ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರುದ್ಧ ಕರೆ ನೀಡಿರುವ ಭಾರತ ಬಂದ್ ನಲ್ಲಿ ಪಾಲ್ಗೊಳ್ಳಲು ಬ್ಯಾಂಕ್ ಒಕ್ಕೂಟಗಳು ನಿರ್ಧರಿಸಿವೆ. ಸೆಂಟ್ರಲ್ ಟ್ರೇಡ್ ಯೂನಿಯನ್ ಗಳಿಂದ ಮುಂದಿನ ವಾರ ಭಾರತ ಬಂದ್ ಗೆ ಕರೆ ನೀಡಲಾಗಿದೆ. ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್, ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ನಿಂದ ಸದಸ್ಯರಿಗೆ ಅಂದು ಕಾರ್ಯ ನಿರ್ವಹಿಸದಂತೆ ತಿಳಿಸಿವೆ. ಜನವರಿ ಎಂಟನೇ ತಾರೀಕು ಬಂದ್ ಇದೆ.
ಮುಂದಿನ ಬುಧವಾರ (ಜನವರಿ ಎಂಟನೇ ತಾರೀಕು) ಸಾಮಾನ್ಯವಾಗಿ ದೊರೆಯಬೇಕಾದ ಬ್ಯಾಂಕಿಂಗ್ ಸೇವೆಗಳು, ಎಟಿಎಂಗಳ ಮೇಲೆ ಪರಿಣಾಮ ಆಗಲಿವೆ. ಎನ್ ಇಎಫ್ ಟಿ, ಐಎಂಪಿಎಸ್ ಮತ್ತು ಆರ್ ಟಿಜಿಎಸ್ ವರ್ಗಾವಣೆ ಮೇಲೆ ಯಾವುದೇ ಪರಿಣಾಮ ಇರುವುದಿಲ್ಲ.
ಆಲ್ ಇಂಡಿಯಾ ಆಫೀಸರ್ಸ್ ಕಾನ್ಫಡರೇಷನ್ ಪ್ರಧಾನ ಕಾರ್ಯದರ್ಶಿ ಸೌಮ್ಯ ದತ್ತಾ ಅವರು ಮನವಿ ಮಾಡಿದ್ದು, ಯಾವುದೇ ಬೇಡಿಕೆಯನ್ನು ಒಪ್ಪಿಕೊಳ್ಳದೆ ಆ ದಿನ ಬಂದ್ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ವೇತನ ಹೆಚ್ಚಳ, ಬ್ಯಾಂಕಿಂಗ್ ವ್ಯವಸ್ಥೆಯ ಸುಧಾರಣೆ ಮತ್ತು ಬ್ಯಾಂಕ್ ಗಳ ವಿಲೀನ ವಿಷಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳ ವೇತನ ಪರಿಷ್ಕರಣೆಯನ್ನು ಮುಂದಕ್ಕೆ ಹಾಕಲಾಗುತ್ತಿದೆ. 2010ರ ಏಪ್ರಿಲ್ ನಂತರ ನೇಮಕವಾದವರಿಗೆ ಪಿಂಚಣಿ ಅನುಕೂಲ ಮಿತಿ ಮಾಡಲಾಗಿದೆ. ಐದು ದಿನಗಳ ಬ್ಯಾಂಕಿಂಗ್ ಮುಂತಾದ ಬೇಡಿಕೆಗಳು ನಿರ್ಲಕ್ಷಿಸಲಾಗಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗಿದೆ. ಅಗತ್ಯ ಸಂಖ್ಯೆಯ ನೇಮಕಾತಿ ಆಗಿಲ್ಲ ಎಂದು ಬಂದ್ ನೋಟಿಸ್ ನಲ್ಲಿ ವಿವಿಧ ಬ್ಯಾಂಕ್ ಗಳು ತಿಳಿಸಿವೆ.
ಅಂದ ಹಾಗೆ ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್, ಇಂಡಿಯನ್ ನ್ಯಾಷನಲ್ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಮತ್ತು ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಕಾಂಗ್ರೆಸ್ ಬ್ಯಾಂಕ್ ಬಂದ್ ಕರೆಗೆ ಬೆಂಬಲ ನೀಡಿವೆ.


Click it and Unblock the Notifications