Namma Metro: ಚಾಲಕ ರಹಿತ ಮೆಟ್ರೋ ಸಂಚಾರ ಯಾವಾಗ ಆರಂಭವಾಗುತ್ತದೆ ಎಂಬುವುದು ಬಹುದಿನಗಳ ಕನಸು.ಆದರೆ ಇದೀಗ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL) ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ಹಳದಿ ಮಾರ್ಗದ(Namma Metro Yellow line)ಸಂಚಾರ ಆರಂಭಕ್ಕೆ ಡೇಟ್ ಫಿಕ್ಸ್ ಮಾಡಿದೆ. ಸಂಚಾರ ಆರಂಭ ಯಾವಾಗ..? ನಿಲ್ದಾಣಗಳು ಯಾವ್ಯಾವು..? ಎಷ್ಟು ಗಂಟೆಗೊಮ್ಮೆ ರೈಲು ಓಡಾಟ ನಡೆಸುತ್ತಿನ ಎಂನ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು, ಬಹುನಿರೀಕ್ಷಿತ ಹಳದಿ ಮಾರ್ಗದ ಸಂಚಾರವನ್ನು ರೈಲು ಬೋಗಿಗಳ ವಿಳಂಭದಿಂದ ಮುಂದೂಡಿಕೆಯಾಗುತ್ತಲೇ ಇತ್ತು.ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ಕನಿಷ್ಠ ಮೂರೂ ರೈಲುಗಳು ಅಗತ್ಯವಿತ್ತು. ಈಗಾಗಲೇ ಚಾಲಕರಹಿತ ಎಂಜಿನ್ ಹೊಂದಿರುವ ಎರಡು ರೈಲುಗಳನ್ನು ಪೂರೈಸಲಾಗಿತ್ತು, ಆದರೆ ಮೂರನೇ ರೈಲು ವಿಳಂಭದ ಕಾರಣ ಸಂಚಾರ ಆರಂಭವಾಗಿರಲಿಲ್ಲ. ಈಗ ಮೂರನೇ ರೈಲೂ ಬಂದಿದೆ, ಹೀಗಾಗಿ ಎಲ್ಲಾ ಮೂರು ರೈಲುಗಳೂ ಲಭ್ಯವಿದ್ದು, ಸಂಚಾರ ಆರಂಭಕ್ಕೆ ಸಿದ್ಧವಾಗಿದ್ದು, ಮುಂದಿನ ತಿಂಗಳು(ಜೂನ್) ಮೊದಲ ವಾರದದಲ್ಲಿ ಸಂಚಾರ ಆರಂಭಿಸುವಂತಹ ಸಾದ್ಯತೆಗಳು ಇವೆ.

ಬೊಮ್ಮಸಂದ್ರ-ಆರ್.ವಿ. ರಸ್ತೆ ನಡುವಿನ 18.8 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಸಂಚಾರ ಆರಂಭದಲ್ಲಿ ಮೂರು ರೈಲುಗಳು 30 ನಿಮಿಷಗಳಿಗೊಮ್ಮೆ ಕಾರ್ಯನಿರ್ವಹಿಸುತ್ತವೆ. ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರದ ಟರ್ಮಿನಲ್ ನಿಲ್ದಾಣಗಳ ಜೊತೆಗೆ ಐದು ಮುಖ್ಯ ನಿಲ್ದಾಣಗಳಲ್ಲಿ ಸೇವೆಗಳು ಲಭ್ಯವಿದೆ.
BMRCL ಸಂಚಾರ ಆರಂಭದ ಬಗ್ಗೆ ಹೇಳಿರುವುದು ಏನು..?
ಹಳದಿ ಮಾರ್ಗದ ಮೂರನೇ ರೈಲು ಕಾರ್ಯಾರಂಭವಾದ ಹಿನ್ನೆಲೆಯಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮಾರ್ಗವನ್ನು ಶೀಘ್ರದಲ್ಲೇ ಸಾರ್ವಜನಿಕ ಸೇವೆಯನ್ನು ಆರಂಭಿಸಲು
ಪ್ರಯತ್ನ ನಡೆಸುತ್ತಿದೆ. ಈ ಮಾರ್ಗದ ಪೂರ್ಣ ಪ್ರಾರಂಭದಿಂದ ನಂತರ ನಗರ ಸಂಚಾರ ವ್ಯವಸ್ಥೆ ಇನ್ನಷ್ಟು ಸುಧಾರಣೆ ಕಾಣಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗ
ನಮ್ಮ ಮೆಟ್ರೋ ಹಳದಿ ಮಾರ್ಗ ಬೊಮ್ಮಸಂದ್ರದಿಂದ ಆರ್.ವಿ. ರಸ್ತೆವರೆಗೆ ವಿಸ್ತರಿಸಲಾದ ಹಳದಿ ಮೆಟ್ರೋ ಮಾರ್ಗವು 18.8 ಕಿಲೋಮೀಟರ್ ಉದ್ದವಿದ್ದು, ದಕ್ಷಿಣ ಬೆಂಗಳೂರು ಮತ್ತು ನಗರ ಕೇಂದ್ರದ ನಡುವಿನ ಸಂಚಾರಕ್ಕೆ ಪ್ರಮುಖ ಸಂಪರ್ಕನ್ನು ನೀಡುತ್ತದೆ.
ರೈಲು ಓಡಾಟ ಯಾವಾಗ..?
ಹಳದಿ ಮಾರ್ಗದಲ್ಲಿ ರೈಲು ಸಂಚಾರ ಜೂನ್ ತಿಂಗಳಿಂದ ಆರಂಭವಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ.
ನಿಲ್ದಾಣಗಳು ಯಾವುವು..?
ಹಳದಿ ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ ಮತ್ತು ಆರ್.ವಿ. ರಸ್ತೆ ಎಂಬ 16 ನಿಲ್ದಾಣಗಳಿವೆ.
ತಪಾಸಣೆಯ ಸಮಯದಲ್ಲಿ, ಅನುಮೋದನೆ ನೀಡುವ ಮೊದಲು CMRS ಹಳಿಗಳು, ನಿಲ್ದಾಣಗಳು, ಅಗ್ನಿಶಾಮಕ ವ್ಯವಸ್ಥೆಗಳು, ಪ್ರವೇಶ/ನಿರ್ಗಮನ ಬಿಂದುಗಳು, ರೈಲು ಸೆಟ್‌ಗಳು ಇತ್ಯಾದಿಗಳನ್ನು ಪರಿಶೀಲಿಸುತ್ತದೆ. ಯಾವುದೇ ಶಿಫಾರಸುಗಳನ್ನು ಅನುಸರಿಸಲು BMRCL ಗೆ ಸುಮಾರು ಎರಡು ವಾರಗಳ ಅಗತ್ಯವಿದೆ. ಬಹುಶಃ ಹಳದಿ ಮಾರ್ಗವು ಜೂನ್ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯನ್ನು ಹೊಂದಿದೆ.
ಹಳದಿ ಮಾರ್ಗದ ಪ್ರಮುಖ ವೈಶಿಷ್ಟ್ಯಗಳು
ಚಾಲಕರಹಿತ ಮೆಟ್ರೋ: ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಡ್ರೈವರ್ಲೆಸ್ ರೈಲುಗಳು
ವಾಹನ ದಟ್ಟಣೆ ನಿವಾರಣೆ: ರಸ್ತೆ ಸಂಚಾರದ ಮೇಲೆ ಒತ್ತಡ ಕಡಿಮೆಯಾಗುವುದು
ಬಳಕೆದಾರರ ಅನುಕೂಲತೆ: ವೇಗ, ಸಮಯದ ಉಳಿತಾಯ ಮತ್ತು ಉತ್ತಮ ಸಂಪರ್ಕ
ಪರಿಸರ ಸ್ನೇಹಿ: ಕಾರ್ಬನ್ ಡೈಆಕ್ಸೈಡ್ ಕಡಿಮೆ ಮಾಡುತ್ತದೆ.
ಸುಲಭ, ಸುರಕ್ಷಿತ ಸಂಚಾರವನ್ನು ಈ ಹಳದಿ ಮಾರ್ಗ ತನ್ನ ಪ್ರಯಾಣಿಕರಿಗೆ ಬದಗಿಸಲಿದೆ.


Click it and Unblock the Notifications