ಬೆಂಗಳೂರಿನ ಬಹುತೇಕ ಮಂದಿ ಅವಲಂಬಿಸಿರುವ ಸಂಚಾರಿ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಬೆಲೆ ಏರಿಕೆಯಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಕುಸಿತವನ್ನು ಕಾಣುತ್ತಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(BMRCL) ಈ ಬೆಳವಣೆಗೆ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಇತ್ತೀಚಿಗೆ ಬೈಕ್ ಟ್ಯಾಕ್ಸಿ ನಿಷೇಧ ಮಾಡಿದರೂ ಮೆಟ್ರೋದಲ್ಲಿ ಮಾತ್ರ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗುತ್ತಲೇ ಇದೆ. ಇದೀಗ ಮೇ ತಿಂಗಳ ಪ್ರಯಾಣಿಕರ ಅಂಕಿ- ಅಂಶಗಳನ್ನು ಬಿಎಂಆರ್ ಸಿಎಲ್ ಬಿಡುಗಡೆ ಮಾಡಿದೆ.
ಹೌದು, ಬಿಎಂಆರ್ ಸಿಎಲ್ ಟಿಕೆಟ್ ದರ ಏರಿಕೆಯ ಮಾಡಿ ತಿಂಗಳುಗಳೇ ಕಳೆದರೂ ಪ್ರಯಾಣಿಕರ ಸಂಖ್ಯೆ ಏರಿಕೆ ಕಾಣದೇ ಇಳಿಕೆಯಾಗುತ್ತಲೇ ಇದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು ಎಂದು ಬಿಎಂಆರ್‌ಸಿಎಲ್ ಮಾಹಿತಿಯನ್ನು ತಿಳಿಸಿತ್ತು. ಆದರೆ ಮೇ ತಿಂಗಳ ಅಂಕಿಅಂಶಗಳು ಮೆಟ್ರೋ ನಿಯಮಕ್ಕೆ ಶಾಕ್ ಕೊಟ್ಟಿದೆ.

ಬಿಎಂಆರ್ ಸಿಎಲ್ ಪ್ರಯಾಣಿಕರ ಅಂಕಿಅಂಶಗಳ ಪ್ರಕಾರ ಮೇ ತಿಂಗಳಲ್ಲಿ ಪ್ರತಿದಿನ ಸರಾಸರಿ 7.56 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರವನ್ನು ಮಾಡಿದ್ದಾರೆ.ಆದರೆ ಜೂನ್ ತಿಂಗಳಲ್ಲಿ ಆದರೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮಾಹಿತಿಯನ್ನು ತಿಳಿಸಿದೆ.
ಪ್ರಯಾಣಿಕರ ಸಂಖ್ಯೆ ಮೆಟ್ರೋದಲ್ಲಿ ಕುಸಿತ
ನಮ್ಮ ಮೆಟ್ರೋದಲ್ಲಿ ದರ ಹೆಚ್ಚಳದ ಪರಿಷ್ಕೃತ ದರವನ್ನು ನೋಡಿದ ಜನರು, ಮೆಟ್ರೋಗಿಂತ ಬಿಎಂಟಿಸಿ ಬಸ್, ಖಾಸಗಿ ವಾಹನಗಳೇ ಉತ್ತಮ ಎಂದು ಹೇಳುತ್ತಿದ್ದಾರೆ.ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಸೇವೆ ನೀಡುತ್ತವೆ.
ಫೆಬ್ರವರಿ 3ರಂದು ದರ ಏರಿಕೆಗೂ ಮೊದಲು ಮೆಟ್ರೋ ಪ್ರಯಾಣಿಕರ ಸಂಖ್ಯೆ 8.7 ಲಕ್ಷವಾಗಿತ್ತು. ಆದರೆ ಫೆಬ್ರವರಿ 10ರಂದು ದರ ಏರಿಕೆ ಬಳಿಕ ಇದು 8.2 ಲಕ್ಷಕ್ಕೆ ಇಳಿಕೆಯಾಗಿದೆ. ಮಾಹಿತಿಗಳ ಪ್ರಕಾರ ಶೇ 4ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಪರಿಷ್ಕೃತ ದರ ಪಟ್ಟಿ ಫೆಬ್ರುವರಿ 9ರಿಂದ ಜಾರಿಗೆ ಬಂದಿದೆ. ನಂತರದ ಸತತ ಎರಡು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಫೆಬ್ರುವರಿ 10ರಂದು (ಸೋಮವಾರ) 8,28,149 ಜನರು ಹಾಗೂ ಫೆಬ್ರುವರಿ 11ರಂದು (ಮಂಗಳವಾರ) 7,78,774 ಮಂದಿ ಮೆಟ್ರೊ ಪ್ರಯಾಣ ಮಾಡಿದ್ದಾರೆ.
ಟಿಕೆಟ್ ದರ ಏರಿಕೆಯಾದ ನಂತರ, ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. "ಮೆಟ್ರೋಗೆ ಕೊಡುವ ಹಣದಲ್ಲಿಯೇ ಖಾಸಗಿ ವಾಹನಕ್ಕೆ ಪೆಟ್ರೋಲ್, ಡೀಸೆಲ್ ಹಾಕಿಸಿ ಕಚೇರಿಗಳಿಗೆ ಹೋಗಬಹುದು" ಎಂದು ಜನರು ಮೊಟ್ರೋ ರೈಲುಗಳತ್ತ ಹೋಗುವುದು ಕೂಡ ಕಡಿಮೆಯಾಗಿದೆ.
ಮೆಟ್ರೋ ದರ ಏರ ಏರಿಕೆಯ ವಿವರ
0-2 ಕಿಲೋಮೀಟರ್‌ಗಳ ನಡುವಿನ ಪ್ರಯಾಣ ದರ10 ರೂ
2 ಕಿಮೀ ನಿಂದ 4 ಕಿಮೀಗೆ ಪ್ರಯಾಣ ದರ 20 ರೂ
4 ಕಿಮೀ ನಿಂದ 6 ಕಿಮೀಗೆ 30 ರೂ
6 ಕಿಮೀ ನಿಂದ 8 ಕಿಮೀ 40 ರೂ
8 ಕಿಮೀ ನಿಂದ 10 ಕಿಮೀ 50 ರೂ
10 ಕಿಮೀ ನಿಂದ 12 ಕಿಮೀಗೆ 60 ರೂ
15 ಕಿಮೀ ನಿಂದ 20 ಕಿಮೀಗೆ 70 ರೂ
20 ಕಿಮೀ ನಿಂದ 25 ಕಿಮೀ 80 ರೂ 25 ಕಿಮೀ ನಿಂದ 30 ಕಿಮೀ ಮತ್ತು ಅದಕ್ಕಿಂತ ಹೆಚ್ಚಿನ ಪ್ರಯಾಣ ದರ 90 ಆಗಿರುತ್ತದೆ
ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಳಿತ
ನಮ್ಮ ಮೆಟ್ರೋದಲ್ಲಿ ಕಳೆದ ಮೇ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 7.56 ಲಕ್ಷ ಜನರು ಸಂಚಾರವನ್ನು ಮಾಡಿದ್ದಾರೆ. ಏಪ್ರಿಲ್ ಏಪ್ರಿಲ್ ತಿಂಗಳಿಗೇ ಹೋಲಿಕೆಯನ್ನು ಮಾಡಿದ್ದರೇ ಮೇ ತಿಂಗಳು ಸ್ವಲ್ಪ ಕಡಿಮೆ ಮಂದಿ ಪ್ರಯಾಣವನ್ನು ಮಾಡಿದ್ದಾರೆ. ಏಪ್ರಿಲ್‌ನಲ್ಲಿ ಪ್ರತಿದಿನ ಸರಾಸರಿ 7.62 ಲಕ್ಷ ಜನರು ಪ್ರಯಾಣಿಸಿದ್ದರು. ಈ ವರ್ಷದ ಜನವರಿಯಲ್ಲಿ ಪ್ರತಿದಿನ ಸರಾಸರಿ 8.03 ಲಕ್ಷ ಜನರು ಪ್ರಯಾಣವನ್ನು ಮಾಡಿದ್ದಾರೆ. ಫೆಬ್ರವರಿಯಲ್ಲಿ 7.49 ಲಕ್ಷಕ್ಕೆ ಮತ್ತು ಮಾರ್ಚ್‌ನಲ್ಲಿ 7.24 ಲಕ್ಷಕ್ಕೆ ಪ್ರಯಾಣಿಕರ ಸಂಖ್ಯೆ ಇತ್ತು ಎಂದು ಬಿಎಂಆರ್ ಸಿಎಲ್ ಮಾಹಿತಿಯನ್ನು ತಿಳಿಸಿದೆ.


Click it and Unblock the Notifications