಗಳಲ್ಲಿ ಶೇಕಡ 86 ರಷ್ಟು ಏರಿಕೆಯಾಗಿದೆ. 2022ರಲ್ಲಿ ರಾಜ್ಯವು 93 ಕೊಲೆ ಪ್ರಕರಣಗಳು ಸೇರಿದಂತೆ ಹಿರಿಯರ ವಿರುದ್ಧದ 1,583 ಅಪರಾಧಗಳ ಘಟನೆಗಳನ್ನು ದಾಖಲಿಸಿದೆ. ಇದು 2021 ರಲ್ಲಿ 1,442 ಮತ್ತು 2020 ರಲ್ಲಿ 853 ಪ್ರಕರಣಗಳಿಂದ ಒಟ್ಟು ಪ್ರಕರಣಗಳಲ್ಲಿ ಹೆಚ್ಚಳವಾಗಿದೆ.

ಇದಲ್ಲದೆ, 2022ರಲ್ಲಿ ಕರ್ನಾಟಕವು ಮಹಿಳೆಯರ ಮೇಲಿನ ಹಲ್ಲೆ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿದೆ. 4,712 ಘಟನೆಗಳು ಮತ್ತು ಒಟ್ಟು 655 ಲೈಂಗಿಕ ಕಿರುಕುಳ ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 43 ಪ್ರಕರಣಗಳು ನಿರ್ದಿಷ್ಟವಾಗಿ ಕೆಲಸದ ಸ್ಥಳದಲ್ಲಿ ವರದಿಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+