ಇಲ್ಲಿ ಕೇಳಿ! ಇಂದು ಬ್ಯಾಂಕ್‌ಗಳಿಗೆ ರಜೆ ಇರುತ್ತೋ ಇಲ್ಲವೋ ಎಂಬ ಪ್ರಶ್ನಗೆ ಉತ್ತರ ಇಲ್ಲಿದೆ ನೋಡಿ... ಹೌದು, ಪ್ರತಿ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಸಾಮಾನ್ಯವಾಗಿ ಬ್ಯಾಂಕ್‌ಗಳು ರಜೆ ಇರುತ್ತವೆ. ಜೊತೆಗೆ ಹಬ್ಬ ಹರಿದಿನಗಳೂ, ಆಚರಣೆಗಳು ಸಂದರ್ಭದಲ್ಲಿ ಬ್ಯಾಂಕ್‌ಗೆ ರಜೆ ಘೋಷಿಸಿರಲಾಗುತ್ತದೆ. ಇದನ್ನು ಆರ್‌ಬಿಐ ಗಡ್‌ಲೈನ್ಸ್ ಮುಖಾಂತರವೇ ರಜೆ ನೀಡಲಾಗಿರುತ್ತದೆ. ಅದರಂತೆ ಇಂದು ಬುಧವಾರ ಫೆಬ್ರವರಿ 12ರಂದು ಈ ಬ್ಯಾಂಕ್‌ಗಳಿಗೆ ರಜೆ ನೀಡಲಾಗಿದ್ದು, ಸಾರ್ವಜನಿಕರು ಇದನ್ನು ಗಮದಲ್ಲಿಟುಕೊಳ್ಳಬೇಕು.
ಇಂದು ಗುರು ರವಿದಾಸ ಜಯಂತಿ ಪ್ರಯುಕ್ತ ಬ್ಯಾಂಕ್‌ಗಳಿಗೆ ರಜೆ ನೀಡಲಾಗಿದೆ. ಗುರು ರವಿದಾಸರ ಜಯಂತಿಯನ್ನು ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ. ಹೀಗಾಗಿ ಭಾಗದಲ್ಲಿ ಎಲ್ಲೆಲ್ಲಿ ಆಚರಣೆ ಮಾಡುತ್ತಾರೋ ಅಲ್ಲಲ್ಲಿ ಫೆಬ್ರವರಿ 12 ರ ಬುಧವಾರ ಬ್ಯಾಂಕ್ ರಜೆ ಇದೆ. ಹಿಮಾಚಲ ಪ್ರದೇಶದಲ್ಲಿ ಬುಧವಾರ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದರೊಂದಿಗೆ RBI ನೀಡಿರುವ ದೇಶದ ವಿವಿಧ ರಾಜ್ಯಗಳ ಬ್ಯಾಂಕ್ ಫೆಬ್ರವರಿ ರಜಾ ಪಟ್ಟಿಯು ಇಲ್ಲಿದೆ.

ಹಿಮಾಚಲ ಪ್ರದೇಶ ಬಿಟ್ಟು ಉಳಿದೆಲ್ಲಡೆ ಫೆಬ್ರವರಿ 12 ಬುಧವಾರ ಬ್ಯಾಂಕ್‌ಗಳು ಎಂದಿನಂತೆ ತೆರೆದಿರುತ್ತವೆ. ಸಂತ ಗುರು ರವಿದಾಸರ ಬೋಧನೆಗಳು ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆ ಗೌರವಿಸಲು ಸಮರ್ಪಿಸಲಾಗಿದೆ. ಹೀಗಾಗಿ ಫೆ.12ರಂದು ಅವರಿಗೆ ಗೌರವಸೂಚಕವಾಗಿ ಬ್ಯಾಂಕ್ ಒಂದು ದಿನ ಸ್ಥಗಿತಗೊಳಿಸಲಾಗುತ್ತದೆ.
ಫೆಬ್ರವರಿ ತಿಂಗಳಲ್ಲಿ ಇರುವ ರಜೆಗಳ ಪಟ್ಟಿ
ರಾಜ್ಯವಾರು ಬ್ಯಾಂಕ್ ರಜಾದಿನಗಳ ಪಟ್ಟಿ ಪ್ರತಿ ಮಾಸಿಕದಲ್ಲೂ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸ್ಥಳೀಯ ಹಬ್ಬಗಳು, ವಾರ್ಷಿಕೋತ್ಸವ, ಭಾನುವಾರ ಹಾಗೂ ನಿಗದಿತ ಎರಡು ಶನಿವಾರದ ದಿನಗಳು ಕಾರ್ಯ ನಿರ್ವಹಿಸುವುದಿಲ್ಲ. ಮೊದಲು ಹಾಗೂ ಮೂರನೇ ಶನಿವಾರ ಎಲ್ಲ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ಚಟುವಟಿಕೆ ನಡೆಸುತ್ತವೆ. ಈ ಫೆಬ್ರವರಿಯಲ್ಲಿ 14 ದಿನಗಳ ಕಾಲ ಬ್ಯಾಂಕ್ ಮುಚ್ಚಲ್ಪಡುತ್ತವೆ.
ಫೆಬ್ರವರಿ 11 ಮಂಗಳವಾರ ಥೈಪುಸಮ್: ಚೆನ್ನೈ ಬ್ಯಾಂಕ್‌ಗಳಿಗೆ ರಜೆ
ಫೆಬ್ರವರಿ 12 ಬುಧವಾರ: ಶಿಮ್ಲಾ, ಹಿಮಾಚಲ ಪ್ರದೇಶನಲ್ಲಿ ಸಂತ ರವಿದಾಸ್ ಜಯಂತಿ: ಬ್ಯಾಂಕ್ ರಜೆ
ಫೆಬ್ರವರಿ 15 ಶನಿವಾರ: ಇಂಫಾಲ್‌ನಲ್ಲಿ ಲೋಯಿ-ಂಗೈ-ನಿ ಸಂದರ್ಭದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಫೆಬ್ರವರಿ 19 ಬುಧವಾರ: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕ್‌ಗಳಿಗೆ ರಜೆ
ಫೆಬ್ರವರಿ 20 ಗುರುವಾರ: ಐಜ್ವಾಲ್ ಮತ್ತು ಇಟಾನಗರದಲ್ಲಿ ಬ್ಯಾಂಕ್ ಬಂದ್
ಫೆಬ್ರವರಿ 26 ಬುಧವಾರ ರಂದು ಅಹಮದಾಬಾದ್, ಐಜ್ವಾಲ್, ಬೆಂಗಳೂರು, ಬೇಲಾಪುರ, ಭೋಪಾಲ್, ಜೈಪುರ, ಜಮ್ಮು, ಕಾನ್ಪುರ, ಕೊಚ್ಚಿ, ಭುವನೇಶ್ವರ, ಚಂಡೀಗಢ, ಡೆಹ್ರಾಡೂನ್, ಮುಂಬೈ, ನಾಗ್ಪುರ, ರಾಯ್ಪುರ, ರಾಂಚಿ, ಶಿಮ್ಲಾ, ಹೈದರಾಬಾದ್, ಲಕ್ನೋ, ತಿರುವನಂತಪುರಂ ಮತ್ತು ಶ್ರೀನಗರಗಳಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಬ್ಯಾಂಕ್ ರಜೆ ಇರುತ್ತಾದೆ.
ಫೆಬ್ರವರಿಯಲ್ಲಿ ಬ್ಯಾಂಕ್‌ಗಳು 14 ದಿನಗಳ ಕಾಲ ಮುಚ್ಚಲಿವೆ
ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್‌ಗಳು 14 ದಿನಗಳ ಕಾಲ ಮುಚ್ಚಲಿದೆ ಎಂದು ಆರ್‌ಬಿಐ ತಿಳಿಸಿದೆ. ವಿವಿಧ ರಾಜ್ಯಗಳಿಗೆ ಒಂದೊಂದು ರೀತಿಯ ರಜೆ ಇರಲಿವೆ. ಫೆಬ್ರವರಿ 3 ರಂದು ಸೋಮವಾರ ಸರಸ್ವತಿ ಪೂಜೆ ಇರುವ ಹಿನ್ನೆಲೆ ಅಗರ್ತಲಾದಲ್ಲಿ ಬ್ಯಾಂಕುಗಳು ಮುಚ್ಚಲಿವೆ. ಹಾಗೆ ಫೆಬ್ರವರಿ 11 ರಂದು ಥಾಯ್ ಪೂಸಂ ಇರುವುದರಿಂದ ಚೆನ್ನೈನಲ್ಲಿ ಬ್ಯಾಂಕ್‌ಗಳು ಮಂಗಳವಾರ ಮುಚ್ಚಿರುತ್ತವೆ. ಹಾಗೆ ಫೆಬ್ರವರಿ 12ರಂದು ಶ್ರೀ ರವಿದಾಸ್ ಜಯಂತಿ ಇರುವುದರಿಂದ ಶಿಮ್ಲಾದಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ. ಫೆಬ್ರವರಿ 15 ರಂದು ಶನಿವಾರ Lui-Ngai-Ni ಇರುವುದರಿಂದ ಇಂಫಾಲ್‌ನಲ್ಲಿರುವ ಸರ್ಕಾರಿ ಹಾಗು ಖಾಸಗಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಈ ರಜಾದಿನಗಳ ಸಮಯದಲ್ಲಿ ಬ್ಯಾಂಕ್‌ಗಳು ಆನ್‌ಲೈನ್ ಮೂಲಕ ಜನರಿಗೆ ಸೇವೆಗಳನ್ನ ನೀಡಲಿವೆ. ಮೊಬೈಲ್ ಬ್ಯಾಂಕಿಂಗ್ ಮೂಲಕ ನೀವು ನಿಮ್ಮ ಬ್ಯಾಂಕಿಂಗ್ ಸೇವೆಗಳನ್ನ ಮಾಡಿಕೊಳ್ಳಬಹುದು. ಅಲ್ಲದೆ ರಜಾದಿನಗಳಲ್ಲಿ ಸಹಜವಾಗಿ ಎಟಿಎಂಗಳು ತೆರೆದಿರುತ್ತವೆ. ನಿಮಗೆ ತ್ವರಿತ ಸೇವೆಗಳು ಬೇಕಿದ್ದಲ್ಲಿ ನೆಟ್‌ಬ್ಯಾಂಕಿಂಗ್ ಬಳಕೆ ಮಾಡಿಕೊಂಡು ನೀವು ನಿಮ್ಮ ಹಣವನ್ನ ಪಡೆಯಬಹುದು ಅಥವಾ ಕಳುಹಿಸಬಹುದು.


Click it and Unblock the Notifications