ಬ್ಯಾಂಕ್‌ಗಳಿಗೆ ಸಹಜವಾಗಿ 2 ನೇ ಮತ್ತು 4ನೇ ಶನಿವಾರ ರಜೆ ಇರುತ್ತದೆ. ಅಲ್ಲದೆ ಕೆಲವು ದಿನಾಚರಣೆಗಳು, ಹಬ್ಬಗಳ ಸಮಯದಲ್ಲಿ ಸರ್ಕಾರಿ ಹಾಗು ಖಾಸಗಿ ಬ್ಯಾಂಕ್‌ಗಳು ಮುಚ್ಚುತ್ತವೆ. ಅದೇ ರೀತಿ ಇಂದು ಅಂದರೆ ಜನವರಿ 23ರಂದು ಬ್ಯಾಂಕ್‌ಗಳು ಮುಚ್ಚಲಿವೆಯಾ ಎಂದು ಕೆಲವು ಗೊಂದಲದಲ್ಲಿದ್ದಾರೆ. ಈ ಬಗ್ಗೆ ಇಲ್ಲಿ ನೋಡೋಣ.
ಜನವರಿ 23ರಂದು ಬ್ಯಾಂಕ್‌ಗಳಿಗೆ ರಜೆ ಇರಲಿದೆ. ನೇತಾಜಿ ಸುಭಾಷ್ ಚಂದ್ರಬೋಸ್, ಮತ್ತು ವೀರ್ ಸುರೇಂದ್ರ ಸಾಯಿ ಜಯಂತಿ ಹಿನ್ನೆಲೆ ಇಂದು ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಆದ್ರೆ ಎಲ್ಲಾ ರಾಜ್ಯದ ಬ್ಯಾಂಕ್‌ಗಳು ಮುಚ್ಚುವುದಿಲ್ಲ. ಹೊರತಾಗಿ ವೆಸ್ಟ್‌ಬೆಂಗಾಲ್, ಒಡಿಸ್ಸಾ ಮತ್ತು ತ್ರಿಪುರದಲ್ಲಿರುವ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಆ ಭಾಗದ ಜನರು ನೇತಾಜಿ ಸುಭಾಷ್ ಚಂದ್ರಬೋಸ್ ಹಾಗು ವೀರ್ ಸುರೇಂದ್ರ ಸಾಯಿ ಜಯಂತಿಯನ್ನ ಆಚರಿಸುತ್ತಾರೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಕ್ಯಾಲೆಂಡರ್‌ನ ಪ್ರಕಾರ ಅಲ್ಲಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

ಇನ್ನುಳಿದಂತೆ ಕರ್ನಾಟಕ, ಆಂದ್ರಪ್ರದೇಶ, ಮಧ್ಯ ಪ್ರದೇಶ, ತಮಿಳುನಾಡು ಕೇರಳ ಸೇರಿದಂತೆ ಇತರೆ ರಾಜ್ಯದ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ರಜೆಗಳನ್ನ ವರ್ಗೀಕರಿಸಿ ಅದರ ಪ್ರಕಾರ ಆರ್‌ಬಿಐ ಕ್ಯಾಂಡೆರ್‌ಗಳಲ್ಲಿ ನೀಡಲಾಗುತ್ತದೆ. ಅಲ್ಲದೆ ಈ ರಜೆಗಳ ಕುರಿತು ಆರ್‌ಬಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಜೊತೆಗೆ ಸೂಚನೆಗಳನ್ನ ನೀಡುತ್ತದೆ.
ಪ್ರತೀ ವರ್ಷ ಜನವರಿ 23ರಂದು ದೇಶದಲ್ಲಿ ಸ್ವತಂತ್ರ ಹೋರಾಟಗಾರರಾದ ಸುಬಾಷ್ ಚಂದ್ರ ಬೋಸ್ ಮತ್ತು ವೀರ್ ಸುರೇಂದ್ರ ಸಾಯಿ ಅವರ ಜನ್ಮದಿನವನ್ನ ಪರಾಕ್ರಮ್ ದಿವಸ್ ಆಗಿ ಸ್ಮರಿಸಲಾಗುತ್ತದೆ. ಭಾರತ ಸರ್ಕಾರ 2021 ಈ ದಿನವನ್ನ ಪ್ರಕ್ರಮ್ ದಿವಸ್ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ. ವೀರ್ ಸುರೇಂದ್ರ ಸಾಯಿ ಅವರು ಒಡಿಶಾದ ಸ್ವಾತಂತ್ರ ಹೋರಾಟಗಾರರಾಗಿದ್ದಾರೆ. ಅಲ್ಲದೆ ಅವರು ಭಾರತದಲ್ಲಿ ಭ್ರೀಟಿಷ್ ಆಡಳಿತದ ವಿರುದ್ಧ ಧ್ವನಿ ಎತ್ತಿದ್ದಲ್ಲದೆ ಅವರ ವಿರುದ್ಧ ಹೋರಾಡಿದವರು. ಅವರು 1809 ಜನವರಿ 23ರಂದು ಜನಿಸಿದ್ದಾರೆ.
ಬ್ಯಾಂಕ್ ರಜಾ ದಿನಗಳ ಬಗ್ಗೆ ಇಲ್ಲಿ ಗಮನಿಸಿ
ಭಾರತದಲ್ಲಿ ಬ್ಯಾಂಕ್ ರಜಾದಿನಗಳು ಪ್ರತೀ ರಾಜ್ಯಕ್ಕೆ ಬದಲಾಗುತ್ತವೆ. ಆಚರಣೆಗಳು, ಹಬ್ಬಗಳು ಹೀಗೆ ಸರ್ಕಾರಿ ರಜಾ ದಿನಗಳಲ್ಲಿ ಬ್ಯಾಂಕ್‌ಗಳಿಗೂ ಕೂಡ ರಜೆ ಇರಲಿದೆ. ಇದರ ಜೊತೆಗೆ ಪ್ರತೀ ತಿಂಗಳ ಎರಡನೇ ಶನಿವಾರ, ನಾಲ್ಕನೆ ಶನಿವಾರದಂದು ಕೂಡ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಈ ರಜಾ ದಿನಗಳು ಸರ್ಕಾರಿ ಹಾಗು ಖಾಸಗಿ ಎರಡೂ ಬ್ಯಾಂಕ್‌ಗಳಿಗೂ ಕೂಡ ಅನ್ವಯವಾಗುತ್ತದೆ. ಇನ್ನು ಆ ತಿಂಗಳಲ್ಲಿ ಐದನೇ ಶನಿವಾರ ಬಂದರೆ ಬ್ಯಾಂಕ್‌ಗಳು ಅಂದು ಕೆಲಸ ಮಾಡುತ್ತವೆ.
ರಾಜ್ಯಗಳಿಗೆ ಪ್ರತ್ಯೇಕ ರಜಾದಿನಗಳನ್ನ ಹೊರತುಪಡಿಸಿ, ಎಲ್ಲಾ ಬ್ಯಾಂಕ್‌ಗಳಿಗೂ ಇರುವ ರಜಾ ದಿನಗಳನ್ನ ನೋಡೋದಾದ್ರೆ, ಜನವರಿ 26 ಗಣರಾಜ್ಯೋತ್ಸವ, ಆಗಸ್ಟ್ 15 ಸ್ವತಂತ್ರ ದಿನಾಚರಣೆ, ಅಕ್ಟೋಬರ್ 2 ಗಾಂಧಿ ಜಯಂತಿಯಂದು ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ರಜಾ ದಿನಗಳಂದು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳನ್ನ ಪಡೆಯಬಹುದು
ರಜೆ ದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಿದರು ಕೂಡ ನೀವು ನೆಟ್ ಬ್ಯಾಂಕಿಂಗ್ ಸೇವೆಗಳನ್ನ ಪಡೆಯಬಹುದು. ಮೊಬೈಲ್ ಬ್ಯಾಂಕಿಂಗ್ ಮತ್ತು ಯುಪಿಐ ಸೇವೆಗಳನ್ನ ನೀವು ಪಡೆಯಬಹುದು. ಇದಲ್ಲದೆ ಎಟಿಎಂಗಳು ಕೂಡ ತೆರೆದಿರುತ್ತವೆ. ಬ್ಯಾಂಕಿಂಗ್ ಸಂಬಂಧಿಸಿದಂತೆ ತುರ್ತು ಸೇವೆಗಳಿಗಾಗಿ ನೀವು ಆನ್‌ಲೈನ್ ಮೂಲಕ ಸೇವೆಗಳನ್ನ ಪಡೆಯಬಹುದು. ಯಾವ ಸಮದಲ್ಲಾದ್ರೂ ನೀವು ಎಲ್ಲಿ ಬೆಕಾದ್ರು ಮೊಬೈಲ್ ಬ್ಯಾಂಕಿಂಗ್ ಸಂಬಂಧಿಸಿದಂತೆ ಎಲ್ಲಾ ಸೇವೆಗಳನ್ನ ಪಡೆಯಬಹುದು.


Click it and Unblock the Notifications