ಬ್ಯಾಂಕ್‌ಗಳು ಸರ್ಕಾರಿ ಹಬ್ಬಗಳ ಸಂದರ್ಭಗಳಲ್ಲಿ, ಸ್ಥಳೀಯ ಹಬ್ಬಗಳ ಸಂದರ್ಭದಲ್ಲಿ ರಜೆಯನ್ನು ಘೋಷಿಸಲಾಗುತ್ತದೆ. ಸಾಮಾನ್ಯವಾಗಿ ಭಾನುವಾರ, ಎರಡನೇ, ನಾಲ್ಕನೇ ಶನಿವಾರದಂದು ರಜಾ ದಿನಗಳನ್ನು ಘೋಷಿಸಲಾಗುತ್ತದೆ. ಆದ್ದರಿಂದ ಗ್ರಾಹಕರು ಕೂಡಾ ಬ್ಯಾಂಕ್ ರಜಾದಿನಗಳನ್ನು ಗಮನಿಸಿಕೊಂಡು, ತಮ್ಮ ಬ್ಯಾಂಕ್ ವಹಿವಾಟುಗಳನ್ನು ನಡೆಸಬೇಕು.

ಇದೀಗ ಫೆಬ್ರವರಿ ಮುಂದಿನ ವಾರದಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ ಇದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಎರಡು ದಿನ ರಜೆ!
ಭಾರತದಾದ್ಯಂತ ಬ್ಯಾಂಕ್‌ಗಳು ಮುಂದಿನವಾರ ಎರಡು ದಿನಗಳ ಕಾಲ ಮಾತ್ರ ಮುಚ್ಚಿರುತ್ತದೆ ಎನ್ನಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರಕಟಿಸಿರುವ ರಜಾ ಪಟ್ಟಿಯ ಪ್ರಕಾರ ಈ ರಜಾ ದಿನಗಳನ್ನು ಘೋಷಿಸಲಾಗುತ್ತದೆ. ಆರ್‌ಬಿಐ ಪ್ರಕಾರ, ಫೆಬ್ರವರಿ 28 (ಶನಿವಾರ) ಮತ್ತು ಮಾರ್ಚ್ 1 (ಭಾನುವಾರ) ಬ್ಯಾಂಕ್‌ಗಳು ಮುಚ್ಚಿರುತ್ತದೆ ಎಂದು ಹೇಳಲಾಗಿದೆ.
ಫೆಬ್ರವರಿ 28, 2026 (ಶನಿವಾರ), ಇಂದು ತಿಂಗಳ ನಾಲ್ಕನೇ ಶನಿವಾರ ಆಗಿದ್ದು, ದೇಶದಾದ್ಯಂತ ಬ್ಯಾಂಕ್ ರಜೆ ನೀಡಲಾಗಿರುತ್ತದೆ. ಇನ್ನು ಮಾರ್ಚ್ 1, ಇದು ಭಾನುವಾರವಾಗಿದ್ದು, ಸಾಮಾನ್ಯವಾಗಿ ವಾರಾಂತ್ಯದಲ್ಲಿ ನೀಡುವ ರಜೆಯಾಗಿದೆ. ಆದ್ದರಿಂದ ಈ ಎರಡು ದಿನ ಮಾತ್ರ ಮುಂದಿನ ವಾರ ರಜೆ ಇರಲಿದೆ.
ಫೆಬ್ರವರಿ 2026ರಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ:
ಫೆಬ್ರವರಿ 1: ಭಾನುವಾರ (ವಾರದ ರಜೆ)
ಫೆಬ್ರವರಿ 8: ಭಾನುವಾರ (ವಾರದ ರಜೆ)
ಫೆಬ್ರವರಿ 14: ಎರಡನೇ ಶನಿವಾರ
ಫೆಬ್ರವರಿ 15: ಮಹಾ ಶಿವರಾತ್ರಿ (ಆಯಾ ರಾಜ್ಯದ ಆಚರಣೆಗಳಿಗೆ ತಕ್ಕಂತೆ ರಜೆ ನೀಡಲಾಗುತ್ತದೆ. ಅಲ್ಲದೇ ಈ ದಿನ ಭಾನುವಾರವಾಗಿದೆ)
ಫೆಬ್ರವರಿ 18: ಲೋಸಾರ್ - ಸಿಕ್ಕಿಂ ರಾಜ್ಯಗಳಲ್ಲಿ ಮಾತ್ರ
ಫೆಬ್ರವರಿ 19: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ - ಮಹಾರಾಷ್ಟ್ರದ ಕೆಲವು ನಗರಗಳಲ್ಲಿ ರಜೆ.
ಫೆಬ್ರವರಿ 20: ಸ್ಟೇಡ್ ಡೇ (ಕೆಲವು ರಾಜ್ಯಗಳಲ್ಲಿ ಮಾತ್ರ)
ಫೆಬ್ರವರಿ 22: ಭಾನುವಾರ
ಫೆಬ್ರವರಿ 23: ಮುನ್ಸಿಪಲ್ ಚುನಾವಣೆ 2026 - ಬ್ಯಾಂಕ್ ರಜೆ ಇರಲಿದೆ.
ಫೆಬ್ರವರಿ 28: ನಾಲ್ಕನೇ ಶನಿವಾರ
ಆರ್‌ಬಿಐ ರಜಾ ಕ್ಯಾಲೆಂಡರ್‌ನಲ್ಲಿ ಒಟ್ಟು 9 ದಿನ ರಜೆ ಘೋಷಣೆ ಮಾಡಲಾಗಿದೆ. ಇದರಲ್ಲಿ ಬಹುತೇಕ ವೀಕೆಂಡ್‌ಗಳಿದ್ದು, ಕೆಲವು ದಿನಗಳಲ್ಲಿ ಮಾತ್ರ ಪ್ರಾದೇಶಿಕ ಹಬ್ಬಗಳು ಇರಲಿದೆ.
ಇನ್ನು ಬ್ಯಾಂಕ್‌ಗಳು ರಜಾ ಇದ್ದರೂ, ಆನ್‌ಲೈನ್ ಮೂಲಕ ವಹಿವಾಟು ನಡೆಸಬಹುದು. ಯುಪಿಐ ಮೂಲಕ ಪೇಮೆಂಟ್ ಮಾಡುವವರಿಗೆ, ಎಟಿಎಂ ಬಳಸುವವರು ದಿನದ 24 ಗಂಟೆಯೂ ಬ್ಯಾಂಕ್ ವಹಿವಾಟು ನಡೆಸಬಹುದು. ಆದರೆ ಯಾವುದೇ ಬ್ಯಾಂಕ್ ಸಂಬಂಧಿತ, ಪಾಸ್‌ಬುಕ್ ಸಂಬಂಧಿತ, ಚೆಕ್ ಸಂಬಂಧಿತ ಮಾಹಿತಿಗಾಗಿ ಬ್ಯಾಂಕ್‌ಗೆ ಹೋಗಲೇ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳಿಗೆ ರಜೆ ಇದ್ದರೆ ಯಾವುದೇ ಕೆಲಸಕಾರ್ಯಗಳು ಸಾಧ್ಯವಾಗುವುದಿಲ್ಲ. ಆದ್ದರಿಂದ ಬ್ಯಾಂಕ್ ರಜಾ ದಿನಗಳನ್ನು ಗಮನಿಸಿಕೊಂಡು, ಬ್ಯಾಂಕ್ ಕೆಲಸಗಳನ್ನು ಮಾಡಲು ಮುಂದಾಗಬೇಕು.
ಇನ್ನೇನು ಕೆಲವೇ ದಿನಗಳಲ್ಲಿ ಫೆಬ್ರವರಿ ತಿಂಗಳು ಮುಗಿಯಲಿದ್ದು, ಒದು ಕೊನೆಯ ವಾರವಾಗಿದೆ. ಆದ್ದರಿಂದ ಫೆಬ್ರವರಿಯ ಕೊನೆಯ ವಾರದಲ್ಲಿ ಕೇವಲ ಎರಡು ದಿನ ಮಾತ್ರ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
More From GoodReturns

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!



Click it and Unblock the Notifications