ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿ ಕಿರಿಯಂತೂ ತಪ್ಪದೇ ಇದ್ದೇ ಇರುತ್ತದೆ ಅದರಲ್ಲೂ ಹಬ್ಬದ ಸಮಯದಲ್ಲಿ ಹೆಚ್ಚಿನ ಸಂಚಾರ ದಟ್ಟಣೆಯನ್ನು ಹೊಂದಿರುತ್ತದೆ. ರಂಜಾನ್ ಹಬ್ಬದ ಪ್ರಯುಕ್ತ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಕಡೆ ಸಂಚಾರ ನಿರ್ಬಂಧವನ್ನು ನೀಡಲಾಗಿದೆ.ಇನ್ನು ಅನೇಕ ಕಡೆಯ ಮಾರ್ಗದಲ್ಲಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ.
ಹೌದು,ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಅದರಲ್ಲೂ ಚಾಮರಾಜಪೇಟೆ ಮತ್ತು ಮೈಸೂರು ರಸ್ತೆಗಳಲ್ಲಿ ಕೂಡ ಸಂಚಾರ ಬದಲಾವಣೆಯನ್ನು ಮಾಡಲಾಗಿದೆ.

ರಂಜಾನ್ ಹಬ್ಬದ ಸಮಯದಲ್ಲಿ ಚಾಮರಾಜಪೇಟೆ ಹಾಗೂ ಅದರ ಸುತ್ತಮುತ್ತಲಿರುವ ಪ್ರದೇಶಗಳಲ್ಲಿ ಸಂಚಾರ ನಿಯಮಗಳನ್ನು ಅನುಸರಿಸಲು ಬೆಂಗಳೂರು ಟ್ರಾಫಿಕ್ ಪೋಲಿಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ. ಈ ಕುರಿತು ಪೂರಕ ಮಾಹಿತಿ ಹಾಗೂ ಸಂಚಾರದ ಬದಲಾವಣೆಯ ವಿವರವನ್ನು ಹಂಚಿಕೊಂಡಿದ್ದಾರೆ.
ಸಂಚಾರ ನಿಯಮಗಳು ಮತ್ತು ಪರ್ಯಾಯ ಮಾರ್ಗಗಳು ಈ ಕೆಳಗಿನಂತೆ ಇದೆ.
ಮೈಸೂರಿನ ರಸ್ತೆ: ಪೋಲ್ ಗೇಟ್ ಜಂಕ್ಷನ್ನಿಂದ ಬಿಬಿ ಜಂಕ್ಷನ್ ಮೂಲಕ ಬಿಜಿಎಸ್ ಫ್ಲೈಓವರ್ ಮೇಲ್ಬಾಗದಿಂದ ಟೌನ್ ಹಾಲ್ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.ಇನ್ನೂ ಮೈಸೂರಿನ ಕಡೆಯಿಂದ ಟೌನ್ ಹಾಲ್ ಕಡೆಗೆ ಹೋಗುವ ವಾಹನಗಳು ಬ್ಯಾಟರಾಯನಪುರ ಸಂಚಾರ ರಾಣಾ ಸರಹದ್ದಿನ ಕಿತ್ತೋ ಜಂಕ್ಷನ್ ಮೂಲಕ ಎಡ ತಿರುವು ಪಡೆದುಕೊಂಡು ವಿಜಯನಗರದ ಮೂಲಕ ಹೋಗಬೇಕು
ಟೌನ್ ಹಾಲ್ ಕಡೆಯಿಂದ ಮೈಸೂರಿನ ಕಡೆಗೆ
ಬಿಜಿಎಸ್ ಫ್ಲೈಓವರ್ ಮೇಲ್ಬಾಗದಿಂದ ಬಿಬಿ ಜಂಕ್ಷನ್ ಮಾರ್ಗವಾಗಿ ಟೋಲ್ ಗೇಟ್ ಜಂಕ್ಷನ್ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ. ಟೌನ್ ಹಾಲ್ ಕಡೆಯಿಂದ ಮೈಸೂರಿನ ಕಡೆಗೆ ಹೋಗುವ ವಾಹನಗಳು ಬಿಜಿಎಸ್ ಫ್ಲೈಓವರ್ ಕೆಳಗಡೆ ಸರ್ವಿಸ್ ರಸ್ತೆಯನ್ನು ಬಳಸಿಕೊಂಡು ಭಾರಿ ವಾಹನಗಳು ವೆಟರ್ನರಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಗೂಡ್ ಶೆಡ್ ರಸ್ತೆಯ ಮೂಲಕ ಮತ್ತು ಲಘುವಾಹನಗಳು ಸಿರ್ಸಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದುಕೊಂಡು ಜೆ.ಜೆ ನಗರ ಟ್ಯಾಂಕ್ ಬಂಡ್ ರಸ್ತೆಯ ಮೂಲಕ ಹೋಗಬಹುದು.
ಬಸವನಗುಡಿ ಮತ್ತು ಚಾಮರಾಜಪೇಟೆ ಕಡೆಯಿಂದ ಮೆಜೆಸ್ಟಿಕ್ ಕಡೆಗೆ
ಚಾಮರಾಜಪೇಟೆ 1 ನೇ ಮುಖ್ಯರಸ್ತೆ, 5ನೇ ಅಡ್ಡ ರಸ್ತೆ ಮೂಲಕ ಮೈಸೂರಿನ ರಸ್ತೆ, ಸಿರ್ಸಿ ಸರ್ಕಲ್, ಬಿನ್ನಿಮಿಲ್ ರಸ್ತೆಯ ಮೂಲಕ ನೀವು ಹೋಗಬೇಕಾಗುತ್ತದೆ.
ಇದರ ಜೊತೆಗೆ ಹಲವು ರಸ್ತೆಗಳ ಬಗ್ಗೆ ಸಹ ಸಂಚಾರ ನಿಯಮಗಳು ಮತ್ತು ಮಾರ್ಗ ಬದಲಾವಣೆಗಳನ್ನು ಮಾಡಲಾಗಿದೆ. ಬೆಂಗಳೂರು ಟ್ರಾಫಿಕ್ ಪೋಲಿಸವರು ಈ ವಿವರಗಳನ್ನು ಸಾಮಾಜಿಕ ಮಾಧ್ಯಮದ ಎಕ್ಸ್ ಮೂಲಕ ಹಂಚಿಕೊಂಡಿದ್ದು, ಅದನ್ನು ಅನುಸರಿಸುವ ಮೂಲಕ ಸಂಚಾರದಲ್ಲಿ ತೊಂದರೆಯಿಲ್ಲದೆ ಹಬ್ಬವನ್ನು ಆಚರಿಸಬೇಕಾಗುತ್ತದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ರಂಜಾನ್ ಹಬ್ಬದ ಪ್ರಾರ್ಥನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ, ಬೆಂಗಳೂರಿನ ನಾಗವಾರ ಜಂಕ್ಷನ್ ನಿಂದ ಪಾಟರಿ ಸರ್ಕಲ್ ವರೆಗೆ ಸೋಮವಾರ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 1 ರವರೆಗೆ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.
ಪರ್ಯಾಯ ಮಾರ್ಗ: ನಾಗವಾರ ಜಂಕ್ಷನ್ನಿಂದ ಪಾಟರಿ ಸರ್ಕಲ್ವರೆಗೆ ಸಂಚಾರದಲ್ಲಿ ತೊಂದರೆಗಳನ್ನು ತಪ್ಪಿಸಲು, ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಹಳೆಯ ಟೌನ್ ಹಾಲ್ ಮಾರ್ಗ ಮೂಲಕ ಸಾಗಬಹುದಾಗಿದೆ ಹಾಗೂ ಸಿರ್ಸಿ ಸರ್ಕಲ್ ಮಾರ್ಗವನ್ನು ಬಳಸಬಹುದು.
ಪಾರ್ಕಿಂಗ್ ನಿಷೇಧಿತ ಪ್ರದೇಶಗಳು: ನಾಗವಾರ ಜಂಕ್ಷನ್ ಮತ್ತು ಪಾಟರಿ ಸರ್ಕಲ್ ಪ್ರದೇಶಗಳಲ್ಲಿ ಎಲ್ಲಾ ರೀತಿಯ ವಾಹನಗಳಿಗೆ ಪಾರ್ಕಿಂಗ್ ನಿಷೇಧಿಸಲಾಗಿದೆ.
ಪರ್ಯಾಯ ಪಾರ್ಕಿಂಗ್ ಸ್ಥಳಗಳು
ನಾಗವಾರ ಜಂಕ್ಷನ್ ಹಾಗೂ ಪಾಟರಿ ಸರ್ಕಲ್ ಬಳಿ ಪರ್ಯಾಯ ಪಾರ್ಕಿಂಗ್ ಸ್ಥಳಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ನಗರ ಪಾರ್ಕ್, ಆನಂದ ರಾವ್ ಸರ್ಕಲ್ ಇತ್ಯಾದಿ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡುವಂತೆ ಸೂಚನೆ ನೀಡಲಾಗಿದೆ.
ಇವು ಎಲ್ಲವೂ ಸಹ ರಂಜಾನ್ ಹಬ್ಬದ ಪ್ರಾರ್ಥನೆ ಸಂದರ್ಭದಲ್ಲಿ ಸುಗಮವಾಗಿ ನಡೆಯಲು ಮತ್ತು ಸಂಚಾರ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲು ಈ ಕ್ರಮಗಳನ್ನು ಸಂಚಾರಿ ಪೊಲೀಸ್‌ರು ಮಾಹಿತಿಯನ್ನು ತಿಳಿಸಿದ್ದಾರೆ.


Click it and Unblock the Notifications