ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಬ್ಯಾಂಕ್ ಖಾತೆಗಳನ್ನು (Bank Account) ಹೊಂದಿರುತ್ತಾರೆ. ಯಾವುದೇ ಕೆಲಸ ಆಗ್ಬೇಕಾದ್ರೂ, ಉದ್ಯೋಗ ನಡೆಸಬೇಕಾದ್ರೂ ಬ್ಯಾಂಕ್ ಖಾತೆ ಇರಲೇಬೇಕು. ಆದ್ರೆ ನವೆಂಬರ್ 1 ರಿಂದ, ಬ್ಯಾಂಕ್ ಖಾತೆಗೆ ಸಂಬಂಧಿಸಿ ಹೊಸ ನಿಯಮ ಜಾರಿಗೆ ಬರಲಿದೆ. ಗ್ರಾಹಕರು ಇನ್ನು ಮುಂದೆ ಒಬ್ಬರಲ್ಲ, ನಾಲ್ವರು ನಾಮಿನಿ ಹೆಸರುಗಳನ್ನು ಸೇರಿಸಬಹುದು. ಅಷ್ಟೇ ಅಲ್ಲ, ನೀವು ಆಡ್ ಮಾಡುವ ಹೆಸರಿಗೆ, ಎಷ್ಟು ಶೇರ್ ಹೋಗಬೇಕೆಂದು ಮೊದಲೇ ನಿರ್ಧರಿಸಬಹುದು. ಇದು ಹಣ ಕ್ಲೈಮ್ ಮಾಡುವ ಪ್ರಕ್ರಿಯೆ ಸುಲಭಗೊಳಿಸುತ್ತದೆ ಮತ್ತು ಕುಟುಂಬ ಸದಸ್ಯರ ನಡುವಿನ ಮನಸ್ತಾಪಗಳು ಬರದಂತೆ ಮಾಡಲು ಸಹಕಾರಿಯಾಗುತ್ತದೆ. ಕುಟುಂಬದ ಕಲಹಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಇನ್ನು ಬ್ಯಾಂಕ್ ಖಾತೆಗೆ ನಾಮಿನಿಗಳ ಹೆಸರಿನ ಜೊತೆಗೆ ಇ-ಮೇಲ್ ಮತ್ತು ಮೊಬೈಲ್ ಸಂಖ್ಯೆಗಳನ್ನು ನೀಡುವುದು ಕಡ್ಡಾಯವಾಗಿದೆ. ಏಕೆಂದರೆ ಇದು ಬ್ಯಾಂಕ್‌ನಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ.
ನವೆಂಬರ್ 1 ರಿಂದ ಹೊಸ ಬದಲಾವಣೆ:
ನವೆಂಬರ್ 1, 2025 ರಿಂದ ಬ್ಯಾಂಕ್ ಖಾತೆ ಹೊಂದಿರುವವರು ತಮ್ಮ ಖಾತೆಗೆ ಒಬ್ಬರಲ್ಲ, ನಾಲ್ವರನ್ನು ನಾಮಿನಿಗಳಾಗಿ ಸೇರಿಸಬಹುದು. ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಕಾಯಿದೆ 2025 ರ ಅಡಿಯಲ್ಲಿ ಹೊಸ ನೀತಿ ಜಾರಿಗೆ ಬಂದಿದ್ದು, ಕ್ಲೈಮ್ ಮಾಡಲು ಸುಲಭ, ವಿವಾದಗಳನ್ನು ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಆದ್ದರಿಂದ ಖಾತೆದಾರರು ತಾವು ಠೇವಣಿ ಇಟ್ಟ ಹಣ ಅಥವಾ ಲಾಕರ್‌ನಲ್ಲಿರುವ ವಸ್ತುಗಳನ್ನು ನಾಲ್ಕು ನಾಮಿನಿಗಳ ಹೆಸರಲ್ಲಿ ಪಾಲು ಮಾಡಬಹುದು ಮತ್ತು ನಿರ್ದಿಷ್ಟ ಪಾಲನ್ನು ಕೂಡಾ ಮೊದಲೇ ಬರೆದಿಡಬಹುದು.
ನಾಮಿನಿ ಪಾಲು ಹೇಗೆ ವಿತರಣೆಯಾಗುತ್ತದೆ?
ಬ್ಯಾಂಕ್ ಖಾತೆಗೆ ಗ್ರಾಹಕರು ನಾಲ್ಕು ನಾಮಿನಿಗಳನ್ನು ಒಮ್ಮೆಲೆ ಆಯ್ಕೆ ಮಾಡಬಹುದು ಅಥವಾ ಸರಣಿ ಕ್ರಮದಲ್ಲಿ ನೀವೇ ಸೆಲೆಕ್ಟ್ ಮಾಡಬಹುದು. ಸರಣಿ ಆಯ್ಕೆ ಮಾಡಿದರೆ, ಮೊದಲ ನಾಮಿನಿಯ ನಂತರ ಎರಡನೆಯವರು, ನಂತರ ಮೂರನೆಯವರು ಮತ್ತು ನಾಲ್ಕನೆಯವರು ಖಾತೆಯ ಹಕ್ಕು ಪಡೆಯುತ್ತಾರೆ. ಒಂದು ವೇಳೆ ನೀವು ಮೊದಲು ಆಯ್ಕೆ ಮಾಡಿದ ನಾಮಿನಿ ಇರದಿದ್ದರೆ, ಆಟೋಮೆಟಿಕ್ ಆಗಿ ಮುಂದಿನ ನಾಮಿನಿಗೆ ಕ್ಲೈಮ್ ಹಕ್ಕು ಸಿಗುತ್ತದೆ. ಇದರಿಂದ ವಿವಾದ ತಪ್ಪುತ್ತದೆ.
ಪಾಲು ಸುಲಭ:
ಬ್ಯಾಂಕಿನ ಹೊಸ ನಿಯಮದ ಪ್ರಕಾರ ಇನ್ಮುಂದೆ ಖಾತೆದಾರರು ತಮ್ಮ ಕುಟುಂಬ ಸದಸ್ಯರಿಗೆ ಅಥವಾ ನೀವು ಹಣ ನೀಡಲು ಬಯಸುವ ವ್ಯಕ್ತಿಗಳಿಗೆ ಹಣ ಅಥವಾ ವಸ್ತುಗಳ ಪಾಲನ್ನು ಸುಲಭವಾಗಿ ಮಾಡಬಹುದು. ಅಲ್ಲದೇ ಖಾತೆದಾರರ ನಿಧನದ ನಂತರ ಕ್ಲೈಮ್ ಪ್ರಕ್ರಿಯೆ ಸುಲಭವಾಗುತ್ತದೆ.
ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಯಾವುದೇ ಕೆಲಸ ಆಗ್ಬೇಕಾದ್ರೂ, ಉದ್ಯೋಗ ನಡೆಸಬೇಕಾದ್ರೂ ಬ್ಯಾಂಕ್ ಖಾತೆ ಇರಲೇಬೇಕು. ಆದ್ರೆ ನವೆಂಬರ್ 1 ರಿಂದ, ಬ್ಯಾಂಕ್ ಖಾತೆಗೆ ಸಂಬಂಧಿಸಿ ಹೊಸ ನಿಯಮ ಜಾರಿಗೆ ಬರಲಿದೆ.


Click it and Unblock the Notifications