ಬೆಂಗಳೂರಿಗರಿಗೆ ಮತ್ತೆ ನಿರಾಸೆ! 22k ಮತ್ತು 24k ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ!

ಇಂದು ಬೆಂಗಳೂರಿನಲ್ಲಿ ಮತ್ತೆ ಚಿನ್ನದ ದರ ಏರಿಕೆಯಾಗಿದೆ. ನಿನ್ನೆ ಸ್ವಲ್ಪ ಏರಿಕೆಯಾಗಿದ್ದ ಚಿನ್ನದ ದರ ಮತ್ತೆ ಇಂದು ಭಾರಿ ಪ್ರಮಾಣದಲ್ಲಿ ಏರಿಕೆಯನ್ನ ಕಂಡಿದೆ. ಕಳೆದ ವಾರದಿಂದಲೂ ಕೂಡ ಚಿನ್ನದ ದರ ಏರಿಕೆಯಾಗ್ತಾನೆ ಇದೆ. ಮಧ್ಯದಲ್ಲಿ ಒಂದೆರಡು ದಿನ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿತ್ತು. ಆದರೆ ಇಂದು ಚಿನ್ನ ತನ್ನ ಓಟವನ್ನ ಮುಂದುವರೆಸಿದೆ.

ಯುಎಸ್‌ ಡಾಲರ್‌ ಬಲವರ್ಧನೆಯಿಂದಾಗಿ ಜಾಗತಿಕವಾಗಿ ಚಿನ್ನದ ಬೆಲೆ ಏರಿಕೆಯಾಗ್ತಿದೆ. ಚಿನ್ನದ ಬೆಲೆಗಳು ಡಿಸೆಂಬರ್‌ 13ರಂದು ಸ್ವಲ್ಪ ಇಳಿಕೆಯಾಗಿದ್ದವು. ಆದ್ರೆ ಇಂದು ಮಾರುಕಟ್ಟೆಯಲ್ಲಿ ಹಳದಿ ಲೋಹಗಳು ಉತ್ತಮ ಪ್ರದರ್ಶನವನ್ನ ನೀಡುತ್ತಿವೆ. ಬೆಂಗಳೂರಿನಲ್ಲಿ ಚಿನ್ನದ ದರಗಳು ಇಂದು ಏರಿಕೆಯಾಗುತ್ತಿದ್ದಂತೆ ಇತ್ತ ಬೆಳ್ಳಿ ಬೆಲೆಗಳಲ್ಲಿ ಕೂಡ ತೀವ್ರವಾದ ಏರಿಕೆಯನ್ನ ನಾವು ಗಮನಿಸಬಹುದು.

ಬೆಂಗಳೂರಿನಲ್ಲಿ ಮತ್ತೆ ಏರಿದ ಚಿನ್ನದ ದರ!

ಮದುವೆ ಸೀಸನ್‌ಗಳು ಆರಂಭವಾಗಿರುವುದರಿಂದ ಚಿನ್ನದ ಬೇಡಿಕೆ ಕೂಡ ಹೆಚ್ಚಾಗ್ತಿದೆ. ಈ ಹಿನ್ನೆಲೆ ಕೊಳ್ಳುವವರ ಸಂಖ್ಯೆ ಕೂಡ ಏರಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಚಿನ್ನದ ಬೇಡಿಕೆ ಹೆಚ್ಚಾಗ್ತಿದೆ. ಮಾರುಕಟ್ಟೆಯಲ್ಲಿ ಹಳದಿ ಲೋಹದ ಮೇಲಿನ ಬೆಲೆಗಳು ಕೂಡ ಏರಿಕೆಯಾಗ್ತಿವೆ.

ಜನವರಿ 16 ರಂದು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 500 ರೂ. ಏರಿಕೆಯಾಗಿ 73,900ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 550ರೂ. ಏರಿಕೆಯಾಗಿ 80,620 ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 410 ರೂ. ಏರಿಕೆಯಾಗಿ 60,470 ಆಗಿದೆ.

ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 5,000ರೂ. ಏರಿಕೆಯಾಗಿ 7,39,000 ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 5,500 ರೂ. ಏರಿಕೆಯಾಗಿ 8,06,200 ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 4,100 ರೂ. ಏರಿಕೆಯಾಗಿ 6,04,700 ಆಗಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರಗಳು

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೂಡ ಏರಿಕೆಯಾಗಿದೆ . ಪ್ರಸ್ತುತ, ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ಬೆಲೆ 2 ರೂ. ಏರಿಕೆಯಾಗಿ 95.50 ರೂ. ಆಗಿದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 2,000
ರೂ. ಏರಿಕೆಯಾಗಿ 95,500ರೂ. ಆಗಿದೆ. ಇಂದು ಬೆಳ್ಳಿ ಬೆಲೆ ಕೂಡ ಏರಿಕೆಯಾಗಿದೆ.

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ಕ್ರಮ
ಸಂಖ್ಯೆ
ನಗರಗಳು24 ಕ್ಯಾರೆಟ್22 ಕ್ಯಾರೆಟ್
1ದೆಹಲಿರೂ.80,770ರೂ.74,050
2ಮುಂಬೈರೂ.80,620ರೂ.73,900
3ಚೆನ್ನೈರೂ.80,620ರೂ.73,900
5ಕೋಲ್ಕತ್ತಾರೂ.80,620ರೂ.73,900

ಸಂಕ್ರಾಂತಿಗೆ ಗುಡ್‌ನ್ಯೂಸ್‌: ಬೆಂಗಳೂರಿನಲ್ಲಿ ಚಿನ್ನದ ದರ ಇಳಿಕೆ! 22k ಮತ್ತು 24k ಚಿನ್ನ ಎಷ್ಟಿದೆ? ತಿಳಿಯಿರಿ

ಸ್ಪಾಟ್‌ ಚಿನ್ನದ ಭವಿಷ್ಯ

ಸ್ಪಾಟ್‌ ಚಿನ್ನದ ದರಗಳು ಇಂದು ಇಳಿಕೆಯಾಗಿವೆ. ಯುಎಸ್‌ ಡಾಲರ್‌ ಏರಿಕೆಯಾಗಿರುವುದರಿಂದ ಇದು ಸ್ಪಾಟ್‌ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ವರದಿ ಪ್ರಕಾರ ಸ್ಪಾಟ್‌ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 0.03% ಇಳಿಕೆಯಾಗಿ 2,695.54 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಇತ್ತ ಸ್ಪಾಟ್ ಬೆಳ್ಳಿ ಭವಿಷ್ಯವು ಪ್ರತಿ ಔನ್ಸ್‌ಗೆ 0.10% ಏರಿಕೆಯಾಗಿ 30.65 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪ್ಲಾಟಿನಮ್‌ ಬೆಲೆಯು ಪ್ರತಿ ಔನ್ಸ್‌ಗೆ 0.21% ರಷ್ಟು ಏರಿಕೆಯಾಗಿ 942.75 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪಲ್ಲಾಡಿಯಂ ಬೆಲೆಯು ಪ್ರತಿ ಔನ್ಸ್‌ಗೆ 0.36% ರಷ್ಟು ಇಳಿಕೆಯಾಗಿ 962.50 ಡಾಲರ್‌ ತಲುಪಿದೆ.

MCX ಗೋಲ್ಡ್ ಔಟ್‌ಲುಕ್ ಮತ್ತು ಸಿಲ್ವರ್‌ ಔಟ್‌ಲುಕ್

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.24% ನಷ್ಟು ಏರಿಕೆಯಾಗಿ 78,902. ರೂ. ಆಗಿದೆ. ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0% ನಷ್ಟು ಇಳಿಕೆಯಾಗಿ 92,853 ರೂಪಾಯಿ ವಹಿವಾಟು ನಡೆಸುತ್ತಿದೆ. ಜಾಗತಿಕ ಬೇಡಿಕೆ ಹೆಚ್ಚಾದಂತೆ ಅದು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಬಹುದು. ಬಡ್ಡಿ ದರಗಳು, ಸರ್ಕಾರಿ ನೀತಿಗಳು, ಕರೆನ್ಸಿ ವಿನಿಮಯ ದರಗಳು ಮತ್ತು ಬೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಬೆಲೆಗಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+