ಹೊಸ ವರ್ಷ (New Year) ಆರಂಭವಾಗುತ್ತಿದ್ದಂತೆ ಸರ್ಕಾರ ಕೂಡಾ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಅಲ್ಲದೇ ಸರ್ಕಾರಿ ರಜಾ ದಿನಗಳು, ಶಾಲಾ ರಜಾದಿನಗಳು, ಬ್ಯಾಂಕ್ ರಜಾದಿನಗಳನ್ನು ಸಹ ಪರಿಷ್ಕರಿಸಲಾಗುತ್ತದೆ (Bank Holidays). ಇಲ್ಲಿ ಕೆಲವು ರಜಾದಿನಗಳು ಸರ್ಕಾರಿ ರಜೆಗಳಾದ್ರೆ, ಇನ್ನೂ ಕೆಲವು ಸ್ಥಳೀಯ ಹಬ್ಬಗಳಿಗೆ, ಆಚರಣೆಗಳಿಗೆ ಸಂಬಂಧಿಸಿ ರಜೆ ನೀಡಲಾಗುತ್ತದೆ.

ಇದೀಗ ಹೊಸ ವರ್ಷದ ಆರಂಭದೊಂದಿಗೆ, 2026ರ ಜನವರಿ ತಿಂಗಳಲ್ಲಿ ದೇಶಾದ್ಯಂತದ ಬ್ಯಾಂಕ್‌ಗಳಿಗೆ ಹಲವು ದಿನ ರಜೆ ಇರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ರಜಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ, ರಾಜ್ಯವಾರು ಮತ್ತು ನಗರವಾರು ಬ್ಯಾಂಕ್ ರಜಾದಿನಗಳ ಸಂಪೂರ್ಣ ವಿವರ ಇಲ್ಲಿದೆ. ಈ ಕ್ಯಾಲೆಂಡರ್ ನೋಡಿಕೊಂಡರೆ, ಗ್ರಾಹಕರು ತಮ್ಮ ವಹಿವಾಟುಗಳನ್ನು ಮುಂಚಿತವಾಗಿ ಯೋಜಿಸಬಹುದು.
ಜನವರಿ 1ರ ಗುರುವಾರ ಹೊಸ ವರ್ಷದ ದಿನ:
ಜನವರಿ 1 ರ ಗುರುವಾರ ಹೊಸ ವರ್ಷದ ದಿನವನ್ನು ಆಚರಿಸುವುದರಿಂದ ಮಿಜೋರಾಂ, ತಮಿಳುನಾಡು, ಸಿಕ್ಕಿಂ, ಮಣಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳ ಮತ್ತು ಮೇಘಾಲಯದ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಅಲ್ಲದೇ ಐಜ್ವಾಲ್, ಚೆನ್ನೈ, ಕೋಲ್ಕತ್ತಾ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಶಾಖಾ ಸೇವೆಗಳು ಲಭ್ಯವಿರುವುದಿಲ್ಲ.
ಜನವರಿ 2ರ ಶುಕ್ರವಾರ, ಮನ್ನಂ ಜಯಂತಿ:
ಜನವರಿ 2ರ ಶುಕ್ರವಾರ, ಕೇರಳದಲ್ಲಿ ಮನ್ನಂ ಜಯಂತಿ ಮತ್ತು ಮಿಜೋರಾಂನಲ್ಲಿ ಹೊಸ ವರ್ಷ ಆಚರಣೆಯ ಕಾರಣ ಬ್ಯಾಂಕ್‌ಗಳು ಬಂದ್ ಆಗಲಿವೆ. ಐಜ್ವಾಲ್, ಕೊಚ್ಚಿ ಮತ್ತು ತಿರುವನಂತಪುರಂ ಬ್ಯಾಂಕ್‌ಗಳು ಕ್ಲೋಸ್ ಆಗಲಿದೆ ಎಂದು ಹೇಳಲಾಗಿದೆ.
ಜನವರಿ 3ರ ಶನಿವಾರ, ಹಜ್ರತ್ ಅಲಿಯವರ ಜನ್ಮದಿನ
ಜನವರಿ 3ರ ಶನಿವಾರ, ಹಜ್ರತ್ ಅಲಿಯವರ ಜನ್ಮದಿನ ಇರುವ ಹಿನ್ನೆಲೆ, ಉತ್ತರ ಪ್ರದೇಶದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಲಕ್ನೋದಲ್ಲಿನ ಬ್ಯಾಂಕ್‌ಗಳು ಮುಚ್ಚಲಿದ್ದು, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರಲಿದೆ.
ಸ್ವಾಮಿ ವಿವೇಕಾನಂದ ಜಯಂತಿ:
ಜನವರಿ 12, ಸೋಮವಾರದಂದು ಸ್ವಾಮಿ ವಿವೇಕಾನಂದ ಜಯಂತಿ ಸ್ಮರಣಾರ್ಥ ಪಶ್ಚಿಮ ಬಂಗಾಳದ ಬ್ಯಾಂಕ್‌ಗಳು ಮುಚ್ಚಿರುತ್ತದೆ. ಕೋಲ್ಕತ್ತಾದ ಬ್ಯಾಂಕ್ ಶಾಖೆಗಳೂ ಈ ದಿನ ಬಂದ್ ಇರಲಿದೆ ಎಂದು ಹೇಳಲಾಗಿದೆ.
ಮಕರ ಸಂಕ್ರಾಂತಿ:
ಜನವರಿ 14, ಬುಧವಾರದಂದು ಮಕರ ಸಂಕ್ರಾಂತಿ ಮತ್ತು ಮಾಘ ಬಿಹು ಹಬ್ಬಗಳನ್ನು ಆಚರಿಸುವ ಹಿನ್ನೆಲೆ ಅಸ್ಸಾಂ, ಒಡಿಶಾ, ಅರುಣಾಚಲ ಪ್ರದೇಶ,ಕರ್ನಾಟಕದಲ್ಲಿ ಬ್ಯಾಂಕ್ ರಜೆ ಇರಲಿದೆ. ಅಹ್ಮದಾಬಾದ್, ಭುವನೇಶ್ವರ, ಗುವಾಹಟಿ, ಇಟಾನಗರದ ಬ್ಯಾಂಕ್‌ಗಳು ಈ ದಿನ ಮುಚ್ಚಲಿವೆ.
ಜನವರಿ 15, ಗುರುವಾರ, ಉತ್ತರಾಯಣ ಪುಣ್ಯಕಾಲ, ಪೊಂಗಲ್ ಮತ್ತು ಮಕರ ಸಂಕ್ರಾಂತಿ ಆಚರಣೆಗಾಗಿ ದಕ್ಷಿಣ ರಾಜ್ಯಗಳು ಹಾಗೂ ಕೆಲವು ಇತರ ಪ್ರದೇಶಗಳ ಬ್ಯಾಂಕ್‌ಗಳು ಮುಚ್ಚಿರುತ್ತದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಬೆಂಗಳೂರು, ಚೆನ್ನೈ, ಹೈದರಾಬಾದ್, ವಿಜಯವಾಡ ಸೇರಿ ಹಲವು ನಗರಗಳ ಶಾಖೆಗಳು ಈ ದಿನ ಕಾರ್ಯನಿರ್ವಹಿಸುವುದಿಲ್ಲ.
ತಮಿಳುನಾಡಿನಲ್ಲಿ ಜನವರಿ 16, ಶುಕ್ರವಾರ ತಿರುವಳ್ಳುವರ್ ದಿನವನ್ನು ಆಚರಿಸುವುದರಿಂದ ಚೆನ್ನೈ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಜನವರಿ 17, ಶನಿವಾರವನ್ನು ತಮಿಳುನಾಡಿನಲ್ಲಿ ಉಜವರ್ ತಿರುನಾಳ್ ಎಂದು ಆಚರಿಸುವ ಕಾರಣ, ಈ ದಿನದಂದೂ ಚೆನ್ನೈ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ.
ಜನವರಿ 23, ಶುಕ್ರವಾರದಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ, ಸರಸ್ವತಿ ಪೂಜೆ ಮತ್ತು ಬಸಂತ ಪಂಚಮಿ ಹಬ್ಬಗಳಿಗೆ ಪಶ್ಚಿಮ ಬಂಗಾಳ, ಒಡಿಶಾ ಹಾಗೂ ತ್ರಿಪುರಾದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಅಗರ್ತಲಾ, ಭುವನೇಶ್ವರ, ಚೆನ್ನೈ ಮತ್ತು ಕೋಲ್ಕತ್ತಾ ಬ್ಯಾಂಕ್‌ಗಳಿಗೂ ರಜೆ ನೀಡಲಾಗಿದೆ.
ಗಣರಾಜ್ಯೋತ್ಸವ:
ಜನವರಿ 26, ಸೋಮವಾರ ಗಣರಾಜ್ಯೋತ್ಸವವಿರುವುದರಿಂದ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ಸಾರ್ವತ್ರಿಕ ರಜೆ ಇರುತ್ತದೆ. ನವದೆಹಲಿ, ಮುಂಬೈ, ಬೆಂಗಳೂರು, ಕರ್ನಾಟಕ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಅಹ್ಮದಾಬಾದ್, ಲಕ್ನೋ, ಭುವನೇಶ್ವರ ಸೇರಿದಂತೆ ಹಲವು ಪ್ರಮುಖ ನಗರಗಳ ಬ್ಯಾಂಕ್‌ಗಳು ಬಂದ್ ಇರಲಿದೆ. ಆದರೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications